Advertisement

ಗಡ್ಕರಿ ಚುನಾವಣೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ

03:18 PM Jul 07, 2019 | Vishnu Das |

ನಾಗಪುರ: ನಾಗಪುರದಿಂದ ಲೋಕ ಸಭೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ಚುನಾವ ಣೆಯನ್ನು ಪ್ರಶ್ನಿಸಿ ಕಾಂಗ್ರೆಸ್‌ ಮುಖಂಡ ನಾನಾ ಪಟೋಲೆ ಅವರು ಶುಕ್ರವಾರ ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Advertisement

ಗಡ್ಕರಿ ಅವರ ಚುನಾವಣ ಪ್ರಕ್ರಿಯೆಯಲ್ಲಿ ಅಕ್ರಮವಾಗಿದೆ ಎಂದು ಪಟೋಲೆ ಆರೋಪಿಸಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಗಡ್ಕರಿ ಅವರು ತಮ್ಮ ಪ್ರತಿಸ್ಪರ್ಧಿ ಪಟೋಲೆ ಅವರನ್ನು 1.97 ಲಕ್ಷ ಮತಗಳಿಂದ ಸೋಲಿಸಿದ್ದರು. ಗಡ್ಕರಿ ಅವರ ಚುನಾವಣೆಯನ್ನು ಪ್ರಶ್ನಿಸಿ ಶುಕ್ರವಾರ ಹೈಕೋರ್ಟ್‌ನ ನಾಗಪುರ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಲಾಗಿದೆ ಎಂದು ಪಟೋಲೆ ಅವರ ಪರ ವಕೀಲ ವೈಭವ್‌ ಜಗ್ತಾಪ್‌ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ಪಟೋಲೆ ಅವರು, ಕಾನೂನಿನ ಪ್ರಕಾರ ರೂಪಿಸಲಾಗಿರುವ ಕಾರ್ಯವಿಧಾನಗಳನ್ನು ಚುನಾವಣ ಅಧಿಕಾರಿಗಳು ಅನುಸರಿಸಿಲ್ಲ ಎಂದು ಆರೋಪಿಸಿದ್ದಾರೆ.

ಈ ಅರ್ಜಿಯು ಭಾರತದ ಚುನಾವಣ ಆಯೋಗ, ಅದರ ಮುಖ್ಯ ಅಧಿಕಾರಿಗಳು ಮತ್ತು ನಿತಿನ್‌ ಗಡ್ಕರಿ ಅವರ ವಿರುದ್ಧವಾಗಿದೆ
ಎಂದು ಪಟೋಲೆ ಹೇಳಿದ್ದಾರೆ. ಚುನಾವಣೆಯ ಸಮಯದಲ್ಲಿ ಪಟೋಲೆ ಅವರು ಸ್ಟ್ರಾಂಗ್‌ ರೂಂಗಳಲ್ಲಿ ಇರಿಸಲಾಗಿದ್ದ ಎಲೆಕ್ಟ್ರಾನಿಕ್‌ ಮತದಾನ ಯಂತ್ರಗಳ ಸುತ್ತಲಿನ ಭದ್ರತೆಯನ್ನು ಪ್ರಶ್ನಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next