ಮೆಲ್ಬರ್ನ್: ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಕೇಪ್‌ಟೌನ್ ಟೆಸ್ಟ್ ಪಂದ್ಯದಲ್ಲಿ ಸಂಭವಿಸಿದ ಚೆಂಡು ವಿರೂಪ ಪ್ರಕರಣದ ಬಗ್ಗೆ ಆಸ್ಟ್ರೇಲಿಯದ ಆಟಗಾರ ಪೀಟರ್ ಹ್ಯಾಂಡ್ಸ್‌ಕಾಂಬ್ ಮೊದಲ ಸಲ ಗಂಭೀರವಾಗಿ ಮಾತಾಡಿದ್ದಾರೆ. ಇದರಲ್ಲಿ ತನ್ನ ಪಾತ್ರವೇನೂ ಇಲ್ಲ, ಇದಕ್ಕೆ ಸಂಬಂಧಿಸಿದ ವೀಡಿಯೋವನ್ನು ಎಡಿಟ್ ಮಾಡಿ ತಾನೂ ಈ ಪ್ರಕರಣದ ಪಾತ್ರಧಾರಿ ಎಂಬಂತೆ ಬಿಂಬಿಸಲಾಗಿದೆ ಎಂದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ವೀಡಿಯೋದಲ್ಲಿ ಹ್ಯಾಂಡ್ಸ್‌ಕಾಂಬ್ ಅವರು ಬ್ಯಾನ್‌ಕ್ರಾಫ್ಟ್ಗೆ ಏನೋ ಸೂಚನೆ ನೀಡುತ್ತಿರುವುದನ್ನು ಕಾಣಬಹುದಿತ್ತು. ಬ್ಯಾನ್‌ಕ್ರಾಫ್ಟ್ಗೆ ಈ ಸೂಚನೆ ನೀಡುವ ಮುನ್ನ, ಕೋಚ್ ಡ್ಯಾರನ್ ಲೇಹ್ಮನ್ ಜತೆ ಹ್ಯಾಂಡ್ಸ್ ಕಾಂಬ್ ವಾಕಿ-ಟಾಕಿಯಲ್ಲಿ ಮಾತಾಡುತ್ತಿರುವ ದೃಶ್ಯ ಕಂಡುಬಂದಿತ್ತು.
“ಮಾಧ್ಯಮಗಳು ಈ ವೀಡಿಯೋವನ್ನು ಅದೆಷ್ಟು ಚಾಲಾಕಿತನದಿಂದ ಎಡಿಟ್ ಮಾಡಿದ್ದಾರೆಂಬುದೇ ಒಂದು ಅಚ್ಚರಿ. ನಾನು ವಾಕಿ-ಟಾಕಿಯಲ್ಲಿ ಮಾತಾ ಡುತ್ತಿದ್ದ ದೃಶ್ಯದ ಬೆನ್ನಲ್ಲೇ ಬ್ಯಾನ್‌ಕ್ರಾಫ್ಟ್ ಅವರತ್ತ ಹೋಗುತ್ತಿರುವ ದೃಶ್ಯಾವಳಿ ಮೂಡಿಬಂದಿದೆ’ ಎಂದು ಹ್ಯಾಂಡ್ಸ್‌ಕಾಂಬ್ ಹೇಳಿದರು.
ಕೋಚ್ ಲೇಹ್ಮನ್ ಸೂಚನೆ !
ಆಗ ಬ್ಯಾನ್‌ಕ್ರಾಫ್ಟ್ ಸ್ಯಾಂಡ್‌ಪೇಪರ್‌ನಂತಿ ರುವ ವಸ್ತುವಿನಿಂದ ಚೆಂಡನ್ನು ಉಜ್ಜುತ್ತಿರು ವುದು, ಕೋಚ್ ಲೇಹ್ಮನ್ ಅವರು ಹ್ಯಾಂಡ್ಸ್‌ಕಾಂಬ್ ಮೂಲಕ ಬ್ಯಾನ್‌ಕ್ರಾಫ್ಟ್ಗೆ ಪ್ರಮುಖ ಸೂಚನೆಯೊಂದನ್ನು ನೀಡಿದ್ದು, ಬಳಿಕ ಹ್ಯಾಂಡ್ಸ್ ಕಾಂಬ್-ಬ್ಯಾನ್‌ಕ್ರಾಫ್ಟ್ ಸೇರಿ ನಗುತ್ತಿರುವ ದೃಶ್ಯವನ್ನು ಈ ವೀಡಿಯೋ ಒಳಗೊಂಡಿತ್ತು.
“ನಾನು ಬ್ಯಾನ್‌ಕ್ರಾಫ್ಟ್ ಪಕ್ಕ ಫೀಲ್ಡಿಂಗ್ ನಡೆಸುತ್ತಿದ್ದೆ. ಅವರೊಂದಿಗೆ ತಮಾಷೆ ಮಾಡಿ ನಕ್ಕಿದ್ದೆ. ಇದನ್ನು ಹೊರತುಪಡಿಸಿ ಬೇರೇನೂ ಸಂಭ ವಿಸಿರಲಿಲ್ಲ…’ ಎಂದಿದ್ದಾರೆ ಹ್ಯಾಂಡ್ಸ್‌ಕಾಂಬ್.