Advertisement

Valmiki scam: ಸತ್ಯ ಮುಚ್ಚಿಡಲು ಸಿದ್ದರಾಮಯ್ಯ ಯತ್ನ: ಛಲವಾದಿ

02:15 AM Oct 11, 2024 | Team Udayavani |

ಬೆಂಗಳೂರು: ರಾಜ್ಯದ ಕಾಂಗ್ರೆಸ್‌ ಸರಕಾರವು ಹಗರಣಗಳಲ್ಲಿ ಕ್ಲೀನ್‌ ಚಿಟ್‌ ಪಡೆಯಲು ಎಸ್‌ಐಟಿ ಹಾಗೂ ಸಿಐಡಿಯನ್ನು ನೇಮಿಸುತ್ತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

Advertisement

ಜಾರಿ ನಿರ್ದೇಶನಾಲಯ (ಇ.ಡಿ.) ಬರದೆ ಇದ್ದಲ್ಲಿ ವಾಲ್ಮೀಕಿ ನಿಗಮದ ಹಗರಣ ಮುಚ್ಚಿ ಹೋಗುತ್ತಿತ್ತು. ಸಿಬಿಐಗೆ ಹೋದಾಗ ಅದರಲ್ಲಿ ಹಣಕಾಸು ಅವ್ಯವಹಾರವಿದೆ ಎಂದು ಗೊತ್ತಾದಾಗ ಇ.ಡಿ. ತನಿಖೆ ನಡೆಯುತ್ತದೆ. 187 ಕೋಟಿ ಅವ್ಯವಹಾರ ನಡೆದಿರು ವು ದು ನಿಜ; ಆದರೆ ಕೇವಲ 87 ಕೋಟಿ ಅವ್ಯವಹಾರ ಆಗಿದೆ ಎಂದು ಮುಖ್ಯಮಂತ್ರಿಯವರು ಅಂದೇ ಹೇಳಿದ್ದರು. ಸತ್ಯ ಒಪ್ಪಿಕೊಂಡ ಮೇಲೆ ಕ್ರಮ ಆಗಿರಲಿಲ್ಲ. ಕದ್ದ ಮಾಲು ವಾಪಸ್‌ ಕೊಟ್ಟರೆ ಕೇಸ್‌ ಖುಲಾಸೆ ಆಗುತ್ತದೆಯೇ? ಎಂದು ಪ್ರಶ್ನಿಸಿದರು.

ಇದರಲ್ಲಿ 20 ಕೋಟಿ ರೂ.ಗಳನ್ನು ತುಕಾರಾಂ ಅವರ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಸಿದ್ದಾರೆ. ನಾಗೇಂದ್ರರ ವೈಯಕ್ತಿಕ ವೆಚ್ಚವಾಗಿ ಹಣ ಖರ್ಚಾದುದರ ಕುರಿತು ಇ.ಡಿ. ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

ಮುಖ್ಯಮಂತ್ರಿಗೆ ಕಿಂಚಿತ್ತಾದರೂ ಆತ್ಮಗೌರವ, ಪ್ರಜಾಪ್ರಭುತ್ವದಲ್ಲಿ ನಂಬಿಕೆ, ಸಂವಿಧಾನದ ಬಗ್ಗೆ ಗೌರವ ಇದ್ದರೆ ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಡಬೇಕಿತ್ತು. ಮುಡಾ ಮಾದರಿಯಲ್ಲೇ ವಾಲ್ಮೀಕಿ ನಿಗಮದ ಹಗರಣದ ಸತ್ಯಾಂಶವನ್ನು ಮುಚ್ಚಿಡುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದರು.

ಕೆಆರ್‌ಡಿಎಲ್‌ ಹಣ
ತೆಲಂಗಾಣ ಚುನಾವಣೆಗೆ
ಕೆಆರ್‌ಡಿಎಲ್‌ (ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ಕಾಮಗಾರಿಯಲ್ಲಿ ಭಾರೀ ಅವ್ಯವಹಾರ ಆಗಿದ್ದು ತೆಲಂಗಾಣ ಚುನಾವಣೆಗೆ ಆ ಹಣವನ್ನು ಬಳಸಿಕೊಂಡ ಆರೋಪವಿದೆ. ಇದನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

Advertisement

ಪ್ರಿಯಾಂಕ್‌ ಖರ್ಗೆ ಮತ್ತು ಅಜಯ್‌ ಸಿಂಗ್‌ ಇದನ್ನು ಮಾಡುತ್ತಿದ್ದು ನನಗೆ ಬಂದ ಮಾಹಿತಿ ಪ್ರಕಾರ ಇವರಿಬ್ಬರು ಸೇರಿ ಬಿಡುಗಡೆಯಾದ ಹಣದಲ್ಲಿ ಶೇ. 40 ಕಮಿಷನ್‌ ತೆಗೆದುಕೊಂಡಿದ್ದಾರೆ. ತೆಲಂಗಾಣ ಚುನಾವಣೆಗೆ ಸುಮಾರು 500 ಕೋಟಿ ರೂ. ಕೊಟ್ಟ ಆಪಾದನೆ ಕೇಳಿಬಂದಿದೆ. ಅಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದ ಹಣವನ್ನು ಕೂಡ ಇದೇ ರೀತಿ ನುಂಗಲಾಗಿದೆ ಎಂದು ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next