Advertisement
ಮತ್ತೊಬ್ಬ ಮಾಜಿ ಆಯುಕ್ತ ದಿನೇಶ್ ಕುಮಾರ್ ನಾಪತ್ತೆಯಾಗಿದ್ದು, ಅವರಿ ಗಾಗಿ ಶೋಧ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.ಪ್ರಕರಣ ಸಂಬಂಧ ಇ.ಡಿ. ಅಧಿಕಾರಿಗಳು ಸೋಮ ವಾರ ಮುಡಾ ಮಾಜಿ ಅಧಿಕಾರಿ ನಟೇಶ್, ಬಾಣಸ ವಾಡಿಯ ದಿನೇಶ್ ಕುಮಾರ್ ಅವರ ಫ್ಲ್ಯಾಟ್ ಹಾಗೂ ಬಿಲ್ಡರ್ ಮಂಜುನಾಥ್ ಮನೆ ಮತ್ತು ಕಚೇರಿ ಮೇಲೆ ದಾಳಿ ನಡೆಸಿ ತಡರಾತ್ರಿಯ ವರೆಗೂ ಶೋಧಿಸಿ ದಾಖಲೆ ಜಪ್ತಿ ಮಾಡಿದ್ದರು.
ಈ ಮಧ್ಯೆ ಮುಡಾ ಮಾಜಿ ಆಯುಕ್ತ ನಟೇಶ್ ಮನೆಯಲ್ಲಿ ಸುಮಾರು 30 ತಾಸುಗಳಿಗೂ ಹೆಚ್ಚು ಕಾಲ ಶೋಧಿಸಿದ ಅಧಿಕಾರಿಗಳು ಸೋಮವಾರ ರಾತ್ರಿಯೇ ಎರಡು ಬ್ಯಾಗ್‌ಗಳಲ್ಲಿ ದಾಖಲೆಗಳನ್ನು ಕೊಂಡೊಯ್ದರು. ಅನಂತರವೂ ತಪಾಸಣೆ ಮುಂದುವರಿಸಿ ಮಂಗಳವಾರ ಸಂಜೆ ವೇಳೆಗೆ ಮತ್ತೆ ಎರಡು ಬ್ಯಾಗ್‌ಗಳಷ್ಟು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ನಟೇಶ್ ಅವರನ್ನು ಸ್ಥಳದಲ್ಲೇ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ ನಟೇಶ್, “ನಾನು ಯಾವುದೇ ತಪ್ಪು ಮಾಡಿಲ್ಲ. ಸರಕಾರದ ಆದೇಶ/ಸೂಚನೆ ಮೇರೆಗೆ ಕರ್ತವ್ಯ ನಿರ್ವಹಿಸಿದ್ದೇನೆ’ ಎಂದಷ್ಟೇ ಹೇಳಿದ್ದಾರೆ. ಹೀಗಾಗಿ ರಾತ್ರಿ 8 ಗಂಟೆ ಸುಮಾರಿಗೆ ಅವರನ್ನು ವಶಕ್ಕೆ ಪಡೆದ ಇ.ಡಿ. ಅಧಿಕಾರಿಗಳು ಶಾಂತಿನಗರದ ಇ.ಡಿ. ಕಚೇರಿಗೆ ಕರೆದೊಯ್ದಿದ್ದಾರೆ. ಇನ್ನಷ್ಟು ವಿಚಾರಣೆಗೆ ಒಳಪಡಿಸಿ ನೋಟಿಸ್ ನೀಡಿ ಕಳುಹಿಸಿದ್ದಾರೆ. ನಟೇಶ್ ಮುಡಾ ಆಯುಕ್ತರಾಗಿದ್ದ ಸಮಯದಲ್ಲಿ 50:50 ಅನುಪಾತದಲ್ಲಿ 928 ನಿವೇಶಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದರು ಎಂಬ ಆರೋಪ ಇದೆ.
Related Articles
ಮುಡಾದ ಮತ್ತೊಬ್ಬ ಮಾಜಿ ಆಯುಕ್ತ ದಿನೇಶ್ ಕುಮಾರ್ ಸೋಮವಾರ ಇ.ಡಿ. ದಾಳಿ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದರು. ಇದುವರೆಗೆ ಅವರ ಸುಳಿವು ಸಿಕ್ಕಿಲ್ಲ. ತಾಂತ್ರಿಕ ತನಿಖೆ ಮೂಲಕ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಇಡಿ ಮೂಲಗಳು ತಿಳಿಸಿವೆ.
Advertisement
ದಂಗಾದ ಇ.ಡಿ. ಅಧಿಕಾರಿಗಳುಮುಡಾ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಇ.ಡಿ. ದಾಳಿ ಮಂಗಳವಾರವೂ ಮುಂದುವರಿದಿದೆ. ಸೋಮವಾರ ಬೆಳಗ್ಗೆ 8 ಗಂಟೆಗೆ ಐವರು ಇ.ಡಿ. ಅಧಿಕಾರಿಗಳ ತಂಡ ಹಿನಕಲ್ ನಲ್ಲಿರುವ ಜಿ.ಪಂ. ಮಾಜಿ ಸದಸ್ಯ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಕೇಶ್ ಪಾಪಣ್ಣ ಅವರ ನಿವಾ ಸದ ಮೇಲೆ ದಾಳಿ ನಡೆಸಿ ಮಂಗಳವಾರ ಸಂಜೆ ತನಿಖೆ ಅಂತ್ಯಗೊಳಿಸಿದ್ದಾರೆ. ಸತತ 32 ತಾಸುಗಳ ಕಾಲ ರಾಕೇಶ್ ಪಾಪಣ್ಣ ಅವರ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಮಂಗಳವಾರ ಸಂಜೆ 6 ಗಂಟೆಗೆ ವಿಚಾರಣೆ ಮುಗಿಸಿ ತೆರಳಿದ್ದಾರೆ. ಮೈಸೂರಿನ ಎಂಎಂಜಿ ಕನ್‌ಸ್ಟ್ರಕ್ಷನ್ ಕಚೇರಿಯ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ವಿಜಯ ಬ್ಯಾಂಕ್ ವೃತ್ತದಲ್ಲಿರುವ ಎಂಎಂಜಿ ಕನ್‌ಸ್ಟ್ರಕ್ಷನ್ ಮಾಲಕ ಜಯರಾಮ್ ಮಾಲಕತ್ವದ ಕಚೇರಿ ಹಾಗೂ ಶ್ರೀರಾಂಪುರದಲ್ಲಿರುವ ಮನೆಯ ಮೇಲೆ ದಾಳಿ ಸೋಮವಾರ ತಡ ರಾತ್ರಿ ದಾಳಿ ನಡೆಸಿದ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ. ಜಯ ರಾಮ್ ಕಚೇರಿ ಮತ್ತು ಮನೆ ಮೇಲೆ ದಾಳಿ ವೇಳೆ ಇ.ಡಿ. ಅಧಿಕಾರಿಗಳೇ ದಂಗಾಗಿದ್ದು, ಹತ್ತು ವರ್ಷಗಳ ಹಿಂದೆ ಗಾರೆ ಕೆಲಸಕ್ಕೆಂದು ಬಂದಿದ್ದ ಜಯರಾಮ… ಈಗ ಹತ್ತಾರು ಕೋಟಿ ರೂ. ಒಡೆಯನಾಗಿದ್ದಾನೆ ಎಂಬ ಆಘಾತಕಾರಿ ಸಂಗತಿ ಬಹಿರಂಗ ಗೊಂಡಿದೆ. ಗಾರೆ ಕೆಲಸ ಮಾಡುತ್ತಲೇ ಗುತ್ತಿಗೆದಾರರನ್ನು ಪರಿಚಯ ಮಾಡಿಕೊಂಡ ಜಯರಾಮ…, ದಿನ ಕಳೆದಂತೆ ಮುಡಾ ಅಧಿಕಾರಿಗಳೊಂದಿಗೆ ಸಖ್ಯ ಬೆಳೆಸಿ ಮಾಜಿ ಆಯುಕ್ತರಾದ ಡಿ.ಬಿ. ನಟೇಶ್, ಜಿ.ಟಿ. ದಿನೇಶ್ ಕುಮಾರ್ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಮೈಸೂರಿನಲ್ಲಿ ಮತ್ತೊಬ್ಬ
ಬಿಲ್ಡರ್ ಮನೆ ಮೇಲೆ ದಾಳಿ
ಮೈಸೂರಿನ ಎಂಎಂಜಿ ಕನ್‌ಸ್ಟ್ರಕ್ಷನ್ ಕಚೇರಿಯ ಮೇಲೆ ದಾಳಿ ನಡೆಸಿದ ಇ.ಡಿ. ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಂಎಂಜಿ ಕನ್ಸ್‌ಸ್ಟ್ರಕ್ಷನ್ ಮಾಲಕ ಜಯರಾಮ್ ಅವರ ಕಚೇರಿ, ಮನೆ ಮೇಲೆ ಹತ್ತಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿ ದಾಖಲೆಗಳನ್ನು ಕೂಲಂಕಷ ಪರಿಶೀಲನೆಗೆ ಒಳಪಡಿಸಿದ್ದಾರೆ.