Advertisement
ಶಿವಮೊಗ್ಗ ನಗರದಲ್ಲಿ ಸಮನ್ವಯ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ಸಮನ್ವಯ ಟ್ರಸ್ಟ್ ಕಾರ್ಯನಿರ್ವಾಹಕ ನಿರ್ದೇಶಕ ಸಮನ್ವಯ ಕಾಶಿ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ಅಭ್ಯರ್ಥಿಗಳು ಮನೋಸಾಮಾರ್ಥ್ಯ ವೃದ್ಧಿಸಿಕೊಳ್ಳುವತ್ತ ಗಮನಹರಿಸಬೇಕು. ನಾವು ಸಾ ಧಿಸುವ ಗುರಿಯ ಮಾರ್ಗವನ್ನು ಹಂತ ಹಂತವಾಗಿ ಸಾಗುವ ಬಗ್ಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಧನಾತ್ಮಕ ಆಲೋಚನೆಗಳೇ ನಮ್ಮ ಶಕ್ತಿ. ಒಳ್ಳೆಯ ಅಲೋಚನೆಗಳನ್ನು ಯೋಜಿಸುತ್ತ ಅನುಷ್ಠಾನಗೊಳಿಸಿ ಯಶಸ್ಸು ಸಾಧಿಸಬೇಕು ಎಂದರು.
ಸಮನ್ವಯ ಟ್ರಸ್ಟ್ ನಿರಂತರವಾಗಿ ಸಮಾಜಮುಖೀ ಮತ್ತು ಸೇವಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು. ಸಮನ್ವಯಟ್ರಸ್ಟ್ ಸ್ಥಾಪಕ ಸದಸ್ಯೆ ಸ್ಮಿತಾ, ಟ್ರಸ್ಟಿ ನಿತ್ಯಾ ಎಚ್.ಆರ್., ಪ್ರಮುಖರಾದ ವಿಜಯಕುಮಾರ್, ವಿಸ್ಮಯ, ಶರತ್, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.