Advertisement

ಸಂಶೋಧನೆಯಲ್ಲಿ ಪರಿಶ್ರಮ ಮುಖ್ಯ: ಡಾ|ವಿಶ್ವನಾಥ್‌ ಕಾರ್ನಾಡ್‌

11:25 AM Apr 01, 2021 | Team Udayavani |

ಮುಂಬಯಿ: ಸಂಶೋಧನೆ ಕಠಿನ ಕಾರ್ಯವಾಗಿದ್ದು, ಇಲ್ಲಿ ಯಶಸ್ಸು ಸುಲಭದಲ್ಲಿ ದಕ್ಕದು. ಸಂಶೋಧನೆಯಲ್ಲಿ ನಿರತರಾದವರು ಸದಾ ಕುತೂಹಲಿಗಳಾಗಿರಬೇಕು. ಯಾರು ಹೆಚ್ಚು ಪರಿಶ್ರಮ ಪಡುತ್ತಾರೋ ಅವರು ಒಳ್ಳೆಯ ಶೋಧ ಗ್ರಂಥಗಳನ್ನು ರಚಿಸಬಲ್ಲರು ಎಂದು ಹಿರಿಯ ಸಾಹಿತಿ, ಸಂಶೋಧಕ ಡಾ| ವಿಶ್ವನಾಥ್‌ ಕಾರ್ನಾಡ್‌ ಅಭಿಪ್ರಾಯಪಟ್ಟರು.

Advertisement

ಮಾ. 30ರಂದು ಕನ್ನಡ ವಿಭಾಗ ಆಯೋಜಿಸಿದ್ದ ಸಂಶೋಧನ ಮಂಡಳಿ ಸಭೆಯಲ್ಲಿ ವಿಶೇಷ ತಜ್ಞರಾಗಿ ಪಾಲ್ಗೊಂಡು ಮಾತನಾಡಿ, ಕುತೂಹಲ, ಆಸಕ್ತಿಯಿಂದ ಮುಂದುವರಿದರೆ ಗುರಿ ಮುಟ್ಟಲು ಸಾಧ್ಯ. ಕನ್ನಡ ವಿಭಾಗದಲ್ಲಿ ಈಗ ಸಂಶೋಧನೆಯಲ್ಲಿ ತೊಡಗಿ ಕೊಳ್ಳುವವರ ಸಂಖ್ಯೆ ಹೆಚ್ಚಿದೆ. ವಿಭಾಗದ ವಿದ್ಯಾರ್ಥಿಗಳಿಂದ ಒಳ್ಳೆಯ ಶೋಧ ಕೃತಿಗಳು ಬರುತ್ತಿರುವುದು ಸಂತೋಷದ ಸಂಗತಿ ಎಂದು ಶುಭ ಹಾರೈಸಿದರು.
ಇದೇ ಸಂದರ್ಭ ಜಯ ಸಾಲ್ಯಾನ್‌ ಅವರು “ಮುಂಬಯಿಯಲ್ಲಿ ಬೆಳಗಿದ ಕರ್ನಾಟಕ ಮೂಲದ ಕಲಾವಿದರು’ ಎಂಬ ತಮ್ಮ ಸಂಶೋಧನ ಯೋಜನೆಯ ಉದ್ದೇಶಗಳನ್ನು ವಿವರಿಸಿದರು. ಸುರೇಖಾ ದೇವಾಡಿಗ ಅವರು ತಮ್ಮ ಸಂಶೋಧನೆಯ ರೂಪುರೇಷೆಯನ್ನು ಸಭೆಯ ಮುಂದೆ ಪ್ರಸ್ತುತಪಡಿಸಿದರು.

ಮಾರ್ಗದರ್ಶಕ ಹಾಗೂ ಕನ್ನಡ ಸಂಶೋಧನ ಮಂಡಳಿಯ ಅಧ್ಯಕ್ಷ ಡಾ| ಜಿ. ಎನ್‌. ಉಪಾಧ್ಯ ಮಾತನಾಡಿ, ವಿಭಾಗದ ವಿದ್ಯಾರ್ಥಿ ಗಳು ಬಹುಶಿಸ್ತೀಯ, ಅಂತರ ಶಿಸ್ತೀಯ ಸಂಶೋಧನೆಯಲ್ಲಿ ತೊಡ ಗಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಸಾಹಿತ್ಯದ ಜತೆಗೆ ಚಿತ್ರಕಲೆ, ಸಂಗೀತ ಮೊದಲಾದ ವಿಷಯ ಗಳತ್ತಲೂ ವಿದ್ಯಾರ್ಥಿಗಳ ಒಲವು ಹೆಚ್ಚುತ್ತಿರುವುದು ಆಶಾದಾಯಕ ಸಂಗತಿ. ಜಯ ಸಾಲ್ಯಾನ್‌ ಅವರ ಅಧ್ಯಯನ ನಮ್ಮ ನಿರೀಕ್ಷೆ ಯನ್ನು ಹೆಚ್ಚಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ಸಂದರ್ಭ ದುರ್ಗಪ್ಪ ಕೋಟಿಯವರ್‌ ಮಂಡಿಸಿದ ಮುಂಬಯಿ ಕನ್ನಡ ಗದ್ಯ ಸಾಹಿತ್ಯ ಮಹಾಪ್ರಬಂಧದ ಕುರಿತು ಸಭೆ ವಿಚಾರ ವಿಮರ್ಶೆ ನಡೆಸಿತು. ಈ ಬಾರಿಯ ಸಂಶೋಧನ ಅರ್ಹತ ಪರೀಕ್ಷೆಯಲ್ಲಿ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿರುವುದಕ್ಕೆ ಸಭೆಯಲ್ಲಿ ಮೆಚ್ಚುಗೆ ವ್ಯಕ್ತವಾಯಿತು. ವಿಭಾಗದ ಸಹ ಪ್ರಾಧ್ಯಾಪಕರಾದ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಕಾರ್ಯಕ್ರಮವನ್ನು ನಿರ್ವಹಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next