ಉಡುಪಿ: ಪೆರ್ಣಂಕಿಲ ಶ್ರೀ ಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇಗುಲದ ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಪ್ರಯುಕ್ತ ಖ್ಯಾತ ಡ್ರಮ್ ವಾದಕ ಆನಂದನ್ ಶಿವಮಣಿ, ಮ್ಯಾಂಡೋಲಿನ್ ವಾದಕ ಯು. ರಾಜೇಶ ಚೆನ್ನೈ ಅವರಿಂದ ಸೋಮವಾರ ನಡೆದ
ಸಂಗೀತ ಜುಗಲ್‌ಬಂದಿ ಕಾರ್ಯಕ್ರಮ ವನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಚಾಲನೆ
ನೀಡಿದರು.
ಅನಂತರ ಶ್ರೀಪಾದರು ಕಲಾವಿದರನ್ನು ಸಮ್ಮಾನಿಸಿದರು. ಧಾರ್ಮಿಕ ಕಾರ್ಯಕ್ರಮವಾಗಿ ಪುಣ್ಯಾಹವಾಚನ, ಗಣಪತಿಯಾಗ, ಶ್ರೀ
ಮಹಾಲಿಂಗೇಶ್ವರ ದೇವರ ಸಾನ್ನಿಧ್ಯದಲ್ಲಿ ಪ್ರಾಯಶ್ಚಿತ್ತ ಹೋಮಗಳು, ಚಂಡಿಕಾಯಾಗ, ನೂತನ ಧ್ವಜ ಪ್ರತಿಷ್ಠೆ, ಕಲಶಾಭಿಷೇಕ,
ಶ್ರೀ ಚಕ್ರಮಂಡಲ ರಚನೆ, ಮಹಾಪೂಜೆ, ಅನ್ನಸಂತರ್ಪಣೆ, ಶ್ರೀ ನಾಗದೇವರ ಸಾನ್ನಿಧ್ಯದಲ್ಲಿ ಆಶ್ಲೇಷಾ ಬಲಿ, ಚಂದ್ರಮಂಡಲ
ರಥದಲ್ಲಿ ವಾಸ್ತುವಿಧಾನ, ರಥಕಲಶ ಅಧಿವಾಸ, ಅಧಿವಾಸ ಹೋಮ, ಕಲಶಾಭಿಷೇಕ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಿ| ಹರಿದಾಸ ಭಟ್ ಅಧ್ಯಕ್ಷತೆ ವಹಿಸಿದ್ದರು. ಪೇಜಾವರ ಮಠದ ದಿವಾನ ಎಂ.ರಘುರಾಮ ಆಚಾರ್ಯ, ಕಾರ್ಯನಿರ್ವಹಣಾಧಿಕಾರಿ ಸುಬ್ರಹ್ಮಣ್ಯ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಶ್ರೀಶ ನಾಯಕ್, ಸಂಘಟನ ಕಾರ್ಯದರ್ಶಿ ಸದಾನಂದ ಪ್ರಭು, ಉಪಾಧ್ಯಕ್ಷ ಶ್ರೀಕಾಂತ್ ನಾಯಕ್ ಅಲೆವೂರು, ಸಲಹೆಗಾರ ಸತೀಶ್ ಪೂಜಾರಿ ಪೆಲತ್ತೂರು ಉಪಸ್ಥಿತರಿದ್ದರು. ಕಾರ್ಯದರ್ಶಿ ಉಮೇಶ್ ನಾಯಕ್ ನಿರೂಪಿಸಿದರು.