Advertisement

ಮಾಸ್ಕ್ ಗಳ ರಫ್ತಿಗೆ ಅನುಮತಿ ಕೊಡಿ: ಸರ್ಕಾರಕ್ಕೆ ಮನವಿ

07:56 PM Jun 07, 2020 | Sriram |

ನವದೆಹಲಿ: ದೇಶದಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾಸ್ಕ್ ಗಳು ಮಾರಾಟವಾಗದೆ ಉಳಿದಿವೆ. ಎನ್‌-95 ಬಿಟ್ಟು ಬೇರೆ ಮಾದರಿ ಮಾಸ್ಕ್ ಗಳನ್ನು ವಿದೇಶಗಳಿಗೆ ರಫ್ತು ಮಾಡಲು ಅನುಮತಿ ನೀಡುವಂತೆ ವೈದ್ಯಕೀಯ ಪರಿಕರಗಳ ಉದ್ಯಮ ಕೇಂದ್ರ ಸರ್ಕಾರವನ್ನು ಕೋರಿದೆ.

Advertisement

ಕೋವಿಡ್-19 ಹಿನ್ನೆಲೆಯಲ್ಲಿ ದೇಶಾದ್ಯಂತ ಮಾಸ್ಕ್ ಗಳ ಉತ್ಪಾದನೆಗೆ ವೇಗ ಸಿಕ್ಕಿದ್ದು, ಹೊಸ ಕಂಪನಿಗಳು ಸಹ ಹುಟ್ಟಿಕೊಂಡಿವೆ. ಪರಿಣಾಮ ದೇಶದ ಜನರಿಗೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮಾಸ್ಕ್ ಗಳನ್ನು ಉತ್ಪಾದಿಸಲಾಗಿದೆ. ಹೀಗಾಗಿ 15 ದಿನಗಳಿಂದ ಉತ್ಪಾದನೆ ಸ್ಥಗಿತಗೊಳಿಸಿದ್ದು, ಹಾಲಿ ದಾಸ್ತಾನು ಇರುವ ಉತ್ಪನ್ನಗಳನ್ನು ವಿದೇಶಗಳಿಗೆ ಕಳುಹಿಸಿಕೊಟ್ಟರೆ ಮತ್ತೊಮ್ಮೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನೆ ಆರಂಭಿಸಲು ಅನುಕೂಲವಾಗಲಿದೆ ಎಂದು ಉದ್ಯಮ ಮನವಿ ಮಾಡಿದೆ.

ದೇಶದಲ್ಲಿ ಮಾಸ್ಕ್ ಗಳಿಗೆ ಕೊರತೆ ಆಗದಿರಲಿ ಎಂಬ ಕಾರಣಕ್ಕೆ ಎಲ್ಲ ವಿಧದ ಮಾಸ್ಕ್ ಗಳ ರಫ್ತು ನಿಷೇಧಿಸಿ ಮಾರ್ಚ್‌ನಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, ಕಳೆದ ತಿಂಗಳು ಹತ್ತಿ, ರೇಷ್ಮೆ, ಉಣ್ಣೆ ಮತ್ತು ನೇಯ್ದ ಬಟ್ಟೆಯಿಂದ ತಯಾರಿಸಿದ ಮಾಸ್ಕ್ ಗಳ ಮೇಲಿನ ರಫ್ತು ನಿರ್ಬಂಧ ಹಿಂಪಡೆದಿತ್ತು.

 

Advertisement

Udayavani is now on Telegram. Click here to join our channel and stay updated with the latest news.

Next