ಶಿರಸಿ: ಪ್ರತೀ ವರ್ಷ ಮಳೆ ನೀರಿನ ಸಮಸ್ಯೆ ಇದ್ದರೆ, ಗುಡ್ಡ ಕುಸಿತ ಆತಂಕ ಇದ್ದರೆ ಅವರಿಗೆ ಶಾಶ್ವತ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಆದೇಶಿಸಿದರು.
ಬುಧವಾರ ನಗರದಲ್ಲಿ ಪ್ರಗತಿ ಪರಿಶಿಲನೆ ನಡೆಸಿ ಮಾತನಾಡಿ ಅವರು, ಯಾವುದೇ ಕಾರಣಕ್ಕೆ ಕಾಳಜಿ ಕೇಂದ್ರ ಮುಂದಿನ ಮಳೆಗಾಲದಲ್ಲಿ ಮತ್ತೆ ನೀರು ಬಂತು, ನೀರು ಇಳಿಯುವ ತನಕ ಮನೆ ಬಿಡಬೇಕು ಎದುರಾಗದಂತೆ ನೋಡಿಕೊಳ್ಳಬೇಕು.ನಿನ್ನೆ ಹೊನ್ನಾವರದಲ್ಲಿ 60 ದಾಟಿದ ಮಹಿಳೆಯರು ನೋವು ತೋಡಿಕೊಂಡಿದ್ದು ನನಗೂ ನೋವಾಗಿ ಕಾಡಿದೆ. ನಾವಾದರೂ ಜನರ ಸಮಸ್ಯೆ ಇತ್ಯರ್ಥ ಮಾಡಬೇಕು. ಈ ಸಮಸ್ಯೆ ಜೀವಂತ ಇಡಬಾರದು. ಮುಂದಿನ ಮಳೆಗಾಲದಲ್ಲಿ ನೀರು ಬಂತು, ಮನೆ ಹತ್ತಿರ ಗುಡ್ಡ ಜರಿತು ಆಗದೇ ಶಾಶ್ವತ ಪರಿಹಾರ ಕೊಡಿಸಬೇಕು ಎಂದರು.
ಇದಕ್ಕಾಗಿ ಶಾಸಕರ ಮಾರ್ಗದರ್ಶನದಲ್ಲಿ, ತಹಸೀಲ್ದಾರರು, ಎಸಿ ಜೊತೆಯಾಗಿ ಕಂದಾಯ ಭೂಮಿ ಅಥವಾ ಜಾಗ ಖರೀದಿ ಮಾಡಿ. ಜಿಪಿಎಸ್ ಆದ ಅರಣ್ಯ ಅತಿಕ್ರಮಣದಾರರಿಗೆ ಕೂಡ ಮನೆ ಕೊಡುತ್ತೇವೆ ಎಂದರು.
ಸಾಮಾನ್ಯ ಜನತೆಗೆ, ಬಡವರಿಗೆ ಸಹಾಯ ಮಾಡಿದರೆ ಅದೇ ಒಳ್ಳೆಯ ಕೆಲಸ. ಯಾವುದೇ ರೀತಿಯಲ್ಲೂ ದೂರು ಬರದಂತೆ ನೋಡಿಕೊಳ್ಳಬೇಕು . ಸಾಮಾನ್ಯ ಜನರು, ಬಡವರಿಂದ ಸಮಸ್ಯೆಗಳು ಬಾರದೇ ಇದ್ದರೆ ಆಯಿತು. ಅದಕ್ಕೆ ಸಮಸ್ಯೆ ಇಲ್ಲ. ಜನರ ಸಮಸ್ಯೆ ಈಡೇರಿಸಲು ಒಂದಾಗಿ ಕೆಲಸ ಮಾಡಬೇಕು.
25ರಿಂದ 50 ಲ.ರೂ. ಪ್ರತಿ ತಹಸೀಲ್ದಾರರ ಖಾತೆಯಲ್ಲಿ ಇದೆ. ಶಿರಸಿಗೆ ಬರಲು ವಿಳಂಬ ಆಗಿದೆ. ಆದರೆ ನಿರ್ಲಕ್ಷ್ಯ ಇಲ್ಲ. ಇಲ್ಲಿನ ಸಮಸ್ಯೆ ಕಾರವಾರದಲ್ಲಿ ಚರ್ಚೆ ಮಾಡಿದ್ದೇವೆ ಎಂದ ಅವರು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ ಅಭಿಯಂತರರು ನಿರ್ಲಕ್ಷ್ಯ ಮಾಡಿದ್ದೇ ಕುಮಟಾ ಶಿರಸಿ, ಶಿರಸಿ ಹಾವೇರಿ ರಸ್ತೆ ಸಮಸ್ಯೆಗೆ ಕಾರಣ ಎಂದೂ ವಾಗ್ದಾಳಿ ನಡೆಸಿದರು.
ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಸಹಾಯಕ ಆಯುಕ್ತ ಆರ್.ದೇವರಾಜ, ತಹಸೀಲ್ದಾರರಾದ ಶ್ರೀಧರ ಮುಂದಲಮನಿ, ಶ್ರೀಕೃಷ್ಣ ಕಾಮಕರ, ಮಂಜುನಾಥ ಮನವಳ್ಳಿ ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು