Advertisement
ಅವರು ರವಿವಾರ ನಗರದ ಬೆಂದೂರಿನ ಸೈಂಟ್ ಆ್ಯಗ್ನೆಸ್ ಸ್ಪೆಷಲ್ ಸ್ಕೂಲ್ ಆವರಣದಲ್ಲಿ ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ನೇತೃತ್ವದಲ್ಲಿ ಕೆಥೋಲಿಕ್ ಸಭಾ ಉಡುಪಿ ಪ್ರದೇಶ್ ಮತ್ತು ಮಂಗಳೂರು ಧರ್ಮ ಪ್ರಾಂತದ ಮಹಿಳಾಮಂಡಳಿಯ ಸಹಯೋಗದಲ್ಲಿ “ಪ್ರಗತಿಪರ ಸಮಾಜಕ್ಕಾಗಿ ಕೆನರಾ ಕೆಥೋಲಿಕ್ ಸ್ತ್ರೀಯರ ನಾಯಕತ್ವ’ ಎಂಬ ಧ್ಯೇಯದಡಿ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಗೂ ಕಾಸರಗೋಡು ತಾಲೂಕನ್ನು ಒಳಗೊಂಡ ಕೆನರಾ ಪ್ರದೇಶದ ಕೆಥೋಲಿಕ್ ಮಹಿಳೆಯರ ಬೃಹತ್ ಸಮಾವೇಶದ ಅಧ್ಯಕ್ಷತೆ ವಹಿಸಿ ಮಾತನಾಡಿದರು. “ಕೆಥೋಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ’ ಸ್ವೀಕರಿಸಿದ 10 ಮಂದಿ ಮಹಿಳೆಯರನ್ನು ಅಭಿನಂದಿಸಿದರು.
ಸಮಾಜ ಸೇವಾ ಕಾರ್ಯಕರ್ತರಾದ ಕೆಪಿಸಿಸಿ ಕಾರ್ಯದರ್ಶಿ ವೆರೊನಿಕಾ ಕರ್ನೆಲಿಯೊ ದಿಕ್ಸೂಚಿ ಭಾಷಣ ಮಾಡಿದರು. ಕ್ರೈಸ್ತ ಸಮುದಾಯದಲ್ಲಿ ಮಹಿಳೆಯರಿಗೆ ಸಮಾನ ಗೌರವವಿದ್ದು, ಎಲ್ಲರಂಗಗಳಲ್ಲೂ ಅತ್ಯುತ್ತಮ ನಾಯಕತ್ವ ವಹಿಸುತ್ತಿದ್ದಾರೆ. ತಮ್ಮ ಸೇವೆಯ ಮೂಲಕ ಉತ್ತಮ ಕುಟುಂಬಗಳನ್ನು ಕಟ್ಟುತ್ತಿದ್ದು, ಜತೆಗೆ ಸಮಾಜದ ಮುಖ್ಯವಾಹಿನಿಯಲ್ಲಿ, ಸ್ವಸಹಾಯ ಸಹಕಾರಿ ರಂಗದಲ್ಲೂ ಪ್ರಭಾವಿ ನಾಯಕತ್ವವನ್ನು ವಹಿಸಿ ಕೊಳ್ಳ ಬೇಕಾಗಿದೆ ಎಂದು ಹೇಳಿದರು.
Related Articles
Advertisement
ಕೃತಿ ಬಿಡುಗಡೆ: ಪ್ರೊ| ಸ್ಟೀವನ್ ಕ್ವಾಡ್ರಸ್ ಅವರು ಬರೆದ “ಸ್ತ್ರೀಯರಿಗಾಗಿ ಸರಕಾರ’ ಕೃತಿಯನ್ನು ಬಿಷಪ್ ಅಲೋಶಿಯಸ್ ಪಾವ್É ಡಿ’ಸೋಜಾ ಬಿಡುಗಡೆ ಮಾಡಿದರು.
ಸಮ್ಮಾನ: ಕೆಥೋಲಿಕ್ ಸಭಾ ವತಿಯಿಂದ ಬಿಷಪ್ ಅಲೋಶಿಯಸ್ ಪಾವ್É ಡಿ’ಸೋಜಾ ಅವರನ್ನು ಸಮ್ಮಾನಿಸಲಾಯಿತು.
ಮಹಿಳೆಯರಿಗೆ ಸಮ್ಮಾನ, ಪ್ರಶಸ್ತಿ ಪ್ರದಾನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕಿಯರಾದ ಪಾವಿÉನ್ ಫ್ಲೋಸ್ಸಿ ಪಿಂಟೊ ತಾಕೊಡೆ (ಕೃಷಿ), ಜೆಸ್ಲಿನ್ ಎಲಿಜಬೆತ್ ಮೇರಿ ಲುವಿಸ್ (ವಿಶೇಷ ಸಾಮರ್ಥ್ಯದ ಮಹಿಳೆ), ಜುಲಿಯಾನಾ ಲೋಬೊ ದೇರೆಬೈಲ್ (ಶಿಕ್ಷಣ), ಯುಲಾಲಿಯಾ ಡಿ’ಸೋಜಾ ಬಿಜೈ (ಉದ್ಯಮ), ಲಿನೆಟ್ ಕ್ಯಾಸ್ತೆಲಿನೋ ನಿತ್ಯಾಧರ್‌ನಗರ (ಸರಕಾರಿ ಸೇವೆ), ಮೇರಿ ವಾಸ್ ದೇರೆಬೈಲ್ (ಆರೋಗ್ಯ), ಮರ್ಲಿನ್ ರಸ್ಕಿನ್ಹಾ ನಾಗುರಿ (ಸಾಹಿತ್ಯ ಮತ್ತು ಕಲೆ), ವಾಯ್ಲೆಟ್ ಜೆ. ಪಿರೇರಾ ಬೆಂದುರ್ (ವೃತ್ತಿಪರ ಕ್ಷೇತ್ರ), ರೆಮಿಡಿಯಾ ಡಿ’ಸೋಜಾ ಬೆಳ್ಮಣ್ (ಸಮಾಜ ಸೇವೆ), ಜೋಯ್ಲಿÉನ್ ಮ್ಯೂರಲ್ ಲೋಬೊ ಶಿರ್ತಾಡಿ (ಕ್ರೀಡೆ) ಅವರಿಗೆ “ಕೆಥೋಲಿಕ್ ಸಭಾ ಸ್ತ್ರೀ ಸಾಧನ್ ಪ್ರಶಸ್ತಿ 2018′ ಪ್ರದಾನ ಮಾಡಲಾಯಿತು. ಪ್ರಶಸ್ತಿಯು ಶಾಲು, ಸಮಾನಪತ್ರ, ಸ್ಮರಣಿಕೆ ಹಾಗೂ 10,000 ರೂ. ನಗದು ಒಳಗೊಂಡಿದೆ. ಸಮ್ಮಾನಿತರ ಪರವಾಗಿ ಲಿನೆಟ್ ಕ್ಯಾಸ್ತೆಲಿನೋ ಮಾತನಾಡಿದರು.
ಅತಿಥಿಯಾಗಿದ್ದ ಮುಂಬಯಿನ ಮೋಡೆಲ್ ಕೋ- ಆಪರೇಟಿವ್ ಬ್ಯಾಂಕ್‌ನ ಚೇರ್‌ಮನ್ ಆಲ್ಬರ್ಟ್ ಡಿ’ಸೋಜಾ ಅವರು ಕೆಥೋಲಿಕ್ ಸಭಾ ಅಜೀವ ಸದಸ್ಯತ್ವ ಕಾರ್ಡ್ ಅನಾವರಣಗೊಳಿಸಿದರು.
ಕೆಥೋಲಿಕ್ ಸಭಾ ಮಂಗ್ಳುರ್ ಪ್ರದೇಶ್ ಕೇಂದ್ರೀಯ ಸಮಿತಿ ಅಧ್ಯಕ್ಷ ಅನಿಲ್ ಲೋಬೊ ಸ್ವಾಗತಿಸಿ ಪ್ರಸ್ತಾವನೆಗೈದರು.ಮಂಗಳೂರು ಧರ್ಮಪ್ರಾಂತದ ಪಾಲನ ಪರಿಷತ್ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ಎಪಿಸ್ಕೋಪಲ್ ಸಿಟಿ ವಲಯದ ಪ್ರಧಾನ ಧರ್ಮಗುರು ಫಾ| ಜೆ.ಬಿ. ಕ್ರಾಸ್ತಾ, ಕೆಥೋಲಿಕ್ ಸಭಾ ಮಂಗಳೂರು ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ| ಮ್ಯಾಥ್ಯೂ ವಾಸ್, ಪ್ರಧಾನ ಕಾರ್ಯದರ್ಶಿ ಸೆಲೆಸ್ತಿನ್ ಡಿ’ಸೋಜಾ, ಕೆಥೊಲಿಕ್ ಸಭಾ ಉಡುಪಿ ಘಟಕದ ಆಧ್ಯಾತ್ಮಿಕ ನಿರ್ದೇಶಕ ಫಾ| ಫರ್ಡಿನಾಂಡ್ ಗೊನ್ಸಾಲ್ವಿಸ್, ಅಧ್ಯಕ್ಷ ವಲೇರಿಯನ್ ಆರ್. ಫೆರ್ನಾಂಡಿಸ್, ಕಾರ್ಯದರ್ಶಿ ಜೆಸಿಂತಾ ಕುಲಾಸೊ, ಮಹಿಳಾ ಮಂಡಳಿಯ ಆಧ್ಯಾತ್ಮಿಕ ನಿರ್ದೇಶಕ ಫಾ| ಫ್ರಾನ್ಸಿಸ್ಡಿ’ಸೋಜಾ, ಅಧ್ಯಕ್ಷ ಟೆರಿ ಪಾಯ್ಸ, ಕಾರ್ಯ ದರ್ಶಿ ಗ್ರೆಟ್ಟಾ ಪಿಂಟೊ, ಕೆಥೋಲಿಕ್ ಸಭಾ ವಲಯಾಧ್ಯಕ್ಷರು, ವಲಯ ಮಹಿಳಾ ಹಿತಸಮಿತಿ ಸಂಚಾಲಕಿಯರು ಉಪಸ್ಥಿತರಿದ್ದರು. ಶರಲ್ ಡಿ’ಸೋಜಾ ವಂದಿಸಿದರು. ಡೋಲ್ಫಿ ಸಲ್ಡಾನಾ ಮತ್ತು ಸುಜಾತಾ ಮೆಂಡೋನ್ಸಾ ಕಾರ್ಯಕ್ರಮ ನಿರೂಪಿಸಿದರು.