ಮುಂಬಯಿ: ಐಪಿಎಲ್ ಪ್ಲೇ-ಆಫ್ ಆರಂಭಕ್ಕೂ ಮುನ್ನ ಮುಂಬಯಿಯಲ್ಲಿ ನಡೆಯಲಿರುವ ವನಿತಾ ಟಿ20 ಪ್ರದರ್ಶನ ಪಂದ್ಯಕ್ಕೆ ಬಿಸಿಸಿಐ ತಂಡಗಳನ್ನು ಪ್ರಕಟಿಸಿದೆ.
ಈ ತಂಡಗಳಿಗೆ “ಐಪಿಎಲ್ ಸೂಪರ್‌ನೊàವಾಸ್’ ಮತ್ತು “ಐಪಿಎಲ್ ಟ್ರೈಲ್‌ಬ್ಲೇಜರ್’ ಎಂದು ಹೆಸರಿಸಲಾಗಿದೆ.
ಹರ್ಮನ್‌ಪ್ರೀತ್ ಕೌರ್ ಮತ್ತು ಸ್ಮತಿ ಮಂಧನಾ ಈ ತಂಡಗಳ ನಾಯಕಿಯರಾಗಿದ್ದಾರೆ. ಪಂದ್ಯ ಮೇ 22ರ ಮಂಗಳವಾರ ಮಧ್ಯಾಹ್ನ 2.30ಕ್ಕೆ ಆರಂಭವಾಗಲಿದೆ.
ಎರಡೂ ತಂಡಗಳಲ್ಲಿ ಐವರು ವಿದೇಶಿ ಆಟಗಾರ್ತಿಯರಿದ್ದಾರೆ. ಆಸ್ಟ್ರೇಲಿಯ ತಂಡದ ನಾಯಕಿ ಮೆಗ್ ಲ್ಯಾನಿಂಗ್, ನ್ಯೂಜಿಲ್ಯಾಂಡಿನ ನಾಯಕಿ ಸೂಝಿ ಬೇಟ್ಸ್, ಮಧ್ಯಮ ವೇಗಿಗಳಾದ ಸೋಫಿ ಡಿವೈನ್, ಲೀ ಟಹು, ಆಸೀಸ್ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ, ವೇಗಿ ಮೆಗಾನ್ ಶಟ್, ಇಂಗ್ಲೆಂಡಿನ ಆರಂಭಕಾರ್ತಿ ಡೇನಿಯಲ್ ವ್ಯಾಟ್ ಮೊದಲಾದವರೆಲ್ಲ ಈ ಪಂದ್ಯಕ್ಕೆ ಆಯ್ಕೆಯಾಗಿದ್ದಾರೆ. ಭಾರತದವ ಸ್ಟಾರ್ ಆಟಗಾರ್ತಿಯರೆಲ್ಲ ಈ ತಂಡಗಳಲ್ಲಿ ಭರ್ತಿಯಾಗಿದ್ದಾರೆ.
ತಂಡಗಳು
ಐಪಿಎಲ್ ಸೂಪರ್‌ನೊàವಾಸ್: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಡೇನಿಯಲ್ ವ್ಯಾಟ್, ಮಿಥಾಲಿ ರಾಜ್, ಮೆಗ್ ಲ್ಯಾನಿಂಗ್, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಮ್, ಪೂಜಾ ವಸ್ತ್ರಾಕರ್, ಮೆಗಾನ್ ಶಟ್, ರಾಜೇಶ್ವರಿ ಗಾಯಕ್ವಾಡ್, ಅನುಜಾ ಪಾಟೀಲ್, ತನಿಯಾ ಭಾಟಿಯಾ (ವಿ.ಕೀ.).
ಐಪಿಎಲ್ ಟ್ರೈಲ್‌ಬ್ಲೇಜರ್: ಸ್ಮತಿ ಮಂಧನಾ (ನಾಯಕಿ), ಅಲಿಸ್ಸಾ ಹೀಲಿ (ವಿ.ಕೀ.), ಸೂಝಿ ಬೇಟ್ಸ್, ದೀಪ್ತಿ ಶರ್ಮ, ಬೆತ್ ಮೂನಿ, ಜೆಮಿಮಾ ರೋಡ್ರಿಗಸ್, ಡೇನಿಯಲ್ ಹ್ಯಾಜೆಲ್, ಶಿಖಾ ಪಾಂಡೆ, ಲೀ ಟಹು, ಜೂಲನ್ ಗೋಸ್ವಾಮಿ, ಏಕ್ತಾ ಬಿಷ್ಟ್, ಪೂನಂ ಯಾದವ್, ದಯಾಲನ್ ಹೇಮಲತಾ.