Advertisement

ಸಾಧನೆ ಮಾತಾಗಲಿ: ಚಂದ್ರಶೇಖರ ಸ್ವಾಮೀಜಿ

06:23 PM Mar 11, 2022 | Team Udayavani |

ಧಾರವಾಡ: ಪ್ರತಿಯೊಬ್ಬ ವ್ಯಕ್ತಿಯ ಸಾಧನೆಯೇ ಮಾತಾಗಬೇಕು ಹೊರತಾಗಿ ಬರೀ ಮಾತೇ ಸಾಧನೆಯಾಗಬಾರದು ಎಂದು ಹುಕ್ಕೇರಿ ಹಿರೇಮಠದ ಷ.ಬ್ರ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ನಗರದ ರಂಗಾಯಣದ ಪಂ|ಬಸವರಾಜ ರಾಜಗುರು ಬಯಲು ರಂಗಮಂದಿರದಲ್ಲಿ ಮಾ.10ರಿಂದ ಮಾ.17ರವರೆಗೆ ಹಮ್ಮಿಕೊಂಡಿರುವ ಕಾಲೇಜು ಯುವ ರಂಗೋತ್ಸವ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿ, ವಿದ್ಯಾರ್ಥಿಗಳು ಕಲಿಕಾ ಜೀವನದಲ್ಲಿ ಏನನ್ನು ಸಾ  ಧಿಸಬೇಕು ಎಂಬುದನ್ನು ಅರಿತಿರಬೇಕು ಎಂದರು.

ರಂಗೋತ್ಸವಕ್ಕೆ ಚಾಲನೆ ನೀಡಿದ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ|ಬಸು ಬೇವಿನಗಿಡದ ಮಾತನಾಡಿ, ರಂಗಾಯಣವು ವಿದ್ಯಾರ್ಥಿಗಳಲ್ಲಿರುವ ಕಲೆಯನ್ನು ಗುರುತಿಸಿ, ಅವರಿಗೆ ನಾಟಕ ತರಬೇತಿ ನೀಡುವ ಮೂಲಕ ರಂಗಭೂಮಿಯತ್ತ ಸೆಳೆಯುವಲ್ಲಿ ಪರಿಣಾಮಕಾರಿ ಪಾತ್ರವನ್ನು ನಿರ್ವಹಿಸಿದೆ ಎಂದರು.

ರಂಗಸಮಾಜ ಸದಸ್ಯ ಹಿಪ್ಪರಗಿ ಸಿದ್ಧರಾಮ ಮಾತನಾಡಿ, ರಂಗಾಯಣವು ಎಲ್ಲರಿಗೂ ಅವಕಾಶ ನೀಡುವ ಮೂಲಕ ವ್ಯಕ್ತಿತ್ವ ವಿಕಾಸಗೊಳಿಸುತ್ತಿದೆ. ಇದೀಗ ಕಾರವಾರದಲ್ಲಿ ಆರನೇ ರಂಗಾಯಣವಾಗಿ ಯಕ್ಷ ರಂಗಾಯಣ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಮಾತನಾಡಿ, ಧಾರವಾಡ ರಂಗಾಯಣ ಕಾಲೇಜು ಯುವ ರಂಗೋತ್ಸವ ಮೂಲಕ ಸುಮಾರು 150 ಕಲಾವಿದರನ್ನು ರಂಗಭೂಮಿಗೆ ಪರಿಚಯಿಸಿದೆ ಎಂದರು. ಕಲಘಟಗಿ ಗುಡ್‌ ನ್ಯೂಸ್‌ ಪಪೂ ಕಾಲೇಜ್‌ ಪ್ರಾಚಾರ್ಯ ಡಾ|ಬಿ.ಜೆ ಬಿರಾದಾರ, ಕವಿಸಂ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ ಹೊರಕೇರಿ, ಡಾ|ಡಿ.ಎ.ಉಪಾಧ್ಯ ಇದ್ದರು. ರಂಗಾಯಣದ ಆಡಳಿತಾಧಿ ಕಾರಿ ಶಶಿಕಲಾ ಹುಡೇದ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಫಕ್ಕೀರಪ್ಪ ಮಾಧನಭಾವಿ ನಿರೂಪಿಸಿ ವಂದಿಸಿದರು. ಡಾ|ಡಿ.ಎ. ಉಪಾಧ್ಯ ರಚಿಸಿ, ಶಶಿಕಲಾ ಪುರೂಟಿ ನಿರ್ದೇಶಿಸಿದ ಬ್ರಹ್ಮ ಬರಹ ನಾಟಕವನ್ನು ಗುಡ್‌ ನ್ಯೂಸ್‌ ವೆಲ್ಫೆರ್‌ ಸಂಸ್ಥೆಯ ಕಲಾ-ವಾಣಿಜ್ಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next