Advertisement
ಸರಕಾರವು ಪ್ರಾರಂಭದಲ್ಲಿ ರೈತರೇ ಅಪ್‌ಲೋಡ್ ಮಾಡುವುದಕ್ಕಾಗಿ ಆ್ಯಪ್ ಬಿಡುಗಡೆ ಮಾಡಿದ್ದು, ಆದರೆ ಅದರಲ್ಲಿ ಅಪ್‌ಲೋಡ್ ಕಾರ್ಯ ನಿಧಾನಗತಿಯಲ್ಲಿ ಸಾಗಿದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಮೂಲಕ ನೇಮಕವಾಗಿದ್ದ ಖಾಸಗಿ ನಿವಾಸಿಗಳ(ಪಿಆರ್) ಆ್ಯಪ್ ಮೂಲಕವೂ ಅಪ್‌ಲೋಡ್ ಕಾರ್ಯಕ್ಕೆ ಸೂಚಿಸಲಾಗಿದೆ.
Related Articles
ಬಂಟ್ವಾಳ ಹೋಬಳಿಯಲ್ಲಿ ಒಟ್ಟು 64,316 ಪ್ಲಾಟ್‌ಗಳಲ್ಲಿ 4848 ಕೃಷಿ ಭೂಮಿ ಅಲ್ಲದ ಪ್ಲಾಟ್‌ಗಳಿವೆ. ಗುರಿ ನೀಡಲಾದ 59,468 ಪ್ಲಾಟ್‌ಗಳ ಪೈಕಿ 12854(ರೈತರ ಅಪ್‌ಲೋಡ್) ಹಾಗೂ 46,271(ಪಿಆರ್‌ಗಳ ಅಪ್‌ಲೋಡ್) ಸೇರಿ ಒಟ್ಟು 59,125 ಪ್ಲಾಟ್‌ಗಳು ಅಪ್‌ಲೋಡ್ ಆಗಿದ್ದು, ಶೇ. 99.42 ಪ್ರಗತಿ ಸಾಧಿಸಲಾಗಿದೆ. ಈ ಹೋಬಳಿಯಲ್ಲಿ ಒಟ್ಟು 52 ಮಂದಿ ಪಿಆರ್‌ಗಳು ಕಾರ್ಯನಿರ್ವಹಿಸಿದ್ದರು.
Advertisement
ಪಾಣೆಮಂಗಳೂರು: ಶೇ. 101. 71 ಪ್ರಗತಿಪಾಣೆಮಂಗಳೂರು ಹೋಬಳಿಯಲ್ಲಿ ಒಟ್ಟು 1,01,902 ಪ್ಲಾಟ್‌ಗಳಲ್ಲಿ 10,848 ಕೃಷಿ ಭೂಮಿ ಅಲ್ಲದ ಪ್ಲಾಟ್‌ಗಳಿವೆ. ಗುರಿ ನೀಡಲಾದ 91,054 ಪ್ಲಾಟ್‌ಗಳ ಪೈಕಿ 21802(ರೈತರ ಅಪ್‌ಲೋಡ್) ಹಾಗೂ 70,805(ಪಿಆರ್‌ಗಳ ಅಪ್‌ಲೋಡ್) ಸೇರಿ ಒಟ್ಟು 92,607 ಪ್ಲಾಟ್‌ಗಳು ಅಪ್‌ಲೋಡ್ ಆಗಿದ್ದು, ಶೇ. 101.71 ಪ್ರಗತಿ ಸಾಧಿಸಲಾಗಿದೆ. ಈ ಹೋಬಳಿಯಲ್ಲಿ ಒಟ್ಟು 87 ಮಂದಿ ಪಿಆರ್‌ಗಳು ಕಾರ್ಯನಿರ್ವಹಿಸಿದ್ದರು. ವಿಟ್ಲದಲ್ಲಿ ಶೇ. 98.48 ಪ್ರಗತಿ
ವಿಟ್ಲ ಹೋಬಳಿಯಲ್ಲಿ ಒಟ್ಟು 78,928 ಪ್ಲಾಟ್‌ಗಳಲ್ಲಿ 6,133 ಕೃಷಿ ಭೂಮಿ ಅಲ್ಲದ ಪ್ಲಾಟ್‌ಗಳಿವೆ. ಗುರಿ ನೀಡಲಾದ 72,795 ಪ್ಲಾಟ್‌ಗಳ ಪೈಕಿ 16,901(ರೈತರ ಅಪ್‌ಲೋಡ್) ಹಾಗೂ 54,789(ಪಿಆರ್‌ಗಳ ಅಪ್‌ಲೋಡ್) ಸೇರಿ ಒಟ್ಟು 71,690 ಪ್ಲಾಟ್‌ಗಳು ಅಪ್‌ಲೋಡ್ ಆಗಿದ್ದು, ಶೇ. 98.48 ಪ್ರಗತಿ ಸಾಧಿಸಲಾಗಿದೆ. ಈ ಹೋಬಳಿಯಲ್ಲಿ ಒಟ್ಟು 210 ಮಂದಿ ಪಿಆರ್‌ಗಳು ಕಾರ್ಯನಿರ್ವಹಿಸಿದ್ದರು. ಆ್ಯಪ್‌ನಲ್ಲಿ ವೀಕ್ಷಿಸಬಹುದು
ರೈತರು ತಮ್ಮ ಜಮೀನಿನಲ್ಲಿ ಬೆಳೆ ಸಮೀಕ್ಷೆ ಪ್ರಕಾರ, ದಾಖಲಾಗಿರುವ ಬೆಳೆ ವಿವರಗಳು, ವಿಸ್ತೀರ್ಣದ ಮಾಹಿತಿಯನ್ನು ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ಪಡೆಯಬಹುದು. ತಮ್ಮ ಜಮೀನಿನ ಜಿಪಿಎಸ್ ಆಧಾರಿತ ಛಾಯಾಚಿತ್ರವನ್ನು ವೀಕ್ಷಿಸ ಬಹುದು. ಪ್ಲೇ ಸ್ಟೋರ್‌ಗೆ ಹೋಗಿ ಆ್ಯಪ್‌ನ್ನು ಡೌನ್‌ಲೋಡ್ ಮಾಡಿ ಲಾಗಿನ್ ಆಗಬೇಕು. ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ತಮ್ಮ ಜಮೀನಿನ ಸರ್ವೇ ನಂಬರ್ ಹಾಕಬೇಕು. ಆಗ ಜಮೀನಿನ ವಿವರ ಬರುತ್ತದೆ. ಅಲ್ಲಿ ಜಮೀನಿನ ಸರ್ವೇ ಮಾಡಿದವರ ಹೆಸರು ಮತ್ತು ಮೊಬೈಲ್ ನಂಬರ್ ಇರುತ್ತದೆ.
ಅದನ್ನು ಕ್ಲಿಕ್ ಮಾಡಿದಾಗ ಸಮೀಕ್ಷೆಯಲ್ಲಿ ನಮೂದಿಸಲ್ಪಟ್ಟಿರುವ ಬೆಳೆ ವಿವರ ಲಭಿಸ್ತುತದೆ. ಒಂದೊಮ್ಮೆ ಬೆಳೆ ವಿವರ ತಪ್ಪಾಗಿ ನಮೂದಿಸಿದ್ದರೆ ಅದಕ್ಕೆ ಆಕ್ಷೇಪಣೆ ಸಲ್ಲಿಸಲು ಆ್ಯಪ್‌ನಲ್ಲಿ ಅವಕಾಶವಿದೆ.
ದ.ಕ.ಜಿಲ್ಲೆಯಲ್ಲಿ 2020-21ನೇ ಸಾಲಿನ ಬೆಳೆ ಸಮೀಕ್ಷೆ ಯನ್ನು ಮೊಬೈಲ್ ಆ್ಯಪ್ ಮೂಲಕ ಯಶಸ್ವಿಯಾಗಿ ಮಾಡಲಾಗಿದ್ದು, ಶೇ.100ರಷ್ಟು ಸಾಧನೆ ಮಾಡಲಾಗಿದೆ. ರೈತರು ಬೆಳೆ ದರ್ಶಕ ಆ್ಯಪ್ ಮೂಲಕ ಸಮೀಕ್ಷೆಯಲ್ಲಿ ದಾಖಲಾಗಿರುವ ಬೆಳೆ ವಿವರಗಳ ಮಾಹಿತಿ ಪಡೆಯಬಹುದಾಗಿದೆ. ಒಂದೊಮ್ಮೆ ತಪ್ಪಾಗಿ ನಮೂದಾಗಿದ್ದರೆ ಆ್ಯಪ್ ಮೂಲಕ ಮಾಹಿತಿ ನೀಡಿ ಸರಿಪಡಿಸಿಕೊಳ್ಳಲು ಅವಕಾಶವಿದೆ.
-ಡಾ| ಸೀತಾ, ಕೃಷಿ ಜಂಟಿ ನಿರ್ದೇಶಕರು, ದ.ಕ. ಜಿಲ್ಲೆ ಪ್ರಗತಿ ಸಾಧಿಸಿದೆ
ತಾ|ನಲ್ಲಿ ಪ್ರಸ್ತುತ ಒಟ್ಟು 2,23,422 ಪ್ಲಾಟ್‌ಗಳು ಅಪ್‌ಲೋಡ್ ಆಗಿದ್ದು, ಶೇ. 100.05 ಪ್ರಗತಿ ಸಾಧಿಸಲಾಗಿದೆ. ಕೃಷಿ ಇಲಾಖೆ , ಕಂದಾಯ ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ತಾಲೂಕಿನ ಮೂರು ಹೋಬಳಿಗಳಲ್ಲೂ ಬೆಳೆ ಸಮೀಕ್ಷೆಯ ಕಾರ್ಯ ನಡೆದಿದೆ.
-ನಾರಾಯಣ ಶೆಟ್ಟಿ, ಸಹಾಯಕ ಕೃಷಿ ನಿರ್ದೇಶಕರು, ಬಂಟ್ವಾಳ