Advertisement

ಪೆರ್ಡೂರು ಪಕ್ಕಾಲು ಅಪಾಯಕಾರಿ ತಿರುವಿಗೆ ಮುಕ್ತಿ ಎಂದು ?

01:00 AM Mar 14, 2019 | Harsha Rao |

ಹೆಬ್ರಿ: ಉಡುಪಿ ಶಿವಮೊಗ್ಗ ರಾಜ್ಯ ಹೆದ್ದಾರಿಯ ಪೆರ್ಡೂರು ಸಮೀಪದ ಪಕ್ಕಾಲು ತಿರುವು ಅಪಾಯಕಾರಿ ಹಾಗೂ ಅಪಘಾತದ ತಾಣವಾಗಿದ್ದು ಸಮಸ್ಯೆಗೆ ಮುಕ್ತಿ ಕಾಣದಾಗಿದೆ. ಪಕ್ಕಾಲು ಏರು ತಿರುವು ಅತಿ ಕಿರಿದಾದ ರಸ್ತೆಯಿಂದ ಕೂಡಿದ್ದು ಈ ಭಾಗದಲ್ಲಿ ಹಲವು ಅಪಘಾತ ನಡೆದಿವೆ. ಆದರೂ ಸ್ಥಳೀಯಾಡಳಿತ ಹಾಗೂ ಸಂಬಂಧ ಪಟ್ಟ ಇಲಾಖೆ ಗಮನ ಹರಿಸಿಲ್ಲ.  

Advertisement

ಚರಂಡಿಯೇ ಇಲ್ಲ 
ಒಂದೆಡೆ ರಸ್ತೆ ಕಿರಿದಾದರೆ ಈ ಮಧ್ಯೆ ರಸ್ತೆಗೆ ಚರಂಡಿ, ನಡೆಯಲು ಜಾಗ ಇಲ್ಲದೆ ಜನರು ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ. ಈ ಮಾರ್ಗದಲ್ಲಿ ಶಿವಮೊಗ್ಗ-ಮಂಗಳೂರು ವೇಗದೂತ ಬಸ್‌ಗಳು, ವಾಹನಗಳು ವೇಗವಾಗಿ ಸಂಚರಿಸುವುದರಿಂದ ಪಾದಚಾರಿಗಳು ಪ್ರಾಣ ಕೈಯಲ್ಲಿ ಹಿಡಿದು ನಡೆದು ಕೊಂಡು ಹೋಗುವ ಸ್ಥಿತಿಯಿದೆ. 

ರಸ್ತೆಗೆ ತಾಗಿದ ಅಪಾಯಕಾರಿ ಮರಗಳು 
ಕಡಿದಾದ ರಸ್ತೆಗೆ ತಾಗಿದ ಬೃಹತ್‌ ಮರಗಳಿಂದ ಅಪಾಯಗಳು ಹೆಚ್ಚಾಗಿದೆ. ಈ ಮಾರ್ಗದಲ್ಲಿ ತಿರುವುಗಳೇ ಹೆಚ್ಚಾಗಿರುವುದರಿಂದ ರಸ್ತೆಗೆ ತಾಗಿದ ಪೊದೆಗಳಿಂದ ಎದುರುಗಡೆ ಬರುತ್ತಿರುವ ವಾಹನದ ಬಗ್ಗೆ ತಿಳಿಯುತ್ತಿಲ್ಲ.  

ರಸ್ತೆ ಅಗಲ ಮಾಡಿ 
ರಸ್ತೆ ಅಗಲಗೊಳಿಸುವುದರಿಂದ ಅಪಘಾತಗಳನ್ನೂ ಸಾಕಷ್ಟು ತಗ್ಗಿಸಬಹುದು ಎನ್ನುತ್ತಾರೆ ಸ್ಥಳೀ ಯರಾದ ಪಕ್ಕಾಲು ಸಂತೋಷ ಕುಲಾಲ ಅವರು. 

ಸಮಸ್ಯೆ ಪ‌ರಿಹರಿಸಲು ಪ್ರಯತ್ನ
ಈ ಭಾಗದಲ್ಲಿ ನಿರಂತರವಾಗಿ ಆಗುತ್ತಿರುವ ಅಪಘಾತಗಳ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಪಂಚಾಯತ್‌ನಲ್ಲಿ ಚರ್ಚಿಸಿ ಸಂಬಂಧ ಪಟ್ಟವರ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಲ್ಲಿ ಪ್ರಯತ್ನಿಸುತ್ತೇನೆ.
-ಶಾಂಭವಿ ಕುಲಾಲ್‌, ಅಧ್ಯಕ್ಷರು ಗ್ರಾ.ಪಂ. ಪೆರ್ಡೂರು

Advertisement

ಸೂಚನಾ ಫಲಕವಿಲ್ಲ 
ಅಪಘಾತ ವಲಯ, ಕಡಿದಾದ ತಿರುವು ಇದ್ದರೂ ಇಲ್ಲಿ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಸಮಸ್ಯೆಯ ತೀವ್ರತೆ ಹಾಗೂ ಅಪಾಯದ ಬಗ್ಗೆ ಜಾಗೃತೆ ವಹಿಸುವ ಬಗ್ಗೆ ಪಂಚಾಯತ್‌ ನಿರ್ಲಕ್ಷ ವಹಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next