Advertisement

Kannada: ಶೇ. 60 ಕನ್ನಡ ನಾಮಫ‌ಲಕ ಜಾರಿಗೆ ಕಾರ್ಯಪಡೆ: ಸಚಿವ ಶಿವರಾಜ ತಂಗಡಗಿ

12:50 AM Dec 28, 2023 | Team Udayavani |

ಬೆಂಗಳೂರು: ರಾಜ್ಯದ ಎಲ್ಲ ವ್ಯಾಪಾರ ಉದ್ದಿಮೆ, ಶಿಕ್ಷಣ ಸಂಸ್ಥೆಗಳ ನಾಮಫ‌ಲಕಗಳು ಶೇ. 60ರಷ್ಟು ಕನ್ನಡದಲ್ಲಿ ಇರಲೇಬೇಕು. ಇದನ್ನು ಪಾಲಿಸದ ಉದ್ದಿಮೆ ಅಥವಾ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಗೊಳಿಸುವುದರ ಸಹಿತ ಅತ್ಯಂತ ಕಠಿನ ಕಾನೂನು ಜಾರಿಗೊಳಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಹೇಳಿದರು.

Advertisement

ವಿಕಾಸಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜೀ ಇಲ್ಲ. ಎಲ್ಲ ವ್ಯಾಪಾರ ಉದ್ದಿಮೆ, ಶಿಕ್ಷಣ ಸಂಸ್ಥೆಗಳ ನಾಮಫ‌ಲಕದಲ್ಲಿ ಕನ್ನಡ ಶೇ. 60ರಷ್ಟಿರಬೇಕು. ಈ ನಿಯಮ ಪಾಲಿಸದ ಸಂಸ್ಥೆ, ಉದ್ದಿಮೆ ಪರವಾನಗಿ ರದ್ದತಿ ಸಹಿತ ಹಲವು ಕಠಿನ ಕಾನೂನುಗಳನ್ನು ರೂಪಿಸಲಾಗುವುದು. ಅಷ್ಟೇ ಅಲ್ಲ, ಇದರ ಅನುಷ್ಠಾನಕ್ಕೆ ಕಾರ್ಯಪಡೆ ಕೂಡ ರಚಿಸಲಾಗುವುದು ಎಂದು ತಿಳಿಸಿದರು.

ಕನ್ನಡದಲ್ಲಿ ನಾಮಫ‌ಲಕ ಹಾಕಬೇಕೆಂಬ ಕರವೇ ಹೋರಾ ಟಕ್ಕೆ ನಾನು ಬೆಂಬಲ ನೀಡುತ್ತೇನೆ. ಹೋರಾಟ ಮಾಡಲಿ, ಆದರೆ ಬೇರೆಯವರಿಗೆ ತೊಂದರೆ ಕೊಡಬಾರದು. ಕನ್ನಡಪರ ಸಂಘಟನೆಗಳ ಆಶಯದಂತೆ ನಾವು ಕಾನೂನು ಜಾರಿ ಮಾಡುತ್ತಿದ್ದೇವೆ. ಹೀಗಾಗಿ ಯಾರೂ ಕಾನೂನು ಕೈಗೆತ್ತಿಕೊಳ್ಳು ವುದು ಬೇಡ ಎಂದು ತಂಗಡಗಿ ಮನವಿ ಮಾಡಿದರು.

ಕೆಲವು ಶಿಕ್ಷಣ ಸಂಸ್ಥೆಗಳು ಉದ್ದೇಶಪೂರ್ವಕವಾಗಿ ನಾಮ ಫ‌ಲಕದಲ್ಲಿ ಕನ್ನಡ ಅಳವಡಿಕೆ ಮಾಡದಿರುವುದು ಗಮನಕ್ಕೆ ಬಂದಿದೆ. ಪ್ರತೀ ಇಲಾಖೆಯ ಕಡತಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆ ಮಾಡಬೇಕು. ನಮ್ಮ ರಾಜ್ಯಕ್ಕೆ ಬರುವವರನ್ನು ಪ್ರೀತಿ-ವಿಶ್ವಾಸ ದಿಂದ ನೋಡಬೇಕು. ಅನ್ಯಭಾಷಿಕರನ್ನು ಗೌರವಿ ಸೋಣ. ಅವರಿಗೆ ಕನ್ನಡ ಕಲಿಸೋಣ. ನೆಲ, ಜಲ, ಭಾಷೆಯಲ್ಲಿ ವಿಚಾರದಲ್ಲಿ ಸರಕಾರ ರಾಜಿ ಆಗುವ ಮಾತೇ ಇಲ್ಲ ಎಂದರು.

ಕರವೇಯವರು ಬೆಂಗಳೂರಿನಲ್ಲಿ ಕನ್ನಡ ನಾಮಫ‌ಲಕಗಳನ್ನು ಹಾಕ ಬೇಕೆಂದು ಪ್ರತಿಭಟನೆ ನಡೆಸಿದ್ದಾರೆ. ಕಾನೂನುಬಾಹಿರವಾಗಿ ನಡೆದು ಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement
Advertisement

Udayavani is now on Telegram. Click here to join our channel and stay updated with the latest news.

Next