Advertisement

Rabkavi-Banhatti: ಕೆಳಸ್ತರದ ಜನರಿಗಾಗಿ ಜನ ಸಂಪರ್ಕ ಕಾರ್ಯಾಲಯ – ಉಮಾಶ್ರೀ

06:26 PM Aug 14, 2024 | Team Udayavani |

ರಬಕವಿ-ಬನಹಟ್ಟಿ: ತೇರದಾಳ ವಿಧಾನ ಸಭಾ ಕ್ಷೇತ್ರದ ರಬಕವಿ ಬನಹಟ್ಟಿ, ರಾಮಪುರ ಮತ್ತು ಹೊಸೂರ ಊರಿನ ಅತ್ಯಂತ ಕೆಳಸ್ತರದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ರಬಕವಿ ಬನಹಟ್ಟಿ ನಗರಸಭೆಯ ಕಾರ್ಯಾಲಯದಲ್ಲಿ ಜನ ಸಂಪರ್ಕ ಕಾರ್ಯಾಲಯವನ್ನು ಆರಂಭಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ತಿಳಿಸಿದರು.

Advertisement

ಅವರು ಬುಧವಾರ ಇಲ್ಲಿನ ನಗರಸಭೆಯ ಕಾರ್ಯಾಲಯದಲ್ಲಿ ಜನ ಸಂಪರ್ಕ ಕಾರ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದರು.ಕ್ಷೇತ್ರದ ಜನರನ್ನು ನೇರವಾಗಿ ಹೋಗಿ ಭೇಟಿಯಾಗಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಇಲ್ಲಿನ ಜನರು ತಮ್ಮ ಸಮಸ್ಯೆಗಳನ್ನು ಮತ್ತು ಅಹವಾಲುಗಳನ್ನು ಜನ ಸಂಪರ್ಕ ಕಾರ್ಯಾಲಯದಲ್ಲಿರುವ ವ್ಯಕ್ತಿಗೆ ನೀಡಬೇಕು. ನಂತರ ಬಂದಂಧ ಸಮಸ್ಯೆಗಳ ಕುರಿತು ನಾನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರುವುದರ ಜೊತೆಗೆ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಜನ ಸಂಪರ್ಕ ಕಾರ್ಯಾಲಯವನ್ನು ಆರಂಭಿಸಲಾಗಿದೆ.

ಸರ್ಕಾರ ಕೊಟ್ಟಿರುವ ಅಧಿಕಾರವು ಸದುಪಯೋಗವಾಗಲಿ ಎಂಬ ದೃಷ್ಠಿಯಿಂದ ಮತ್ತು ಪಕ್ಷಾತೀತವಾಗಿ ಎಲ್ಲ ಪಕ್ಷದ ಜನರ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ ಜನ ಸಂಪರ್ಕ ಕಾರ್ಯಾಲಯವನ್ನು ಆರಂಭಿಸಲಾಗಿದೆ. ಸ್ಥಳೀಯರು ಜನ ಸಂಪರ್ಕ ಕಾರ್ಯಾಲಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ತಿಳಿಸಿದರು.

ಜನ ಸಂಪರ್ಕ ಕಾರ್ಯಾಲಯದಲ್ಲಿ ಪೂಜಾ ಕಾರ್ಯಕ್ರಮವನ್ನು ಪಕ್ಷದ ಕಾರ್ಯಕರ್ತರು ನಡೆಸಿದರು. ಡಾ. ಎ.ಕೆ. ನಾಡಗೌಡಪಾಟೀಲ, ಡಾ. ಎ.ಆರ್. ಬೆಳಗಲಿ, ನೀಲಕಂಠ ಮುತ್ತೂರ, ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ಈಶ್ವರ ಚಮಕೇರಿ, ಭೀಮಶಿ ಮಗದುಮ್, ರಾಜೇಂದ್ರ ಭದ್ರನವರ, ನೇಮಣ್ಣ ಸಾವಂತನವರ, ಅಶೋಕ ಆಳಗೊಂಡ, ರಾಜು ದೇಸಾಯಿ, ಬಸವರಾಜ ಗುಡೋಡಗಿ, ಸಂಗಪ್ಪ ಕುಂದಗೋಳ, ಹರ್ಷವರ್ಧನ ಪಟವರ್ಧನ, ರಾಹುಲ ಕಲಾಲ, ವಿಠ್ಠಲ ಹೊಸಮನಿ, ಅಶೋಕ ಉಳ್ಳಾಗಡ್ಡಿ, ನಿಲೇಶ ದೇಸಾಯಿ, ಕಿರಣ ದೇಸಾಯಿ, ಹಾರೂನ್ ಸಾಂಗ್ಲಿಕರ್, ರೇಣುಕಾ ಮಡ್ಡಿಮನಿ, ಕುಂಬಾರ, ಆಶಾ ಭೂತಿ, ಚರ್ಕಿ, ಸದಾಶಿವ ಗೊಂದಕರ್, ರಾಜು ನಂದೆಪ್ಪನವರ, ಸತ್ಯಪ್ಪ ಮಗದುಮ್, ಶ್ರೀಶೈಲ ಮೇಣಿ ಸೇರಿದಂತೆ ತೇರದಾಳ ವಿಧಾನ ಸಭಾ ಮತಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next