ಕೋಲಾರ: ತಾಲೂಕಿನ ನರಸಾಪುರ ಗ್ರಾಮದ ದೊಡ್ಡ ಕೆರೆಯಲ್ಲಿ ಜಡಿ ಮಳೆಯಲ್ಲೇ ಮೀನುಗಳನ್ನು ಹಿಡಿಯಲು ಬೆಳಗಿನ ಜಾವದಿಂದಲೇ ಮುಂದಾಗಿದ್ದಾರೆ. ಎರಡೂ ಮೂರು ದಿನಗಳಿಂದ ಹೆಚ್ಚು ಮಳೆಯಾಗಿದ್ದು, ನರಸಾಪುರ ಗ್ರಾಮದ ದೊಡ್ಡ ಕೆರೆಯಲ್ಲಿ ನೀರು ತುಂಬಿ ತುಳುಕುತ್ತಿದೆ.
5 ಅಡಿ ಎತ್ತರಕ್ಕೆ ಕೋಡಿ ನೀರು ಹೋಗುತ್ತಿದ್ದು, ಕೆರೆಯ ಕಟ್ಟೆಯ ಪಕ್ಕದಲ್ಲಿ ಇರುವ ಹೊಲಗಳಿಗೆ ನೀರು ನುಗ್ಗಿ ರೈತರು ಬೆಳೆದ ಬೆಳೆಗಳು ನಾಶವಾಗಿವೆ. ನರಸಾಪುರ ಕೆರೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ನೀರು ತುಂಬಿ ಕೋಡಿ ಹೋಗುತ್ತಿದ್ದು, ಕೆರೆಯಿಂದ ಕಾಲುವೆಗೆ ನುಗ್ಗಿ ಕಾಲುವೆಯಲ್ಲಿ ನೀರು ತುಂಬಿ ರಸ್ತೆಯಲ್ಲಿ ಹರಿದು, ಮನೆಗಳಿಗೆ ನುಗ್ಗಿದೆ. ಜನರು ಜಾಗರಣೆ ಮಾಡುವ ಪರಿಸ್ಥಿತಿ ತಂದಿದೆ.
ಮತ್ತೊಂದೆಡೆ ಬೆಳ್ಳೂರು ಗ್ರಾಮದ ಸಮೀಪದಲ್ಲಿ ಇರುವ ಹೊಲಗಳಿಗೆ ಮಳೆಯ ನೀರು ನುಗ್ಗಿ ರೈತರು ಬೆಳೆದ ಬೆಳೆಗಳನ್ನು ನಾಶಮಾಡಿದೆ. ಫಸಲು ಕೈಗೆ ಬರುವ ಸಮಯದಲ್ಲಿ ಈ ರೀತಿಯ ಮಳೆಯ ಕಾರಣ ನೀರು ಹೊಲಗಳಿಗೆ ನುಗ್ಗಿವೆ. ಇದಕ್ಕೆ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದು ಪ್ರಮುಖ ಕಾರಣ, ಸ್ಥಳೀಯ ಅ ಧಿಕಾರಿಗಳು ಈ ಕಡೆ ಗಮನಹರಿಸಿ ಸೂಕ್ತ ಪರಿಹಾರ ನೀಡಬೇಕು ಎಂದು ಬೆಳ್ಳೂರಿನ ಮುರಳಿ ನಾಯ್ಕ ಒತ್ತಾಯಿಸಿದರು.
ಇದನ್ನೂ ಓದಿ:- ನಗ್ನ ವಿಡಿಯೋ ಬ್ಲಾಕ್ ಮೇಲ್!: ಅನಾಮಧೇಯ ವಿಡಿಯೋ ಕಾಲ್ ಸ್ವೀಕರಿಸುವ ಮುನ್ನ ಎಚ್ಚರ
ನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಪ್ರತಿದಿನ ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದ ಅನೇಕ ಜನರು ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಬರುತ್ತಾರೆ. ಅಲ್ಲದೆ, ನೂರಾರು ವಾಹನಗಳು ಸಂಚರಿಸುತ್ತವೆ, ಮುಖ್ಯವಾಗಿ ಕೋಲಾರ ಜಿಲ್ಲೆಯಲ್ಲಿ ಸತತವಾಗಿ ಮಳೆಯಾಗುತ್ತಿದ್ದು, ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ನೀರಿನಿಂದ ತುಂಬಿ ವಾಹನಗಳ ಸಂಚಾರಕ್ಕೆ ತೊಂದರೆಯಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.