Advertisement

ಮಾಲ್‌ಗ‌ಳಿಗೆ ಹೋಗಲ್ಲ, ಸಾರ್ವಜನಿಕ ಸಾರಿಗೆ ಬಳಸಲ್ಲ!

09:07 AM May 19, 2020 | Hari Prasad |

ಭಾರತ ಕೋವಿಡ್ ಪೀಡೆಗೊಳಗಾಗಿದೆ. ಪರಿಣಾಮ ದೇಶದಲ್ಲಿ ದಿಗ್ಬಂಧನ ಜಾರಿಯಲ್ಲಿದೆ. ಇದು ಮುಗಿದ ಮೇಲೆ ದೇಶದ ಜನರ ಮನಸ್ಥಿತಿಯಲ್ಲಿ ಹಲವು ಬದಲಾವಣೆಗಳು ನಿರೀಕ್ಷಿತವಾಗಿವೆ. ವೆಲಾಸಿಟಿ ಎಂಆರ್‌ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾದ ಬದಲಾವಣೆಗಳು ಹೀಗಿವೆ.

Advertisement

ಸಾರ್ವಜನಿಕ ಸಾರಿಗೆ ಬೇಡ
ಲಾಕ್‌ಡೌನ್‌ ನಿಯಮಗಳು ಸಡಿಲಗೊಂಡ ನಂತರವೂ ಸಾರ್ವಜನಿಕ ಸಾರಿಗೆಯನ್ನು ನಾವು ಬಳಸುವುದಿಲ್ಲ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.70ರಷ್ಟು ಮಂದಿ ಹೇಳಿದ್ದಾರೆ.

ಶೇ.62ರಷ್ಟು ಮಂದಿ ಓಲಾ, ಉಬರ್‌ನಂತಹ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳನ್ನೂ ಬಳಸುವುದಿಲ್ಲ ಎಂದಿದ್ದಾರೆ. ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯುವ ಬಗ್ಗೆ ಬಹುತೇಕರು ದೃಢ ನಿರ್ಧಾರ ಮಾಡಿದ್ದಾರೆ.

ಮಾಲ್‌ಗ‌ಳಿಗೆ ಹೋಗುವುದಿಲ್ಲ
ಶಾಪಿಂಗ್‌, ಖರೀದಿ ಇತ್ಯಾದಿಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿರುವ ಅನೇಕ ಜನರಲ್ಲಿ ಶೇ.71ರಷ್ಟು ಜನ ಇನ್ನೂ ಕೆಲವು ದಿನ ಮಾಲ್‌ಗ‌ಳಿಗೆ, ಸೂಪರ್‌ ಮಾರ್ಕೆಟ್‌ಗಳಿಗೆ ಭೇಟಿ ನೀಡುವುದಿಲ್ಲ ಎಂದಿದ್ದಾರೆ. ಶೇ.80ರಷ್ಟು ಮಂದಿ ತಾವು ಇ-ಖರೀದಿ ಮೂಲಕ ಸಾಮಗ್ರಿಗಳನ್ನು ತರಿಸುವುದಾಗಿ ಹೇಳಿದ್ದಾರೆ.

ನಿರುದ್ಯೋಗ ಏರುತ್ತೆ
ನಿರುದ್ಯೋಗ ಪ್ರಮಾಣ ಜಾಸ್ತಿಯಾಗುತ್ತದೆ ಎಂಬ ಆತಂಕವನ್ನು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ ಶೇ.50ರಷ್ಟು ಮಂದಿ ವ್ಯಕ್ತಪಡಿಸಿದ್ದಾರೆ. ಇನ್ನು ಖಾಸಗಿ ವಲಯದಲ್ಲಿ ಉದ್ಯೋಗ ಅಭದ್ರತೆ ಹೆಚ್ಚಲಿದೆ ಎಂದು ಹೇಳಿದವರ ಪ್ರಮಾಣ ಶೇ.53ರಷ್ಟು.

Advertisement

ಆರೋಗ್ಯಸೇತು ಆ್ಯಪನ್ನು ಬಳಸಲು ಬಯಸಿದವರ ಸಂಖ್ಯೆ: 77%

ಸಿಗರೇಟು, ಮದ್ಯ ಸಿಗದಿರುವುದೇ ಒಳಿತು ಎಂದವರ ಪ್ರಮಾಣ: 80%

ನಿರ್ಬಂಧ ಮುಗಿದ ಮೇಲೆ ಅಂತರ್ಜಾಲ ಬ್ಯಾಂಕಿಂಗ್‌ ವ್ಯವಹಾರ ಶೇ.90ಕ್ಕೇರುವ ಸಾಧ್ಯತೆ

Advertisement

Udayavani is now on Telegram. Click here to join our channel and stay updated with the latest news.

Next