Advertisement

ಜನತೆ ಎಚ್ಚೆತ್ತುಕೊಳ್ಳಬೇಕು

12:14 PM Mar 25, 2019 | Lakshmi GovindaRaju |

ಬೆಂಗಳೂರು: ಸಮಾಜದಲ್ಲಿ ಮನುಷ್ಯತ್ವದಿಂದ ನಾವೆಲ್ಲರೂ ಒಂದೇ ಎಂದು ಕಾಣದ ಧರ್ಮ, ಅದು ಧರ್ಮವೇ ಅಲ್ಲ.ಇಂತಹ ಒಡೆದಾಳುವ ಶಕ್ತಿಗಳ ವಿರುದ್ಧ ಜನರು ಎಚ್ಚೆತ್ತು ಕೊಳ್ಳಬೇಕಾದ ಅಗತ್ಯವಿದೆ ಎಂದು ಸಾಹಿತಿ ಡಾ.ಪಿ.ವಿ.ನಾರಾಯಣ ಹೇಳಿದರು.

Advertisement

ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ “ಕುವೆಂಪು ಕನ್ನಡ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ಜನರನ್ನು ವಿಭಜಿಸಿ, ಮತ ಹಾಕಿಸಿಕೊಳ್ಳುವ ರಾಜಕಾರಣಿಗಳ ವಿರುದ್ಧ ಜನರು ಎಚ್ಚೆತ್ತುಕೊಳ್ಳಬೇಕಾದ ಅಗತ್ಯವಿದೆ ಎಂದರು.

ಕನ್ನಡ ಕೇವಲ ಒಂದು ಭಾಷೆ ಅಲ್ಲ.ಅದೊಂದು ಭಾವ, ಕನ್ನಡ ನಮಗೆ ಸರ್ವವೂ ಆಗಿರುವುದರಿಂದ ಅದನ್ನು ಒಂದು ನಿರ್ದಿಷ್ಟ ಆಕಾರ, ಸ್ವರೂಪಕ್ಕೆ ಇಳಿಸಿ ಸೀಮಿತ ಅರ್ಥ ಕಲ್ಪಿಸಬಾರದು. ಆದಿ ಪಂಪ, ರನ್ನ, ಕುಮಾರವ್ಯಾಸ, ಅಮೋಘವರ್ಷ ನೃಪತುಂಗ ಕನ್ನಡಿಗರಾಗಿದ್ದರು. ಆದರೆ, ಭಾರತೀಯರಾಗಿರಲಿಲ್ಲ ಎಂದು ಹೇಳಿದರು.

ಇದಕ್ಕೂ ಮೊದಲು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ದೂರದರ್ಶನ ಕೇಂದ್ರದ ವಿಶ್ರಾಂತ ಹೆಚ್ಚುವರಿ ಮಹಾ ನಿರ್ದೇಶಕ ಡಾ.ಮಹೇಶ್‌ ಜೋಶಿ ಸಂಗೀತಕ್ಕೆ ಗಡಿ ಎಂಬುವುದ ಇಲ್ಲ.ಎಲ್ಲರನ್ನೂ ಬೆಸೆಯುವ ದಿವ್ಯಶಕ್ತಿ ಸಂಗೀತಕ್ಕಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next