Advertisement

ಕರ್ಫ್ಯೂ ಮೀರಿ ಮಠಕ್ಕೆ ಬಂದ ಭಕ್ತ ಸಮೂಹ

07:29 PM May 25, 2021 | Girisha |

ವಿಜಯಪುರ: ಜಿಲ್ಲೆಯ ಸ್ವಾಮೀಜಿಯೊಬ್ಬರು ಭಕ್ತರಿಗೆ ನೀಡಿದ ವಿಡಿಯೋ ಸಂದೇಶದ ಸಾರ ಅರಿಯದೇ ಅಪಾರ್ಥ ಮಾಡಿಕೊಂಡ ಭಕ್ತರು ಕೋವಿಡ್‌ ಕರ್ಫ್ಯೂ ಮೀರಿ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮರ್ಪಿಸಲು ಬಬಲಾದಿ ಮಠಕ್ಕೆ ಆಗಮಿಸಿದ ಘಟನೆ ಜರುಗಿದೆ.

Advertisement

ವಿಜಯಪುರ ಜಿಲ್ಲೆಯಲ್ಲಿ ಮದ್ಯದ ನೈವೇದ್ಯ ಜಾತ್ರೆ ನಡೆಯುವ ಮಠ ಎಂದೇ ಹೆಸರಾಗಿರುವ ಬಬಲೇಶ್ವರ ತಾಲೂಕಿನ ಹೊಳೆಬಬಲಾದಿ ಸದಾಶಿವ ಮುತ್ಯಾನ ಮಠದ ಸಿದ್ಧರಾಮಯ್ಯ ಶ್ರೀಗಳು, ಈ ಬಾರಿ ಕೋವಿಡ್‌ ಕರ್ಫ್ಯೂ ಮೀರಿ ಜನರು ಮನೆಯಿಂದ ಹೊರಗೆ ಬರಬೇಡಿ. ಮದ್ಯದ ನೈವೇದ್ಯ ಬೇಡ ಬೇಡ. ಬದಲಾಗಿ ಮನೆಯಲ್ಲೇ ಬೆಳ್ಳುಳ್ಳಿ ಹಾಕಿದ ಅಂಬಲಿ ನೈವೇದ್ಯ ಮಾಡಿ, ಮುತ್ಯಾನಿಗೆ ಸಮರ್ಪಿಸಿ, ಸೇವಿಸಿ ಎಂದು ಆಡಿಯೋ ಸಂದೇಶ ನೀಡಿದ್ದರು.

ಆದರೆ ಈ ಸಂದೇಶವನ್ನು ಅರ್ಥೈಸಿಕೊಳ್ಳುವಲ್ಲಿ ಎಡವಿದ ಬಬಲಾದಿ ಮಠದ ಭಕ್ತ ಸಮೂಹ, ಕೋವಿಡ್‌ ಕರ್ಫ್ಯೂ ಮೀರಿ ವಿವಿಧ ಗ್ರಾಮಗಳಿಂದ ಸಾವಿರಾರು ಭಕ್ತರು ಸೋಮವಾರ ಅಂಬಲಿ ನೈವೇದ್ಯ ಅರ್ಪಿಸಲು ಬಬಲಾದಿ ಮಠಕ್ಕೆ ಧಾವಿಸಿದ್ದು, ಪೊಲೀಸರು, ಮಠಕ್ಕೆ ಬಂದ ಭಕ್ತರನ್ನು ಮರಳಿ ಕಳಿಸುವಲ್ಲಿ ಹೆಣಗಾಡುವಂತೆ ಮಾಡಿದೆ. ಹೊಳೆ ಬಬಲಾದಿ ಮಠದ ಸದಾಶಿವ ಮಠದ ಸಿದ್ಧರಾಮಯ್ಯ ಶ್ರೀಗಳು ಎರಡು ವರ್ಷಗಳ ಹಿಂದೆ ಸದಾಶಿವ ಮಠದ ಕಾರ್ಣಿಕದ ಸಂದರ್ಭದಲ್ಲಿ ವೈದ್ಯರಿಗೂ ಮದ್ದು ತಿಳಿಯದ ವ್ಯಾದಿ ಜನರನ್ನು ಕಾಡಲಿದೆ ಎಂದು ಕಾರ್ಣಿಕ ಹೇಳಿದ್ದರು.

ಭವಿಷ್ಯದ ದಿನಗಳಲ್ಲಿ ಔಷಧಿ ಯೇ ಸಿಗದ ಕೋವಿಡ್‌ ಸಾಂಕ್ರಾಮಿಕ ಸೋಂಕು ರೋಗ ಬಾಧಿ ಸಿತ್ತು. ಇದೀಗ ಕೋವಿಡ್‌ ಎರಡನೇ ಅಲೆ ಜೋರಾಗಿರುವ ಸಂದರ್ಭದಲ್ಲಿ ಸರ್ಕಾರ ರೋಗ ನಿಗ್ರಹಕ್ಕಾಗಿ ಕೋವಿಡ್‌ ಕರ್ಫ್ಯೂ ಜಾರಿಗೆ ತಂದಿದೆ. ಹೀಗಾಗಿ ಆತಂಕದಲ್ಲಿರುವ ಭಕ್ತರು ಈ ಬಾರಿ ರೋಗ ಇನ್ನೂ ಉಲ್ಬಣಗೊಂಡಿದೆ. ನಿಯಂತ್ರಣಕ್ಕೆ ಪರಿಹಾರ ನೀಡಿ ಎಂದು ಹಲವು ಭಕ್ತರು ಶ್ರೀಗಳ ಮೊರೆ ಇಟ್ಟಿದ್ದರು. ಹೀಗಾಗಿ ಬಬಲಾದಿ ಸಿದ್ದರಾಮಯ್ಯ ಶ್ರೀಗಳು, ಸೋಮವಾರ ಭಕ್ತರು ಮದ್ಯದ ಬದಲಾಗಿ ಅಂಬಲಿ ನೈವೇದ್ಯ ಮಾಡಿ ಮನೆಯಲ್ಲೇ ಸಮರ್ಪಿಸಿ, ಎರಡು ಬೋಳು ಕಾಯಿ ಒಡೆಯಿರಿ. ಹುರಿದ, ಕರಿದ ಅಡುಗೆ ಮಾಡಬೇಡಿ ಹಾಗೂ ಮನೆಯಿಂದ ಹೊರಗೆ ಬರಬೇಡಿ.

ಮನೆಯಲ್ಲೇ ನೆಮ್ಮದಿಯಾಗಿರಿ ಎಂದು ವಿಡಿಯೋ ಮೂಲಕ ಮೂಲಕ ಸಾತ್ವಿಕ ಸಂದೇಶ ನೀಡಿದ್ದರು. ಆದರೆ ಸಿದ್ದರಾಮಯ್ಯ ಶ್ರೀಗಳ ಸಂದೇಶ ಅರ್ಥೈಸಿಕೊಳ್ಳುವಲ್ಲಿ ಎಡವಿದ ಭಕ್ತರು, ಸೋಮವಾರ ಸಾವಿರಾರು ಸಂಖ್ಯೆಯಲ್ಲಿ ಅಂಬಲಿ ನೈವೇದ್ಯ ಸಮೇತ ಗುಂಪು ಗುಂಪಾಗಿ ಶ್ರೀಮಠಕ್ಕೆ ಬಂದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಬಲೇಶ್ವರ ಪೊಲೀಸರು ಭಕ್ತರ ಮನವೊಲಿಸಿ ಮರಳಿ ಮನೆಗೆ ಕಳಿಸಲು ಹರಸಾಹಸ ಪಡುವಂತೆ ಮಾಡಿದೆ. ಇದರಿಂದ ಮತ್ತೂಂದು ವಿಡಿಯೋ ಸಂದೇಶ ಬಿಡುಗಡೆ ಮಾಡಿರುವ ಸಿದ್ದರಾಮಯ್ಯ ಶ್ರೀಗಳು, ಭಕ್ತರು ಯಾರೂ ಕೋವಿಡ್‌ ಸಂದರ್ಭದಲ್ಲಿ ಮನೆಯಿಂದ ಹೊರಗೆ ಬರಬೇಡಿ. ಮಠಕ್ಕೂ ಆಗಮಿಸಬೇಡಿ. ಕೋವಿಡ್‌ ಕರ್ಫ್ಯೂ ಉಲ್ಲಂಘಿ ಸದೇ ಮನೆಯಲ್ಲೇ ಪೂಜೆ ಮಾಡಿ, ನೈವೇದ್ಯ ಸಮರ್ಪಿಸಿ ಎಂದು ಸಂದೇಶ ನೀಡಿದ್ದಾರೆ. ಅಂಬಲಿ ಎಂದರೆ ಜೋಳದ ನುಚ್ಚಿಗೆ ಮಜ್ಜಿಗೆ, ಬೆಳ್ಳುಳ್ಳಿ ಬೆರೆಸಿದ ಗಂಜಿ ರೂಪದ ತೆಳುವಾದ ಆಹಾರವೇ ಅಂಬಲಿ.

Advertisement

ಈ ಅಂಬಲಿ ಸೇವನೆ ಆರೋಗ್ಯ ವೃದ್ಧಿಗೆ ಸಹಕಾರಿ ಎಂಬ ಕಾರಣಕ್ಕೆ ಶ್ರೀಗಳು ಅಂಬಲಿ ಸಂದೇಶ ನೀಡಿದ್ದರು. ಕೋವಿಡ್‌ ಸಂಕಷ್ಟ ಕಾಲದಲ್ಲಿ ಮನೆಯಲ್ಲಿಯೇ ಇರಿ ಎಂದು ಹಾಗೂ ಪೌಷ್ಟಿಕ ಆಹಾರವಾದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಕುಡಿಯಿರಿ ಎಂದು ನೀಡಿದ ಸಂದೇಶ ಅರ್ಥೈಸುವಿಕೆಯಲ್ಲಿ ಮುಗ್ಧ ಭಕ್ತರು ಮಾಡಿಕೊಂಡ ಗೊಂದಲ ಶ್ರೀಗಳನ್ನು, ಪೊಲೀಸರನ್ನು ಹೈರಾಣು ಮಾಡಿ¨

 

 

Advertisement

Udayavani is now on Telegram. Click here to join our channel and stay updated with the latest news.

Next