Advertisement

ರಂಗಿನಾಟದಲ್ಲಿ ಮಿಂದೆದ್ದ ಜನ

01:10 PM Mar 03, 2018 | |

ತಾಳಿಕೋಟೆ: ಪಟ್ಟಣದಲ್ಲಿ ಹೋಳಿ ಹುಣ್ಣಿಮೆ ನಿಮಿತ್ತ ಕಾಮದಹನ ಮಾಡುವ ಮೂಲಕ ಸ್ನೇಹಿತ ಮಿತ್ರರಿಗೆ ಹಿತೈಷಿಗಳಿಗೆ ರಂಗಿನಾಟದಲ್ಲಿ ಪರಸ್ಪರ ಬಣ್ಣ ಹಚ್ಚುವುದರೊಂದಿಗೆ ಮೊದಲನೆ ದಿನದ ರಂಗಿನಾಟಕ್ಕೆ ಯುವಕರು ಚಾಲನೆ ನೀಡಿದರು.

Advertisement

ಯುವಕರು ತಮ್ಮ ಸ್ನೇಹಿತರಿದ್ದ ಸ್ಥಳಕ್ಕೆ ತೆರಳಿ ಬಣ್ಣ ಹಚ್ಚಿ ರಂಗಿನಾಟದ ಸಂಭ್ರಮ ಹೆಚ್ಚಿಸುವಂತೆ ಮಾಡಿದರು. ನೃತ್ಯ ಮಾಡಲು ಕೆಲವು ಯುವಕರು ಹೆಣ್ಣು ಮಕ್ಕಳ ಉಡುಪು ತೊಟ್ಟು ನಡುರಸ್ತೆಯಲ್ಲಿ ಹಲಗೆ ಮಜಲಿಗೆ ತಕ್ಕಂತೆ ಕುಣಿಯುತ್ತ ಸಾಗಿದ್ದು ವಿಶೇಷವಾಗಿತ್ತು.

ಎಪಿಎಂಸಿ ಬಸವೇಶ್ವರ ಮಾರ್ಕೇಟ್‌ ಯಾರ್ಡ್‌ನಲ್ಲಿ ಪ್ರತಿಷ್ಠಾಪಿಸಲಾದ ರತಿ ಮನ್ಮಥರ ಮೂರ್ತಿಯ ಮುಂದೆ ಕೆಲವು ಯುವಕರು ಸೀರೆ ಕುಪ್ಪಸ ತೊಟ್ಟಿದ್ದರೆ, ಇನ್ನೂ ಕೆಲ ಯುವಕರು ಸೋಗಲಾಡಿತನದಿಂದ ಕಾಮರತಿಯರ ಹೆಸರಿನಿಂದ ಹಾಡ್ಯಾಡಿಕೊಂಡು ಬಾಯಿ ಬಡಿದುಕೊಳ್ಳುತ್ತ ಅಳುತ್ತಿದ್ದ ದೃಶ್ಯ ಜನರನ್ನು ರಂಜಿಸಿತು.

ನಂತರ ರತಿ ಮನ್ಮಥ ಮೂರ್ತಿ ಭವ್ಯ ಮೆರವಣಿಗೆ ಬಸ್‌ ನಿಲ್ದಾಣದ ಮುಂಭಾಗದ ರಸ್ತೆಯಿಂದ ರಾಣಾ ಪ್ರತಾಪ ಸರ್ಕಲ್‌, ಶಿವಾಜಿ ಸರ್ಕಲ್‌, ಬಾಲಾಜಿ ಮಂದಿರ ರಸ್ತೆ, ಕತ್ರಿ ಬಜಾರ, ಅಂಬಾಭವಾನಿ ಮಂದಿರದವರೆಗೆ ತೆರಳಿ ಅದೇ ಮಾರ್ಗವಾಗಿ ಮರಳಿ ಮಾರ್ಕೆಟ್‌ ಯಾರ್ಡ್‌ಗೆ ತಲುಪಿತು.

Advertisement

Udayavani is now on Telegram. Click here to join our channel and stay updated with the latest news.

Next