Advertisement

ರಾಯಚೂರು ಮಾರ್ಕೆಟ್ ಗಳಲ್ಲಿ ಜನವೋ ಜನ

01:45 PM May 19, 2021 | Team Udayavani |

ರಾಯಚೂರು: ಕಳೆದ ಮೂರು ದಿನಗಳಿಂದ ಲಾಕ್ ಡೌನ್ ಅನುಭವಿಸಿದ್ದಲ್ಲದೇ ಮುಂದಿನ ಮೂರು ದಿನವೂ ಲಾಕ್ ಡೌನ್ ಜಾರಿಗೊಳಿಸಿದ್ದರಿಂದ ರಾಯಚೂರು ಮಾರುಕಟ್ಟೆಗಳಲ್ಲಿ ಜನಜಂಗುಳಿಯೇ ನೆರೆದಿತ್ತು.

Advertisement

ಬಸವನಬಾವಿ ಸರ್ಕಲ್, ಮಹಾವೀರ್ ವ್ರತ್ತ, ಪಟೇಲ್ ರೋಡ್, ತರಕಾರಿ ಮಾರುಕಟ್ಟೆಗಳಲ್ಲಿ ಜನಸಂದಣಿ ಹೆಚ್ಚಾಗಿದ್ದರಿಂದ ಟ್ರಾಫಿಕ್ ಜಾಮ್ ಏರ್ಪಟ್ಟಿತ್ತು. ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತ ಇಂದಿನಿಂದ ಮತ್ತೆ ಮೂರು ದಿನ ಲಾಕ್ ಡೌನ್ ವಿಸ್ತರಿಸಿದೆ.

ಇದರಿಂದ ಜನ ಸಾಗರೋಪಾದಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಮಾಲಫ ಗಳಲ್ಲೂ ಜನಸಂದಡಿ ಮಿಕ್ಕಿ ಹೋಗಿತ್ತು. ಮಧ್ಯಾಹ್ನ 12 ಗಂಟೆವರೆಗೂ ಖರೀದಿಗೆ ಅವಕಾಶ ನೀಡಿದ್ದ ಕಾರಣ ನಗರ ಮತ್ತು ಗ್ರಾಮೀಣ ಭಾಗದ ಜನ ಏಕ ಕಾಲಕ್ಕೆ ನುಗ್ಗಿದಂತಾಗಿತ್ತು.

ಕಳೆದ ಮೂರು ದಿನದಿಂದ ಮಾರುಕಟ್ಟೆಗಳು ಸಂಪೂರ್ಣ ಸ್ಥಗಿತಗೊಂಡ ಕಾರಣ ಇಂದು ಬೆಳಗ್ಗೆ ವ್ಯಾಪಾರ ವಹಿವಾಟು ನಡೆಸಲು ಪೊಲೀಸರು ಕೂಡ ಅಡ್ಡಿ ಮಾಡಲಿಲ್ಲ. ಮಧ್ಯಾಹ್ನ 12ರ ಬಳಿಕ ಪೊಲೀಸರು ಪರಿಸ್ಥಿತಿ ಹತೋಟಿಗೆ ತರಲು ಮುಂದಾದರು. ಇನ್ನೂ ಮಾನ್ವಿಯಲ್ಲಿ ನಡೆದ ಸಂತೆಯಲ್ಲೂ ಜನ ಕಿಕ್ಕಿರಿದು ಸೇರಿದ್ದು.  ಮಾರುಕಟ್ಟೆಗೆ ನುಗ್ಗಿದ ಜನರನ್ನು ಕಂಡರೆ ಕೊರೊನಾ ವೈರಸ್ ಎಂಬುದೇ ಇಲ್ಲವೇನೋ ಎನ್ನುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next