Advertisement
ತಾಲೂಕಿನ ಅವರಾದಿ ಶಿವಪೇಟೆಯ ಓಂ ಶಿವ ಮೇಳದ ಆಶ್ರಯದಲ್ಲಿ ನಡೆಯುತ್ತಿರುವ ಜಾನಪದ ಮಹಾಸಮ್ಮೇಳನ ಮೆರವಣಿಗೆ ಪಟ್ಟಣದ ವಿದ್ಯಾಚೇತನ ಶಾಲಾ ಆವರಣದಿಂದ ಹೊರಟು, ಜುನಿಪೇಟ ಮಾರ್ಗವಾಗಿ ಹಳೆ ಪೊಲೀಸ್ ಠಾಣೆ, ತೇರ ಬಝಾರ್, ನೇಕಾರ ಪೇಟೆ, ರಾಧಾಪೂರ ಪೇಟೆಯಿಂದ ಮಾರ್ಕೆಟ್ ಗೇಟ್ ಮೂಲಕ ಹಾಯ್ದು ವಿದ್ಯಾ ಚೇತನ ಶಾಲೆಯಲ್ಲಿ ಕೊನೆಗೊಂಡಿತು.
Related Articles
Advertisement
ಮಾ. 22 ರಂದು ಮಂಗಳವಾರ ಬಸಲಿಂಗಯ್ಯ ಹಾಗೂ ಕೌಜಲಗಿ ವಿಠ್ಠಲ ವೇದಿಕೆಯಲ್ಲಿ ಜರುಗುವ ಜಾನಪದ ಶಿವರಾತ್ರಿ ಸಮಾರಂಭದ ಸಾನಿಧ್ಯವನ್ನು ರಬಕವಿ ಬ್ರಹ್ಮಾನಂದ ಆಶ್ರಮದ ಗುರು ಸಿದ್ಧೇಶ್ವರ ಸ್ವಾಮೀಜಿ ವಹಿಸಲಿದ್ದು, ಮಾಜಿ ಶಾಸಕ ಅಶೋಕ ಪಟ್ಟಣ ಅಧ್ಯಕ್ಷತೆ ವಹಿಸುವರು. ಉದ್ಯಮಿ ವಿಜಯ ಶೆಟ್ಟಿ, ಪ್ರದೀಪ ಪಟ್ಟಣ, ರಾಜೇಶ್ವರಿ ಮೆಟಗುಡ್ಡ, ಮುತ್ತುರಾಜ ಕೊಂಡಾ, ಮುಖ್ಯಾಕಾರಿ ರವಿ ಬಾಗಲಕೋಟೆ, ಸಿಪಿಐ ಐ.ಆರ್. ಪಟ್ಟಣಶೆಟ್ಟಿ, ಆಗಮಿಸುವರು. ಬೆಂಬಳಗಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಪ್ರಕಾಶ ತೆಗ್ಗಿಹಳ್ಳಿ ಉಪನ್ಯಾಸ ನೀಡುವರು. ಡಾ| ಎಂ.ಎನ್. ಸಿದ್ಧಗಿರಿ ಪ್ರಾಸ್ತಾವಿಕ ಮಾತನಾಡುವರು.
ಇದೇ ಸಂದರ್ಭದಲ್ಲಿ ಜಾನಪದ ಶಿವಶ್ರೀ ಪ್ರಶಸ್ತಿ ಪ್ರದಾನ, ಜಾನಪದ ಕಲಾ ಪ್ರೋತ್ಸಾಹಿಗಳ ಸಮ್ಮಾನ, ಸಮ್ಮೇಳನಕ್ಕೆ ಸಹಾಯ ನೀಡಿದ ಸನ್ಮಾನ್ಯರ ಸತ್ಕಾರ ನಡೆಯುವದು. ನಂತರ ಜಾನಪದ ಕಲಾ ಸಂಭ್ರಮ ಜರುಗಲಿದೆ.