Advertisement
ಮಂಗಳೂರು ಉತ್ತರ ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣೆ ಸಂಬಂಧ ರಾಜಕೀಯ ಪಕ್ಷಗಳ ಮನೆಮನೆ ಭೇಟಿ ಕಾರ್ಯಕ್ರಮದ ಸಂದರ್ಭ ನಡೆದ ಸ್ವಾರಸ್ಯಕರ, ಅಷ್ಟೇ ಅರ್ಥಪೂರ್ಣವಾದ ಸಂಭಾಷಣೆ. ಇದು ಉದಯವಾಣಿ ಕ್ಷೇತ್ರ ಸಂಚಾರ ಸಮಾಚಾರ ತಂಡದ ಗಮನಸೆಳೆಯಿತು.
ಅಲ್ಲಿಂದ ‘ಉದಯವಾಣಿ’ ತಂಡ ಕುಪ್ಪೆಪದವಿಗೆ ಹೋಗುವ ಬಸ್ ಮೂಲಕ ಪ್ರಯಾಣಿಸಿ ಮತದಾರರ ಅಭಿಪ್ರಾಯ-ಪ್ರತಿಕ್ರಿಯೆ ಪಡೆಯುವ ಪ್ರಯತ್ನ ಮಾಡಿತು. ಕೈಕಂಬ ಬಸ್ಸು ನಿಲ್ದಾಣ ಬಸ್ ನಿಲ್ದಾಣ ಪ್ರಯಾಣಿಕರಿಂದ ತುಂಬಿತ್ತು. ಜನರು ಮೆಹಂದಿ, ಮದುವೆ ಸಮಾರಂಭ, ಭೂತದ ಕೋಲ, ನೇಮ ಈ ವಿಚಾರವನ್ನೇ ಮಾತನಾಡುತ್ತ ನಿಂತಿದ್ದರು. ಸೆಕೆಯ ಕಿರಿಕಿರಿಗೆ ಹಿಡಿಶಾಪ ಹಾಕುತ್ತ ಪಿಯು – ಎಸೆಸ್ಸೆಲ್ಸಿ ಫಲಿತಾಂಶ, ಮಕ್ಕಳ ಅಡ್ಮಿಶನ್ ನಡುವೆ ಚುನಾವಣೆಯೂ ಬಂದಿದೆ ಎನ್ನುತ್ತ ಯಾವುದಕ್ಕೂ ಪುರುಸೊತ್ತೇ ಇಲ್ಲ ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
Related Articles
Advertisement
ಮತಗಟ್ಟೆ ಒಳಗೆ ಯಾರಿಗೆ ಮತ -ಗೊತ್ತೇ ಆಗಲ್ಲ!ಅಲ್ಲಿಯೇ ಇದ್ದ ಕುಳವೂರಿನ ಫಕ್ರುದ್ದೀನ್ ಅವರನ್ನು ಮಾತನಾಡಿಸಿದಾಗ ‘ಇಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳಾಗಿವೆ. ಆದರೆ ಮತದಾನ ಕೇಂದ್ರದ ಒಳಗೆ ಹೋದ ಮೇಲೆ ಮತದಾರ ಓಟು ಯಾರಿಗೆ ಕೊಡುತ್ತಾನೆ ಎಂಬುದು ಹೇಳಲು ಸಾಧ್ಯವಿಲ್ಲ. ಅದು ಗುಟ್ಟಾಗಿ ಇರುತ್ತದೆ’ ಎಂದರು. ಅಲ್ಲಿಂದ ರಿಕ್ಷಾ ಏರಿ ಕುಪ್ಪೆಪದವಿನ ದಾರಿಯಲ್ಲಿ ಸಾಗುತ್ತಾ ಚಾಲಕರನ್ನು ಮಾತಿಗೆಳೆದಾಗ ‘ಎಲ್ಲವೂ ಮಾಮೂಲು ಆಗಿ ಇದೆ’ ಎಂದಷ್ಟೇ ಹೇಳಿದರು. ಕುಪ್ಪೆಪದವು ಬಸ್ಸು ನಿಲ್ದಾಣದ ಬಳಿ ಅಂಗಡಿಯಲ್ಲಿ ಕುಳಿತಿದ್ದ ನಾಲ್ವರು ಮಾತಿಗೆ ಸಿಕ್ಕಿದರು. ‘ಮೂಲು ಮೂಜಿ ಪಾರ್ಟಿ ಪ್ರಚಾರ ಮಲ್ತೊಂದು ಉಂಡು. ಈ ಸರ್ತಿ ಮಾತ್ರ ಯಾನ್ ವೋಟ್ ಪಾಡಂದೆ ಕುಲ್ಲುಜ್ಜಿ. ಆನಿ ರಜೆ ಪಾಡ್ದಾಂಡಲಾ ಓಟು ಪಾಡರ ಪೋಪೆ’ (ಈ ಬಾರಿ ಮಾತ್ರ ಮತದಾನ ಮಾಡಿಯೇ ಮಾಡುತ್ತೇನೆ. ರಜೆ ಹಾಕಿದ್ರೂ ಪರವಾಗಿಲ್ಲ ಓಟು ಮಿಸ್ ಮಾಡಲ್ಲ) ಎಂದರು ಒಬ್ಬರು. ಎಡಪದವು, ಗಂಜಿಮಠದ ಮಳಲಿ ಕ್ರಾಸ್ ರಸ್ತೆಯ ಪ್ರದೇಶದಲ್ಲಿ ಮತದಾರರು ಮತದಾನದ ಬಗ್ಗೆ ಜಾಗೃತಿ ವ್ಯಕ್ತಪಡಿಸಿದರು. ಓಟು ಮಿಸ್ ಮಾಡಿಕೊಳ್ಳುವುದಿಲ್ಲ ಎಂದರು. ಬಹುತೇಕ ಭಾಗ ಸುತ್ತಾಡಿ, ಬಜಪೆ ಪೊಲೀಸ್ ಠಾಣೆ ರಸ್ತೆಯಾಗಿ ನಡೆದುಕೊಂಡು ಮುರನಗರಕ್ಕೆ ಹೋಗುತ್ತಿರಬೇಕಾದರೆ, ಆದ್ಯಪಾಡಿಯ ಯಶೋದಾ ಕಾಣಿಸಿದರು. ಚುನಾವಣೆ ಬಗ್ಗೆ ಅವರನ್ನು ಕೇಳಿದಾಗ ‘ವೋಟು ಬನ್ನಗ ಕೈಲಾ, ಕಾರ್‌ಲಾ ಪತ್ತುವೆರ್! ವೋಟ್ ಕೇನೆರೆ ಬರ್ಪುನಕ್ಲೆನ ಕಾರುಬಾರು ಮೂಲು ಜೋರು ಉಂಡು’ (ಚುನಾವಣೆ ಬಂದಾಗ ಕೈಯೂ ಕಾಲೂ ಹಿಡಿಯುತ್ತಾರೆ. ಇಲ್ಲಿಯೂ ಓಟು ಕೇಳುವವರ ಕಾರುಬಾರು ಜೋರು ಇದೆ.) ಎನ್ನುತ್ತ ಆದ್ಯಪಾಡಿಯತ್ತ ಬಸ್ ಏರಿದರು. ಗುಟ್ಟನ್ನು ಬಿಟ್ಟು ಕೊಡುವುದಿಲ್ಲ
ಇಲ್ಲಿ ಪ್ರಮುಖ ಪಕ್ಷಗಳು ಒಂದೇ ತರಹ ಪ್ರಚಾರ ಮಾಡುತ್ತಿವೆ. ಮನೆ-ಮನೆ ಪ್ರಚಾರ ಮಾತ್ರ ಇದೆ. ಮತದಾರರಲ್ಲಿಯೂ ಬದಲಾವಣೆ ಆಗಿದ್ದು, ತಮ್ಮ ಮತದಾನದ ಗುಟ್ಟನ್ನು ಯಾರು ಬಿಟ್ಟುಕೊಡುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ.
– ಸಿಲ್ವೆಸ್ಟರ್ ಫೆರ್ನಾಂಡಿಸ್, ಮಳಲಿ
ಕ್ರಾಸ್ ನಿವಾಸಿ ನಾವು ಕೂಲಿ ಕಾರ್ಮಿಕರು, ಬಡವರು. ಕೆಲಸ ಮಾಡಿಯೇ ಜೀವನ ಸಾಗಿಸುವವರು. ಯಾರು ಬಂದರೂ ನಮಗೆ ಒಂದೇ. ಚುನಾವಣೆಯ ದಿನ ಬೆಳಗ್ಗೆ ಬೇಗ ಹೋಗಿ ಅಥವಾ ರಜೆ ಮಾಡಿಯಾದರೂ ಮತದಾನ ಮಾಡುತ್ತೇವೆ . ನಮ್ಮ ಓಟಿನಿಂದಲೇ ಜಯ ಗಳಿಸುತ್ತಾರೆ, ಮತ್ತೆ ನಮ್ಮನ್ನು ಮರೆಯುತ್ತಾರೆ.
-ಭರತೇಶ್, ಗುರುಪುರ ಕೈಕಂಬ ಸುಬ್ರಾಯ ನಾಯಕ್ ಎಕ್ಕಾರು