ಹೊಸ ದೆಹಲಿ;- ನೀವೀಗ ಜೀವನ ಪ್ರಮಾಣ ಪತ್ರ ಪಡೆಯಲು ಕಛೇರಿಗಳಿಗೆ ಅಲೆದು, ಮಧ್ಯವತಿಗಳನ್ನು ಸಂಪರ್ಕಿಸಬೇಕಾದ ಅವಶ್ಯಕತೆಗಳಿಲ್ಲ. ಸೈಬರ್‌ಗಳಲ್ಲಿ ಆಧಾರ್ ಆಧಾರ್ ಪ್ರಮಾಣಿಕರಿಸಿ ಅರ್ಜಿ ಹಾಕುವ ಬದಲು ಮೊಬೈಲ್ ಮತ್ತು ವಿಂಡೋಸ್ ಆಫ್‌ಗಳ ಮೂಲಕ ಪ್ರಮಾಣ ಪತ್ರವನ್ನು ಪಡೆಯಬಹುದು.
ಪಿಂಚಣೆ ಪಡೆಯುವ ಕೇಂದ್ರ ಅಥವಾ ರಾಜ್ಯ ಮತ್ತು ಉಲಿದ ಯಾವುದೇ ಸಂಸ್ಥೆಯಲ್ಲಿ ದುಡಿಯುವ ನೌಕರರು ಈ ಸೌಲಭ್ಯ ಪಡೆದುಕೊಳ್ಳಬಹುದು. ಪ್ರಸ್ತುತ 35 ಲಕ್ಷ ಇಪಿಎಫ್ ಸಂಸ್ಥೆಗಳ ಪಿಂಚಣೀದಾರರು ಈ ಸೌಲಭ್ಯ ಪಡೆದುಕೊಳ್ಳಲು ಅರ್ಹರು.
ಇದನ್ನೂ ಓದಿ;- ಶಾರುಖ್ ಖಾನ್ ಪುತ್ರನಿಗೆ ಸಿಗದ ಜಾಮೀನು | ಅ. 7 ರವರೆಗೆ ಎನ್‍ಸಿಬಿ ಕಸ್ಟಡಿಗೆ
ಮುಬೈಲ್ ಮತ್ತು ಕಂಪ್ಯೂಟರ್ ಮೂಲಕ ಜೀವನ್ ಪ್ರಮಾಣ ಪತ್ರ ಸುಲಭವಾಗಿ ಪಡೆಯಲು ಅನುಸರಿಸಬೇಕಾದ ವಿಧಾನ ಇಲ್ಲಿದೆ…
- https://jeevanpramaan.gov.in ಈ ಕೊಂಡಿಯ ಮೂಲಕ “ಜೀವನ್ ಪ್ರಮಾಣ್” ಆಫ್ ಡೌನ್‌ಲೋಡ್ ಮಾಡಿಕೊಳ್ಳಿ.
- ನಿಮ್ಮ ಈ- ಮೇಲ್ ಐಡಿ ನೀಡಿ ಅನುಮತಿ ನೀಡಿ.
- ಒಟಿಪಿ ನಿಮ್ಮ ಮೇಲ್‌ಗೆ ಕಳುಹಿಸಲಾಗುವುದು.
- ಒಟಿಪಿ ಎಂಟರ್ ಮಾಡಿ, ಹೊಸ ಪೇಜ್ ತರೆದುಕೊಳ್ಳುತ್ತದೆ,
- ಅಲ್ಲಿ ನಿಮ್ಮ ಪ್ರಮಾನ ಪತ್ರ ಡೌನ್‌ಲೋಡ್‌ಗೆ ಅನುಮತಿ ನೀಡಿದಾಕ್ಷಣ ʼಜಿಪ್ʼ ಫೈಲ್ ಡೌನ್‌ಲೋಡ್ ಆಗುತ್ತದೆ.
ಈ ಪ್ರಮಾಣ ಪತ್ರವನ್ನು ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆಯನ್ನು ಕಲ್ಪಿಸುವ 12 ರಾಷ್ಟ್ರೀಕೃತ ಬ್ಯಾಂಕ್‌ಗಳು “ಅಂಬ್ರೆಲ್ಲಾ ಆಫ್ ಡೋರ್ ಸ್ಟೆಫ್ ಬ್ಯಾಂಕಿಂಗ್ʼ ಎಂಬ ಯೋಜನೆಯಡಿಯಲ್ಲಿ ಈ ಸೌಲಭ್ಯಗಳನ್ನು ಮತ್ತು ಪಿಂಚಣಿದಾರರಿಗೆ ಜೀವನ ಪ್ರಮಾಣ ಪತ್ರವನ್ನು ಒದಗಿಸುತ್ತವೆ. ಆರ್ ಬಿ ಐನ ನೇರ ವೀಡಿಯೋಗಳ ಮೂಲಕ ಪ್ರಮಾಣಿಕರಿಸಿ, ಬಯೋ ಮೆಟ್ರಿಕ್ ಮೂಲಕ ದೃಢೀಕರಿಸುವಂತೆ ಸೂಚಿಸಿದೆ.