Advertisement

ಬಾಕಿ ಇದೆ ಎಚ್‌-1ಬಿ ವೀಸಾ

08:11 AM Nov 10, 2018 | Team Udayavani |

ವಾಷಿಂಗ್ಟನ್‌: ಹಿಂದೆಂದಿಗಿಂತಲೂ ಈಗ ಹೆಚ್ಚಿನ ಪ್ರಮಾಣದಲ್ಲಿ ಎಚ್‌-1ಬಿ ವೀಸಾ ಅರ್ಜಿಗಳನ್ನು ಅಮೆರಿಕ ಬಾಕಿ ಇಟ್ಟುಕೊಂಡಿದೆ ಎಂದು ಅಮೆರಿಕದಲ್ಲಿನ ಮಾಹಿತಿ ತಂತ್ರಜ್ಞಾನ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ. ಗೂಗಲ್‌, ಫೇಸ್‌ಬುಕ್‌ ಮತ್ತು ಮೈಕ್ರೋಸಾಫ್ಟ್ ಸೇರಿದಂತೆ ಪ್ರಮುಖ ಐಟಿ ಕಂಪನಿಗಳ ಉದ್ಯೋಗ ಒಕ್ಕೂಟ ಕಾಂಪೀಟ್‌ ಈ ಕ್ರಮ ಪ್ರಶ್ನಿಸಿದೆ. ಅಮೆರಿಕ ದ ವಲಸೆ  ಕಚೇರಿಯು ತನ್ನದೇ ನಿಯಮಗಳನ್ನು ಉಲ್ಲಂ ಸುತ್ತಿದೆ ಎಂದಿದೆ. ಎಚ್‌1ಬಿ ವೀಸಾ ನೀಡುವಲ್ಲಿ ನಾವು ಮೂರು ಬದಲಾವಣೆಗಳನ್ನು ಗಮನಿಸಿ ದ್ದೇವೆ. ಇವು ನೌಕರರಿಗೆ ಸಮಸ್ಯಾತ್ಮಕವಾಗಿವೆ ಎಂದು ಗೃಹ ಸಚಿವ ಕ್ರಿಸ್ಟೆನ್‌ ನಿಲ್ಸನ್‌ಗೆ ಬರೆದ ಪತ್ರದಲ್ಲಿ ವಿವರಿಸಿದೆ.

Advertisement

ಪ್ರಸ್ತುತ ರಾಯಭಾರ ಕಚೇರಿಗಳು ವೀಸಾ ಅರ್ಜಿಗಳನ್ನು ಪ್ರಕ್ರಿಯೆಗೊಳಿಸುವಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು ನೀತಿ ನಿಯಮಗಳಿಗೆ ಅನುಗುಣವಾಗಿಲ್ಲ. ನಿಶ್ಚಿತತೆ ಹಾಗೂ ಸ್ಥಿರತೆ ಇಲ್ಲದ್ದರಿಂದ ಉದ್ಯೋಗಿಗಳಲ್ಲಿ ಆತಂಕ ಮನೆ ಮಾಡಿದೆ. ವಿದೇಶದ ಕುಶಲ ಹಾಗೂ ಪರಿಣಿತ ವೃತ್ತಿಪರರನ್ನು ಕಂಪನಿಗಳು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆಯ ಮೇಲೆ ಆಘಾತ ಉಂಟು ಮಾಡಿದೆ ಎಂದು ಪತ್ರದಲ್ಲಿ ಆಕ್ಷೇಪಿಸಲಾಗಿದೆ. ಪ್ರತಿ ವರ್ಷ 65 ಸಾವಿರ ಎಚ್‌1 ಬಿ ವೀಸಾ ನೀಡಲಾಗುತ್ತದೆ.

ಕುಶಲಿಗರಿಗೆ ಮಾತ್ರ: ಎಚ್‌ -1ಬಿ ವೀಸಾವನ್ನು ಅತ್ಯಂತ ಕುಶಲ ವೃತ್ತಿಪರರಿಗೆ ಮಾತ್ರ ನೀಡಬೇಕು. ಸದ್ಯ ಸಾಮಾನ್ಯ ಹೊರಗುತ್ತಿಗೆ ಕೆಲಸಕ್ಕಾಗಿ ಈ ವೀಸಾ ಬಳಕೆಯಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚಿಸಿದ್ದಾರೆ. ಇದೇ ವೇಳೆ ಎಚ್‌-4 ವೀಸಾ ನೀಡಿಕೆ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯ ಕೋರಲೂ ಅಮೆರಿಕ ಸರಕಾರ ಮುಂದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next