Advertisement
2018ರ ಅಕ್ಟೋಬರ್ ತಿಂಗಳ ಕೊನೆಯಲ್ಲಿ ಈ ಯೋಜನೆ ಪ್ರಕಾರ ಕೃಷಿಗೆ ಹೊರಟಿದೆ. ರಾಜ್ಯ ಸರಕಾರದ ಕನಸಾಗಿರುವ ಯೋಜನೆಗಳಲ್ಲಿ ಒಂದಾದ ಹಸುರು ಕೇರಳ ಮಿಷನ್ ನೇತೃತ್ವದಲ್ಲಿ ಪರಂಪರಾಗತ ಭತ್ತದ ಯೋಜನೆ ಇಲ್ಲಿ ಸಾಕಾರಗೊಳ್ಳುತ್ತಿದೆ. ಗದ್ದೆ ಸಮಿತಿಯ 15 ಕೃಷಿಕರು ಯೋಜನೆಯ ಫಲಾನುಭವಿಗಳಾಗಿದ್ದಾರೆ. ಯೋಜನೆಯ ಅಂಗವಾಗಿ ಅಪೂರ್ವ ತಳಿಯಾಗಿರುವ 30 ರೀತಿಯ ಭತ್ತದ ಬೀಜವನ್ನು ಇವರಿಗೆ ಮೊದಲ ಹಂತವಾಗಿ ವಿತರಿಸಲಾಗಿದೆ. ಪ್ರತಿ ಕೃಷಿಕ 15 ಸೆಂಟ್ಸ್ ಜಾಗವನ್ನು ಬಿತ್ತನೆ ನಡೆಸಬೇಕು. ಮುಂದಿನ ಹಂತದಲ್ಲಿ ಅಪೂರ್ವ ತಳಿಗೆ ಸೇರಿದ 15 ರೀತಿಯ ಭತ್ತದ ಬೀಜವನ್ನು ವಿತರಿಸಲಾಗುತ್ತದೆ. ಈ ಮೂಲಕ ಪ್ರತಿ ಕೃಷಿಕನಿಗೆ 30 ಕಿಲೋ ಭತ್ತದ ಬೀಜ ಉತ್ಪಾದನೆ ಸಾಧ್ಯವಾಗಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ನಿರೀಕ್ಷಿಸಿದ್ದಾರೆ. ಈ ವರ್ಷ ಆಗಸ್ಟ್ ತಿಂಗಳ ವೇಳೆಗೆ 45 ರೀತಿಯ ಪರಂಪರಾಗತ ಭತ್ತದ ಬೀಜಗಳನ್ನು ಉತ್ಪಾದಿಸಲು ಸಾಧ್ಯವಾಗಲಿದೆ ಎಂದು ಅಂದಾಜಿಸಲಾಗಿದೆ.
Related Articles
Advertisement
ಕೃಷಿಕರಿಗೆ ಬೇಕಾದ ಎಲ್ಲ ರೀತಿಯ ಸಹಾಯಕ್ಕೆ ಇಲ್ಲಿನ ಕೃಷಿ ಇಲಾಖೆ ಸಿದ್ಧವಿದೆ. ಔಷಧೀಯ ಅಂಶ, ಉತ್ತಮ ಗುಣಮಟ್ಟ ಹೊಂದಿರುವ ಭತ್ತದ ಉತ್ಪಾದನೆಯ ಜೊತೆಗೆ ನೂತನ ಜನಾಂಗವನ್ನು ಕೃಷಿ ವಲಯದತ್ತ ಸೆಳೆಯುವ ಮತ್ತು ಆಹಾರ ಸುರಕ್ಷತೆ ಖಚಿತ ಪಡಿಸುವ ಉದ್ದೇಶವೂ ಪಿಲಿಕೋಡ್ ಗ್ರಾ. ಪಂಚಾಯತ್‌ಗೆ ಇದೆ.