Advertisement
ಸತ್ಯನಾರಾಯಣ ಬೇಳೇರಿ ಬಳಿಯಿಂದ 10 ಭತ್ತದ ತಳಿಗಳನ್ನು ಪಡೆದು ಕೆವಿಕೆ ಪ್ರಯೋಗದ ಗದ್ದೆಗಳಲ್ಲಿ ಬೆಳೆಸಿದ್ದು, ಕೆಲ ದಿನಗಳ ಹಿಂದೆಯಷ್ಟೇ ಕಟಾವು ನಡೆಸಿದ್ದಾರೆ. ಆ ಬಳಿಕ ಕೆಲವು ಪ್ರಗತಿಪರ ರೈತರನ್ನೂ ಕರೆದು ಅವರಿಗೆ ಈ ಭತ್ತ ತಳಿಗಳನ್ನು ತೋರಿಸಿ ಕ್ಷೇತ್ರೋತ್ಸವ ನಡೆಸಿದ್ದಾರೆ.
-ಕರಿಕಗ್ಗ: ಕರ್ನಾಟಕ ಮೂಲದ ತಳಿ. ಉಪ್ಪು ನೀರಿನ ನೆರೆ ಹಾವಳಿ ತಡೆದುಕೊಳ್ಳುವ ಗುಣ ಹೊಂದಿದ್ದು, ಹೆಚ್ಚು ಪ್ರೊಟೀನ್, ಪೋಷಕಾಂಶ ಹೊಂದಿದ್ದು, ಕುಚ್ಚಲಕ್ಕಿಗೆ ಸೂಕ್ತ. ತವಳ ಕಣ್ಣನ್: ಕೇರಳ ಮೂಲದ ನೆರೆ ನಿರೋಧಕ ತಳಿ.
– ನೆರೆಗುಳಿ: ತಗ್ಗು ನೆರೆ ಪ್ರದೇಶಕ್ಕೆ ಸೂಕ್ತ.
-ಜುಗಲ್: ಪಶ್ಚಿಮ ಬಂಗಾಳ ಮೂಲವಾಗಿದ್ದು, ಒಂದು ಭತ್ತದ ಕಾಳಿನಲ್ಲಿ ಎರಡು ಅಕ್ಕಿ ಕಾಳು ಇರುವುದು ವಿಶೇಷ.
-ಕಳಮೆ: ಕರ್ನಾಟಕ ಮೂಲದ್ದಾಗಿದ್ದು, ಕರಾವಳಿಯ ûಾರ ಪ್ರದೇಶಕ್ಕೆ ಸೂಕ್ತವಾಗಿದೆ.
-ಬರ ನೆಲ್ಲು: ಬರ ನಿರೋಧಕ ಗುಣ ಹೊಂದಿದೆ.
-ನವರ: ಕೇರಳ ರಾಜ್ಯದ ಅಲ್ವಾವಧಿ ತಳಿ. 70-75 ದಿನಗಳ ಫಸಲು ಅವಧಿ ಹೊಂದಿದೆ.
– ರಾಜಕಯಮೆ: ಕರ್ನಾಟಕ ಮೂಲದ ಎತ್ತರದ ತಳಿ. ಕಡಿಮೆ ಇಳುವರಿ, ಅಕ್ಕಿ ಹಳೆಯದಾದಂತೆ ರುಚಿ ಹೆಚ್ಚು.
-ರಕ್ತಶಾಲಿ ತಳಿ: ಕೇರಳ ಮೂಲಜ ಕೆಂಪಕ್ಕಿ ತಳಿ. ಔಷಧೀಯ ಗುಣ ಹೊಂದಿದ್ದು, ರಕ್ತ ಕೊರತೆ ನೀಗಿಸುತ್ತದೆ.
ಗಂಧಶಾಲೆ: ಕೇರಳದ ಸುಗಂಧಿತ ತಳಿ. ಕೆವಿಕೆ ವಿಜ್ಞಾನಿಗಳೇ ಆಸಕ್ತಿ ತೋರಿಸಿ, ಈ ಸುಗಂಧಿತ, ಔಷಧೀಯ ಗುಣಗಳುಳ್ಳ ವಿಶೇಷ ಪಾರಂಪರಿಕ ತಳಿಗಳನ್ನು ಸಂವರ್ಧಿಸುವ ಕೆಲಸ ಕೈಗೆತ್ತಿಕೊಂಡರು. ಇದನ್ನು ಇನ್ನಷ್ಟು ಸಂಶೋಧನೆ ಮಾಡಿ ಭತ್ತದ ತಳಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಕೆವಿಕೆ ಹಾಗೂ ಈ ಭಾಗದ ಕೃಷಿಕರು ಮಾಡುತ್ತಿರುವುದು ಸ್ವಾಗತಾರ್ಹ.
-ಪದ್ಮಶ್ರೀ ಬೇಳೇರಿ ಸತ್ಯನಾರಾಯಣ,
ಭತ್ತ ಬೆಳೆ ಸಂರಕ್ಷಕರು