Advertisement
ತೀರಾ ಹಿಂದಿನ ಸಂಪ್ರದಾಯಸ್ಥರು, ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು, ಹಿರಿಯ ಮುತ್ಸದ್ದಿ ರಾಜಕಾರಣಿಗಳು, ಹೀಗೆ ಅನೇಕಾನೇಕ ಮಾದರಿ ವ್ಯಕ್ತಿತ್ವದವರನ್ನು ಸ್ವಾಮಿಗಳಾಗಿಯೂ ಕಂಡು ಅವರವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡ ಅಪರೂಪದ ಸಂತರಲ್ಲಿ ಒಬ್ಬರು ಶ್ರೀಗಳು.
Related Articles
Advertisement
ಅವರನ್ನು ಸಮಾರಂಭಗಳಲ್ಲಿ ಎಷ್ಟೇ ಹೊಗಳಿದರೂ “ನಾನು ಏನೆಂದು ನನಗೆ ನಿಮಗಿಂತ ಹೆಚ್ಚಿಗೆ ಗೊತ್ತು. ನಾನು ಇನ್ನಷ್ಟು ಕೆಲಸಗಳನ್ನು ಮಾಡಬೇಕಾಗಿದೆ’ ಎಂದು ಹೇಳುತ್ತಿದ್ದುದು ಅವರ ಸಾಮಾಜಿಕ ಕಳಕಳಿಗೆ ಅತ್ಯುತ್ಕೃಷ್ಟ ಉದಾಹರಣೆ. ಕೀರ್ತಿ, ಪ್ರಸಿದ್ಧಿಗಳು ಯಾರು ಮಾಡಿದ್ದಾರೋ ಅವರಿಗೇ ಸಿಗಬೇಕೆಂಬ ಪ್ರಾಮಾಣಿಕತೆಯ ಸಂದೇಶವನ್ನು ನೀಡಿದ್ದರು. ಹಿಂದೆ ಶ್ರೀ ನಿತ್ಯಾನಂದ ಸ್ವಾಮಿಗಳು “ಪೇಜಾವರ ಶ್ರೀಗಳವರನ್ನು ದೇವದೂತ, ಕನಕದಾಸರು’ ಎಂದು ಬೇರೆಯವರ ಬಳಿ ಹೇಳಿದ್ದನ್ನು ಅವರ ಗಮನಕ್ಕೆ ತಂದಾಗ ಉಬ್ಬದೆ ಅದೆಲ್ಲ ನಮಗೆ ಗೊತ್ತಿಲ್ಲ. ನಾವು ಸಾಮಾನ್ಯರಲ್ಲಿ ಸಾಮಾನ್ಯ ಎಂಬ ವಿನಯವಂತಿಕೆ ತೋರಿದ್ದರು. ಯಾರೇ ಬಂದು ತಮಗೆ ಮಂತ್ರದೀಕ್ಷೆ ಕೊಡಬೇಕೆಂದಾಗ ಅದನ್ನು ಕೊಟ್ಟು ಅವರನ್ನು ಆಧ್ಯಾತ್ಮಿಕವಾಗಿ ಉದ್ಧರಿಸುವ ಕಾಳಜಿ ಅನ್ಯಾದೃಶವಾದುದು.
ತೀರಾ ಇತ್ತೀಚಿಗೆ ಪೇಜಾವರ ಮಠಕ್ಕೆ ಬಂದ ಯುವ ಸನ್ಯಾಸಿಯೊಬ್ಬರು ಎದ್ದು ನಿಂತು ಪೇಜಾವರ ಶ್ರೀಗಳಿಗೆ ಶಾಲು ಹೊದೆಸಿ ಗೌರವಿಸಿದಾಗ ಪೇಜಾವರ ಶ್ರೀಗಳೂ ಅವರಿಗೆ ಶಾಲು ಹೊದೆಸಿ ಗೌರವಿಸಿದರು. ಆದರೆ ಪೇಜಾವರ ಶ್ರೀಗಳಿಗೆ ಎದ್ದು ನಿಲ್ಲಲು ಆಗಲಿಲ್ಲ. ಆಗ ಸಂಕೋಚಪಟ್ಟು ವಯಸ್ಸಿನ ಕಾರಣ ನನಗೆ ಎದ್ದು ನಿಲ್ಲಲು ಆಗುತ್ತಿಲ್ಲ ಎಂದು ಯುವ ಮಠಾಧಿಪತಿಗೆ ತನ್ನ ಅಸಹಾಯಕತೆಯನ್ನು ತಿಳಿಸಿದ್ದರು. ಅವರ ಈ ಸೌಜನ್ಯಶೀಲಗುಣ, ವಿನಯವಂತಿಕೆ ಪೀಠಾಧೀಶರಿಗೆ, ಅಧಿಕಾರಸ್ಥರಿಗೆ ಆದರ್ಶಪ್ರಾಯವಾದುದು. ತಮಗೆ ಎಷ್ಟೇ ಕಷ್ಟಬಂದರೂ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಗುಣ, ಯಾರು ಎಷ್ಟೇ ತಪ್ಪು ಮಾಡಿದರೂ ತಮ್ಮ ತಪ್ಪನ್ನು ಒಪ್ಪಿಕೊಂಡಾಗ ಮನ್ನಿಸುವ ಕ್ಷಮಾಗುಣದಿಂದಲೇ ಅವರು ಇಷ್ಟು ಎತ್ತರಕ್ಕೆ ಏರಿದರು.
ಆದರ್ಶ ಗುಣಗಳ ಪ್ರತಿರೂಪದಂತಿದ್ದ, ವಿವಿಧ ಧರ್ಮ, ಪಂಥಗಳೊಂದಿಗೆ ಸೌಹಾರ್ದ ಸಂಬಂಧವನ್ನು ಇರಿಸಿಕೊಂಡು ಅವರಿಗೂ ಮಾರ್ಗದರ್ಶಕರಂತಿದ್ದರು ಶ್ರೀಗಳು. ಶ್ರೀಗಳ ಉತ್ತಮ ಆದರ್ಶ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಕಲ್ಯಾಣದಲ್ಲಿ ತೊಡಗುವುದೇ ಅವರಿಗೆ ಸಲ್ಲಿಸಬಹುದಾದ ಗೌರವ.
ಮಣಿಪಾಲ ಸಮೂಹ ಸಂಸ್ಥೆ ಮತ್ತು ಶ್ರೀಗಳ ಮಧ್ಯೆ ಅತ್ಯುತ್ತಮ ಸಂಬಂಧವಿತ್ತು. ಅಂಥ ನಿಜವಾದ ಧರ್ಮಯೋಗಿ, ಕರ್ಮಯೋಗಿಗೆ ನಮ್ಮ ಭಾವಪೂರ್ಣ ಶ್ರದ್ಧಾಂಜಲಿ.