Advertisement

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

03:31 PM Dec 20, 2024 | keerthan |

ಶಿವಮೊಗ್ಗ: ರೇಪಿಸ್ಟ್ ಗಳು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ, ಶಾಸಕರಾಗಿದ್ದಾರೆ. ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದವರ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ ಸಿ.ಟಿ.ರವಿ ವಿರುದ್ದ ಎಫ್ಐಆರ್ ಆಗಿ ತಕ್ಷಣ ಬಂಧಿಸುವ ಕೆಲಸವಾಗಿದೆ. ಸಿ.ಟಿ.ರವಿ ಮೇಲೆ ಸಚಿವರ ಪಿಎ, ಗೂಂಡಾಗಳು ಹಲ್ಲೆ ಮಾಡಲು ಬಂದಿದ್ದರು. ಸರಕಾರ ನೀಚತನ ಕೆಲಸ ಮಾಡಿದೆ ಎಂದು ಮಾಜಿ ಗೃಹ ಆರಗ ಜ್ಞಾನೇಂದ್ರ ಹೇಳಿದರು.

Advertisement

ಶುಕ್ರವಾರ (ಡಿ.20) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ನಲ್ಲಿ ವಾಗ್ವಾದದಲ್ಲಿ ತಪ್ಪು ಅಭಿಪ್ರಾಯದಿಂದ ಹಿರಿಯ ನಾಯಕ ಸಿ.ಟಿ.ರವಿ ವಿರುದ್ದ ಮೊಕದ್ದಮೆ ದಾಖಲು ಮಾಡಿದ್ದಾರೆ. ರಾತ್ರಿ ಅರೆಸ್ಟ್ ಮಾಡುವ ಕೆಲಸ ಮಾಡಿದ್ದಾರೆ. ಇದು ಧೂರ್ತ ಸರಕಾರ ಎಂದು ಕಿಡಿಕಾರಿದರು.

ರಾಜಕೀಯವಾಗಿ ಸಿ.ಟಿ.ರವಿ ಬೆಳೆಯುವುದು ಇವರಿಗೆ‌ ಬೇಕಾಗಿಲ್ಲ. ಹೀಗಾಗಿ ಅವರ ಜೀವವನ್ನೇ ಮುಗಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ. ತಕ್ಷಣ ಕೇಸ್ ವಾಪಸ್ ಪಡೆಯಬೇಕು, ಮತ್ತೆ ಈ ಪ್ರಕರಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next