Advertisement

 ಪೇಜಾವರ ಮಠ ಮುಂಬಯಿ ಶಾಖೆ: ಪೇಜಾವರ ಶ್ರೀ 3 ದಿನ ಮೊಕ್ಕಂ

02:04 PM Jul 17, 2018 | |

ಮುಂಬಯಿ: ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಾಧೀಶ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಜು. 28 -30 ರ ವರೆಗೆ ಸಾಂತಾಕ್ರೂಜ್‌ ಪೂರ್ವದ ಪ್ರಭಾತ್‌ ಕಾಲೋನಿಯ ಶ್ರೀ  ಪೇಜಾವರ ಮಠ ಮುಂಬಯಿ ಶಾಖೆಯಲ್ಲಿ ಮೊಕ್ಕಂ ಹೂಡಲಿದ್ದಾರೆ ಎಂದು ಮಠದ ಪ್ರಧಾನ ಶಾಖಾಧಿಕಾರಿ ರಾಮದಾಸ ಉಪಾಧ್ಯಾಯ ರೆಂಜಾಳ ತಿಳಿಸಿದ್ದಾರೆ.

Advertisement

ತಮ್ಮ  ಐದನೇ ಪರ್ಯಾಯ ಪೂರೈಸಿ ಇದೇ ಮೊದಲ ಬಾರಿಗೆ  ಮುಂಬಯಿಗೆ ಆಗಮಿಸಲಿರುವ ಶ್ರೀಗಳನ್ನು ಜು. 28 ರಂದು ಸಂಜೆ 5ಕ್ಕೆ ಸಾಂತಾಕ್ರೂಜ್‌ ಪೂರ್ವ ದಲ್ಲಿನ ಬಿಲ್ಲವರ ಭವನದಿಂದ ಭವ್ಯ ಶೋಭಾಯಾತ್ರೆಯೊಂದಿಗೆ  ಬರಮಾಡಿಕೊಳ್ಳಲಾಗುವುದು. ಬಳಿಕ ಸಂಜೆ 6ರಿಂದ ಶ್ರೀ ಪೇಜಾವರ ಮಠದ ಶಾಖೆಯಲ್ಲಿ ಶ್ರೀ ಪೇಜಾವರ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರ ಮಾರ್ಗದರ್ಶನ, ಮುಂಬಯಿಯಲ್ಲಿನ ತುಳು- ಕನ್ನಡಿಗರ, ಕರ್ನಾಟಕ ಜನತೆಯ ಸಂಘ- ಸಂಸ್ಥೆಗಳ ಸಹಯೋಗದೊಂದಿಗೆ ಬಿಎಂಸಿ ಮೇಯರ್‌ ಪ್ರೊ| ವಿಶ್ವನಾಥ್‌ ಮಹಾದೇಶ್ವರ್‌ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಗಳಿಗೆ ರಜಕ ತುಲಭಾರ ಸೇವೆ, ಸಾರ್ವಜನಿಕ ಸಮ್ಮಾನ ನಡೆಯಲಿದೆ. ಶ್ರೀಮಠದ ಬೃಹತ್‌ ಯೋಜನೆಗಳಲ್ಲಿ ಒಂದಾದ ಮಧ್ವಾಚಾರ್ಯರ ಜನ್ಮಸ್ಥಳ ಕುಂಜಾರುಗಿರಿ ಪಾದಕ ಕ್ಷೇತ್ರದಲ್ಲಿ ಎಂಜಿನಿಯರಿಂಗ್‌ ಕಾಲೇಜು ನಿರ್ಮಾಣ ಮತ್ತು ಬೆಂಗಳೂರು ಮಾರ್ಥಾಹಳ್ಳಿಯಲ್ಲಿ ಸುಮಾರು ಮೂರು ಎಕರೆ ಸ್ಥಳದಲ್ಲಿ ರೂಪಿಸುವ ಕೃಷ್ಣ ಸೇವಾಶ್ರಮದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ರಜಕ ತುಲಭಾರ ಸೇವೆಯ ಕೊಡುಗೆಯನ್ನು ಶ್ರೀಗಳು ವಿನಿಯೋಗಿಸಲಿದ್ದಾರೆ.

ಜು. 29 ರಂದು ಮತ್ತು ಜು. 30 ರಂದು ಶ್ರೀಪಾದರು ಮಠದಲ್ಲೇ ಇರಲಿದ್ದು ಅಂದು ಭಕ್ತಾಭಿಮಾನಿಗಳ ದರ್ಶನ, ಪಟ್ಟದ ದೇವರಾದ ಶ್ರೀ ರಾಮ ವಿಠಲ ದೇವರ ಮಹಾಪೂಜೆ, ತೀರ್ಥಪ್ರಸಾದ ವಿತರಣೆ, ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ. ಸೋಮವಾರ ಸಂಜೆ ಮತ್ತೆ ಶ್ರೀಗಳು ಬೆಂಗಳೂರಿಗೆ  ನಿರ್ಗಮಿಸಲಿದ್ದಾರೆ ಎಂದು ಶಾಖೆಯ ಪ್ರಬಂಧಕರುಗಳಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್‌, ನಿರಂಜನ್‌ ಗೋಗೆr ತಿಳಿಸಿದ್ದಾರೆ.

ಮಾಹಿತಿಗಾಗಿ 26126614 ಅಥವಾ  9892697670ನ್ನು ಸಂಪರ್ಕಿಸಬಹುದು. ಭಕ್ತರು ಶ್ರೀಗಳ ಎಲ್ಲ ಕಾರ್ಯಕ್ರಮಗಳಲ್ಲಿ ಸಹಭಾಗಿಗಳಾಗಿ ಶ್ರೀಕೃಷ್ಣ ದೇವರ ಕೃಪೆಗೆ ಪಾತ್ರರಾಗುವಂತೆ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ವಿಶ್ವಸ್ತ ಮಂಡಳಿ ಹಾಗೂ ಪೇಜಾವರ ಮಠ ಮುಂಬಯಿ ಪರವಾಗಿ ರಾಮದಾಸ ಉಪಾಧ್ಯಾಯ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next