Advertisement
ಈ ಸಂದರ್ಭದಲ್ಲಿ ಮಾತನಾಡಿದ ಎಪಿಎಂಸಿ ಮಾಜಿ ಅಧ್ಯಕ್ಷ ಚೇತನರಾಜ್ ಕಣ್ಣೂರು, ಭೂಗಳ್ಳರಿಂದ ಯಡೇಹಳ್ಳಿ ಗ್ರಾಮ ಪಂಚಾಯ್ತಿಯನ್ನು ಉಳಿಸಲು ಗ್ರಾಮ ಪಂಚಾಯ್ತಿಯ ಪ್ರತಿಯೊಬ್ಬರೂ ಸಂಘಟನೆಯಾಗಬೇಕು. ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿ ಗ್ರಾಮ ಪಂಚಾಯ್ತಿಯಲ್ಲಿ ಇರಬೇಕು ಎನ್ನುವ ಸ್ವಾರ್ಥವನ್ನು ಕೆಲವರು ಪ್ರದರ್ಶನ ಮಾಡುತ್ತಿದ್ದಾರೆ. ಯಡೇಹಳ್ಳಿ ಗ್ರಾಪಂಗೆ ವರ್ಗಾವಣೆಯಾಗಿ ಬಂದಿರುವ ಪಿಡಿಓ ಇಂದಿರಾ ಜ್ಯೋತಿ ತಮ್ಮ ಭೂಅಕ್ರಮಕ್ಕೆ ಸಹಕಾರ ನೀಡುವುದಿಲ್ಲ ಎಂದು ಅವರ ನಿಯೋಜನೆ ತಡೆ ಹಿಡಿಯುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಖಂಡನೀಯ. ಮರ ಕಡಿಯುವವರು, ಭೂಕಬಳಿಸುವವರು, ಅರಣ್ಯ ಒತ್ತುವರಿ, ಕೆರೆ ಒತ್ತುವರಿ ಮಾಡುವವರ ಬೆಂಬಲಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್.ಜಯಂತ್ ನಿಂತಿರುವುದು ಬೇಸರದ ಸಂಗತಿ. ಯಾವುದೇ ಕಾರಣಕ್ಕೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳು ಈಗಿನ ನಿಯೋಜನೆಯನ್ನು ರದ್ದು ಮಾಡಬಾರದು ಎಂದು ಒತ್ತಾಯಿಸಿದರು.
Advertisement
ಪಿಡಿಓ ವರ್ಗಾವಣೆ; ಸಾಗರ ತಾಪಂ ಎದುರು ಪ್ರತಿಭಟನೆ
10:32 PM Sep 21, 2022 | Vishnudas Patil |
Advertisement
Udayavani is now on Telegram. Click here to join our channel and stay updated with the latest news.