Advertisement

ಪಿಬಿಎಲ್‌: ಹೈದ್ರಾಬಾದ್‌ ತಂಡಕ್ಕೆ ಜಯ

03:45 AM Jan 02, 2017 | Team Udayavani |

ಹೈದ್ರಾಬಾದ್‌: ಪ್ರೀಮಿಯರ್‌ ಬ್ಯಾಡ್ಮಿಂಟನ್‌ ಲೀಗ್‌(ಪಿಬಿಎಲ್‌) 2ನೇ ಆವೃತ್ತಿಗೆ ಇಲ್ಲಿ ಚಾಲನೆ ಸಿಕ್ಕಿದೆ. ಉದ್ಘಾಟನಾ ಪಂದ್ಯದಲ್ಲಿ ಹೈದ್ರಾಬಾದ್‌ ಹಂಟರ್ 4-3ರಿಂದ ಚೆನ್ನೈ ಸ್ಮ್ಯಾಷರ್ ವಿರುದ್ಧ ಜಯಸಾಧಿಸಿದೆ.

Advertisement

ಮೊದಲ ಪಂದ್ಯದಲ್ಲೇ ಸಿಂಧುಗೆ ಆಘಾತ: ಕುತೂಹಲ ಹುಟ್ಟಿಸಿದ ಪಂದ್ಯ ಅಂದರೆ ಅದು ಚೆನ್ನೈ ಸ್ಮ್ಯಾಷರ್ನ ಪಿ.ವಿ.ಸಿಂಧು ಮತ್ತು ಹೈದ್ರಾಬಾದ್‌ ಹಂಟರ್ನ ಕ್ಯಾರೋಲಿನ್‌ ಮರಿನ್‌ ನಡುವಿನ ಸಿಂಗಲ್ಸ್‌ ಹೋರಾಟ. 

ಈ ಪಂದ್ಯದಲ್ಲಿ ಮರಿನ್‌ 11-8, 12-14, 11-2 ರಿಂದ ಸಿಂಧುಗೆ ಆಘಾತ ನೀಡಿದರು. ಮೊದಲ ಎರಡೂ ಸೆಟ್‌ನಲ್ಲಿ ಇಬ್ಬರ ನಡುವೆ ಭರ್ಜರಿ ಹೋರಾಟ ನಡೆಯಿತು. ಮೊದಲ ಗೇಮ್‌ ಅನ್ನು ಮರಿನ್‌ ವಶಪಡಿಸಿಕೊಂಡರೆ, ಎರಡನೇ ಗೇಮ್‌ ಅನ್ನು ಸಿಂಧು ವಶಪಡಿಸಿಕೊಂಡರು. ನಿರ್ಣಾಯಕವಾದ ಮೂರನೇ ಗೇಮ್‌ ಅನ್ನು ಮರಿನ್‌ 11-2ರ ಭಾರೀ ಅಂತರದಲ್ಲಿ ಜಯ ಸಾಧಿಸಿದರು.

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಚೆನ್ನೈ ಸ್ಮ್ಯಾಷರ್ನ ಟಾಮಿ ಸುರ್ಗಿಯಾಟೊ ವಿರುದ್ಧ ಹೈದ್ರಾಬಾದ್‌ ಹಂಟರ್ನ ಬಿ.ಸಾಯಿ ಪ್ರಣೀತ್‌ ಸೋಲುಂಡರು. ಮಿಶ್ರ ಡಬಲ್ಸ್‌ನಲ್ಲಿ ಚೆನ್ನೈ ತಂಡ ಜಯಸಾಧಿಸಿದೆ. ಮತ್ತೂಂದು ಪುರುಷರ ಸಿಂಗಲ್ಸ್‌ನಲ್ಲಿ ಹೈದ್ರಾಬಾದ್‌ನ ರಾಜೀವ್‌ ಔಸೆಫ್ ಜಯ ಸಾಧಿಸಿದರು. ಪುರುಷರ ಡಬಲ್ಸ್‌ನಲ್ಲಿ ಚೆನ್ನೈ ತಂಡ ಜಯಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next