Advertisement
ಮಡಿಕೇರಿ ತಾಲೂಕಿನ ಭಾಗಮಂಡಲದ ಪಶ್ಚಿಮ ದಿಕ್ಕಿನಲ್ಲಿ ಉಗಮಗೊಂಡು ಜೋಡುಪಾಲದ ಮೂಲಕ ಅರಂತೋಡು, ಸುಳ್ಯ ನಗರ, ಪೈಚಾರು, ಜಾಲ್ಸೂರು, ಪಂಜಿಕಲ್ಲು, ದೇವರಗುಂಡ ಮುರೂರು ಮೂಲಕ ಸಾಗಿ ಕೇರಳ ಸೇರುತ್ತದೆ. ಬೇಸಗೆ ಕಾಲದಲ್ಲಿ ಈ ನದಿ ತಟದೊದ್ದಗಿನ ಕೃಷಿಕರಿಗೆ ಪಯಸ್ವಿನಿಯೇ ಜೀವಧಾರೆ. ಸುಳ್ಯದ ನಗರಕ್ಕೆ ಕುಡಿಯುವ ನೀರಿಗೂ ಇದೆ ಮೂಲವಾಗಿದೆ.
ಎರಡು ವರ್ಷದ ಹಿಂದೆ ಎಪ್ರಿಲ್, ಮೇ ತಿಂಗಳಿನಲ್ಲಿ ಪಯಸ್ವಿನಿ ಸಂಪೂರ್ಣ ಬತ್ತಿ ಬರಡಾಗಿತ್ತು. ಆಗ ಕುಡಿಯುವ ನೀರಿಗೂ ಬರ ಬರುವ ಸಂದರ್ಭ ಎದುರಾಗಿತ್ತು. ಜೂನ್ ಮೊದಲ ವಾರದಲ್ಲಿ ಮಳೆಯಾದ ಕಾರಣ, ಆತಂಕ ದೂರವಾಗಿತ್ತು. ಆ ವರ್ಷ ಜುಲೈ ಅನಂತರವೇ ಮಳೆ ಹೆಚ್ಚಳಗೊಂಡು ನದಿಯಲ್ಲಿ ನೀರಿನ ಹರಿವು ಕಂಡಿತ್ತು. ಕಳೆದ ವರ್ಷವೂ ಬಿಸಿಲಿನ ತಾಪ ಮೇ ಅಂತ್ಯದ ತನಕ ಇದ್ದು, ಮಳೆ ಬಂದಿದ್ದರೂ, ನೀರಿನ ಮಟ್ಟ ಹೆಚ್ಚಳಗೊಂಡಿರಲಿಲ್ಲ. ಮುಂಗಾರು ಪೂರ್ವ ಮಳೆ
ಈ ಬಾರಿ ಮಾರ್ಚ್, ಎಪ್ರಿಲ್, ಮೇ ತಿಂಗಳಿನಲ್ಲಿ ಮಳೆಯಾಗಿದೆ. ಪಯಸ್ವಿನಿ ಉಗಮದ ಸ್ಥಳದಲ್ಲಿ ಮುಂಗಾರು ಪೂರ್ವ ಮಳೆ ನಿರೀಕ್ಷೆಗೂ ಮೀರಿ ಸುರಿದ ಕಾರಣ, ಮೇ ಮೊದಲ ವಾರದಲ್ಲಿಯೇ ನದಿ ಹರಿವು ಹೆಚ್ಚಾಗಿತ್ತು.
Related Articles
Advertisement
ನೀರಿನ ಸೆಲೆಕೆಲ ದಿನಗಳಿಂದ ಮಳೆಯಾದ ಪರಿಣಾಮ ಕೆಲವೆಡೆ ಬಾವಿ, ಕೆರೆಯಲ್ಲಿ ನೀರಿನ ಸೆಲೆ ಕಂಡಿದೆ. ಸಣ್ಣ ಪುಟ್ಟ ತೋಡು, ಹೊಳೆಗಳಲ್ಲಿಯು ಕೆಂಬಣ್ಣದ ನೀರು ಹರಿದಿದೆ. ಮಳೆ ನಿರಂತರವಾಗಿ ಸುರಿದರೆ, ನೀರಿನ ಮೂಲಗಳು ಭರ್ತಿ ಆಗುವ ಸಾಧ್ಯತೆ ಇದೆ.