Advertisement

ಕೇಂದ್ರ ನೌಕರರಿಗೆ ವೇತನ ಕಡಿತದ ತೂಗುಗತ್ತಿ! ಈ ವರ್ಷದಿಂದಲೇ ಹೊಸ ನಿಯಮ ಜಾರಿ

01:08 AM Feb 23, 2021 | Team Udayavani |

ಹೊಸದಿಲ್ಲಿ: ಕೇಂದ್ರ ಸರಕಾರಿ ಸ್ವಾಮ್ಯದ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಆತಂಕಕಾರಿ ಸುದ್ದಿಯೊಂದು ಹೊರಬಿದ್ದಿದೆ. ನೌಕರರ ದಕ್ಷತೆ ಆಧಾರಿತ ವೇತನ (ಪಿಆರ್‌ಪಿ) ಆ ಕಂಪೆನಿಯ ಸಾಧನೆಗೆ ಅನುಗುಣವಾಗಿ ಸಿಗಲಿದೆ.

Advertisement

ಕೇಂದ್ರ ಸಚಿವಾಲಯಗಳು ತಮ್ಮ ಅಧೀನದಲ್ಲಿರುವ ಎಲ್ಲ ಸರಕಾರಿ ಸ್ವಾಮ್ಯದ ಕಂಪೆನಿ (ಪಿಎಸ್‌ಯು)ಗಳ ಜತೆಗೆ ಮಾಡಿಕೊಳ್ಳುತ್ತಿರುವ ಹೊಸ ಒಪ್ಪಂದಗಳಲ್ಲಿ ಪಿಆರ್‌ಪಿಯ ಪರಿಷ್ಕೃತ ನಿಯಮಾವಳಿಗಳನ್ನು ಅಳವಡಿಸಲಾಗುತ್ತಿದ್ದು, ಈ ಆರ್ಥಿಕ ವರ್ಷದಲ್ಲೇ ನಿಯಮ ಜಾರಿಯಾಗಲಿದೆ.

ಏನಿದು ಹೊಸ ನಿಯಮ?
ಪ್ರತೀ ಕೇಂದ್ರ ಸರಕಾರಿ ಸ್ವಾಮ್ಯದ ಸಾರ್ವಜನಿಕ ಸಂಸ್ಥೆ (ಸಿಪಿಎಸ್‌ಇ)ಯ ಸಾಧನೆಯನ್ನು ಎಂ-ಕ್ಯಾಪ್‌, ರಿಟರ್ನ್ ಆನ್‌ ಕ್ಯಾಪಿಟಲ್‌, ಅಸೆಟ್‌ ಟರ್ನ್ ಓವರ್‌ ರೇಶಿಯೊ ಮತ್ತು ಕ್ಯಾಪೆಕ್ಸ್‌ ಆ್ಯಂಡ್‌ ಪ್ರೊಡಕ್ಷನ್‌ ಟಾರ್ಗೆಟ್‌ ಆಧಾರದಲ್ಲಿ ಅಳೆಯಲಾಗುತ್ತದೆ. ಇದಕ್ಕಾಗಿ ಒಟ್ಟು 100 ಅಂಕಗಳನ್ನು ಗೊತ್ತುಪಡಿಸಲಾಗಿದೆ. ಒಂದು ಕಂಪೆನಿಯ ಸಾಧನೆಯ ಆಧಾರದಲ್ಲಿ ಅದರ ಮೌಲ್ಯಮಾಪನ ಮಾಡಲಾಗುತ್ತದೆ.

ಉದ್ದೇಶವೇನು?
ಇದರ ಹಿಂದೆ ಸಿಪಿಎಸ್‌ಇ ವಲಯದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಉದ್ದೇಶ ಇದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ವೇತನ ಕಡಿತ ಎಷ್ಟು?
ಒಟ್ಟು 100 ಅಂಕಗಳಲ್ಲಿ 90ಕ್ಕೂ ಹೆಚ್ಚು ಅಂಕ ಗಳಿಸಿದ ಕಂಪೆನಿಗಳನ್ನು ಅತ್ಯುತ್ತಮ ಎಂದು ಪರಿಗಣಿಸಿ, ಅವುಗಳ ನೌಕರರಿಗೆ ಶೇ. 100ರಷ್ಟು ಪಿಆರ್‌ಪಿ ವೇತನ ನೀಡ ಲಾಗುತ್ತದೆ. ಅಂದರೆ ಈ ಕಂಪೆನಿಗಳ ನೌಕರರ ವೇತನದಲ್ಲಿ ಕಡಿತ ಇಲ್ಲ. ಆದರೆ ಉತ್ತಮ, ಸಾಧಾರಣ ಎಂದು ಪರಿಗಣಿತ ವಾಗುವ ಕಂಪೆನಿಗಳ ನೌಕರರಿಗೆ ಕ್ರಮವಾಗಿ ಶೇ. 80 ಮತ್ತು ಶೇ. 60ರಷ್ಟು ಮಾತ್ರ ವೇತನ ಸಿಗಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next