Advertisement

ಪವಾರ್ Adani ಹೇಳಿಕೆ;2024 ರವರೆಗೆ ಪ್ರತಿಪಕ್ಷಗಳ ಒಗ್ಗಟ್ಟಿನ ಕುರಿತು ಪ್ರಶ್ನಾರ್ಥಕ ಚಿಹ್ನೆ

08:18 PM Apr 08, 2023 | Team Udayavani |

ಮುಂಬಯಿ: ಹಲವು ಪ್ರಾದೇಶಿಕ ಪ್ರತಿಸ್ಪರ್ಧಿಗಳು ಸೇರಿ 20ಕ್ಕೂ ಹೆಚ್ಚು ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ಹೋರಾಟ ಸಾರಲು ಮುಂದಾಗಿರುವ ವೇಳೆ ಕೈಗಾರಿಕೋದ್ಯಮಿ ಗೌತಮ್ ಅದಾನಿ ಅವರಿಗೆ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಮುಕ್ತ ಬೆಂಬಲ 2024 ರ ಸಂಸತ್ತಿನ ಚುನಾವಣೆಯವರೆಗೆ ಪ್ರತಿಪಕ್ಷಗಳ ಒಕ್ಕೂಟದ ಬಾಳಿಕೆಯ ಮೇಲೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟು ಹಾಕಿದೆ.

Advertisement

ಚುನಾವಣೆಗೆ ಸಾಕ್ಷಿಯಾಗಲಿರುವ ಆರು ರಾಜ್ಯಗಳು ಈ ನಿರ್ಣಾಯಕ ಚುನಾವಣ ವರ್ಷದಲ್ಲಿ ತಮ್ಮ ಒಗ್ಗಟ್ಟನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತರ ವಿರೋಧ ಪಕ್ಷಗಳನ್ನು ತಲುಪುವುದಕ್ಕೆ ಸಮಾನಾಂತರವಾಗಿ ಪ್ರತಿಪಕ್ಷಗಳ ಅದಾನಿ ವಿರೋಧಿ ಪ್ರಚಾರದ ಕೆಲಸಗಳಲ್ಲಿ ನಿರತರಾಗಿರುವ ವೇಳೆ ಪವಾರ್ ಅವರ ಹೇಳಿಕೆ ದೊಡ್ಡ ಅಡ್ಡಿಯಾಗಿದೆ. ಪವಾರ್ ಅವರ ಏಕಮಾತ್ರ ಹೇಳಿಕೆಯು ಒಗ್ಗಟ್ಟಿನ ಪ್ರಯತ್ನಗಳನ್ನು ತಡೆಯುವುದಿಲ್ಲ ಎಂದು ಕೆಲವು ನಾಯಕರು ವಾದಿಸಿದ್ದಾರೆ.

ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ, ಪವಾರ್ ಅದಾನಿ ಗ್ರೂಪ್‌ಗೆ ಬೆಂಬಲವಾಗಿ ಮಾತನಾಡಿ, ಯುಎಸ್ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್‌ನ ವರದಿಯನ್ನು ಟೀಕಿಸಿದ್ದರು.

ಸಂಸತ್ತಿನಲ್ಲಿ ಸಂಖ್ಯಾಬಲದ ಆಧಾರದ ಮೇಲೆ ಆಡಳಿತ ಪಕ್ಷವು JPC ಯಲ್ಲಿ ಬಹುಮತವನ್ನು ಹೊಂದಿರುವುದರಿಂದ ಮತ್ತು ಇದು ಅಂತಹ ತನಿಖೆಯ ಬಗ್ಗೆ ಅನುಮಾನಗಳಿಗೆ ಕಾರಣವಾಗುವುದರಿಂದ, ಅದಾನಿ ಗ್ರೂಪ್ ವಿರುದ್ಧದ ಆರೋಪಗಳನ್ನು ತನಿಖೆ ಮಾಡಲು ಸುಪ್ರೀಂ ಕೋರ್ಟ್ ಸಮಿತಿಗೆ ಒಲವು ತೋರುವುದಾಗಿ ಪವಾರ್ ಹೇಳಿದರು.

“ನಾನು ಜೆಪಿಸಿಯನ್ನು ಸಂಪೂರ್ಣವಾಗಿ ವಿರೋಧಿಸುವುದಿಲ್ಲ. ಜೆಪಿಸಿಗಳು ಮೊದಲು ಇದ್ದವು ಮತ್ತು ನಾನು ಕೆಲವು ಜೆಪಿಸಿಗಳ ಅಧ್ಯಕ್ಷನಾಗಿದ್ದೆ. ಬಹುಮತದ ಆಧಾರದ ಮೇಲೆ ಸಂಸತ್ತಿನಲ್ಲಿ ಜೆಪಿಸಿ ರಚನೆಯಾಗುತ್ತದೆ. ಜೆಪಿಸಿ ಬದಲಿಗೆ, ಸುಪ್ರೀಂ ಕೋರ್ಟ್ ಸಮಿತಿ ಹೆಚ್ಚು ಉಪಯುಕ್ತ ಮತ್ತು ಪರಿಣಾಮಕಾರಿ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ ಎಂದು ಪವಾರ್ ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next