Advertisement

ಮೀರಾರೋಡ್‌ನ‌ಲ್ಲಿ  ಪತ್ತನಾಜೆ ತುಳುಚಿತ್ರ ಪ್ರದರ್ಶನ

04:27 PM Nov 28, 2017 | Team Udayavani |

ಮುಂಬಯಿ: ತುಳು ನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ತೋನ್ಸೆ ವಿಜಯಕುಮಾರ್‌ ಶೆಟ್ಟಿ ನಿರ್ದೇಶಕ ಕಲಾಜಗತ್ತು ಕ್ರಿಯೇಶನ್ಸ್‌ ಅವರ ಪತ್ತನಾಜೆ ತುಳು ಸಿನೆಮಾ ಮುಂಬಯಿ ಹಾಗೂ ವಿವಿಧ ಉಪನಗರಗಳಲ್ಲಿ ಪ್ರದರ್ಶನಗೊಂಡು ನ. 19ರಂದು ಮೀರಾರೋಡ್‌ನ‌ ಸಿನೆಮ್ಯಾಕ್ಸ್‌ ಚಿತ್ರಮಂದಿರದಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಂಡಿತು.

Advertisement

ಚಿತ್ರ ಪ್ರದರ್ಶನದ ಮಧ್ಯಾಂತರದಲ್ಲಿ ನಡೆದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಪ್ರೊ| ಕಬಡ್ಡಿ ಆಯೋಜಕ, ಬಂಟರ ಸಂಘ ಮೀರಾ-ಭಾಯಂದರ್‌ ಸ್ಥಳೀಯ ಸಮಿತಿಯ ಯುವ ವಿಭಾಗದ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ  ಕಾರ್ಯಾಧ್ಯಕ್ಷ ಅರುಣೋದಯ ರೈ, ಹೊಟೇಲ್‌ ಉದ್ಯಮಿ ಆನಂದ ಶೆಟ್ಟಿ, ಸಮಾಜ ಸೇವಕಿ ಸುಮತಿ ಶೆಟ್ಟಿ, ಅಮಿತಾ ಕೆ. ಶೆಟ್ಟಿ, ಉದ್ಯಮಿ ಕೆರಮ ಮಾಗಂದಡಿ ದಯಾನಂದ ಶೆಟ್ಟಿ, ವಿಶ್ವನಾಥ ಎಂ. ಸಾಲ್ಯಾನ್‌, ಚೇತನ್‌ ಶೆಟ್ಟಿ ಮೂಡಬಿದ್ರೆ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಬೆಳ್ಳಿಪಾಡಿ ಸಂತೋಷ್‌ ರೈ, ಪಂಜದಗುತ್ತು ಸಂಪತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದು, ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರನ್ನು ಹಾಗೂ ಚಿತ್ರದ ಕಲಾವಿದರಾದ ಸುಂದರ ರೈ ಮಂದಾರ, ಪ್ರತೀಕ್‌ ಶೆಟ್ಟಿ, ರೇಷ್ಮಾ ಶೆಟ್ಟಿ ಹಾಗೂ ಎನ್‌. ಪೃಥ್ವಿರಾಜ್‌ ಮುಂಡ್ಕೂರು ಅವರನ್ನು ಗೌರವಿಸಿದರು.

ಗೌರವ ಸ್ವೀಕರಿಸಿ ಮಾತನಾಡಿದ ತೋನ್ಸೆ ವಿಜಯ ಕುಮಾರ್‌ ಶೆಟ್ಟಿ ಅವರು,ಕಲಾಭಿಮಾನಿಗಳ ಪ್ರೋತ್ಸಾಹದಿಂದಲೇ ಕಲಾಜಗತ್ತು ರಂಗಭೂಮಿಯಲ್ಲಿ ಅನೇಕ ನಾಟಕಗಳನ್ನು ನೀಡಿದೆ. ಇದೀಗ ಪತ್ತನಾಜೆ ಸಿನೆಮಾ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ನಿಮ್ಮೆಲ್ಲರ ಅಭಿಮಾನ ನನಗೆ ಇನ್ನಷ್ಟು ಸಿನೆಮಾ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ. ಕಲಾಭಿಮಾನಿಗಳ ಪ್ರೋತ್ಸಾಹ, ಸಹಕಾರ ಇದೇ ರೀತಿಯಲ್ಲಿ ಮುಂದುವರಿಯಲಿ  ಎಂದು ಹೇಳಿದರು. ಸಂಘಟಕ ನಿರ್ದೇಶಕ  ಜಿ. ಕೆ. ಕೆಂಚನಕೆರೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next