Advertisement

ದಾರಿದೀಪ ನಿರ್ವಹಣೆ ಅವ್ಯವಸ್ಥೆ  ನಗರ ಸಭೆಯ ತಪ್ಪು ನಿರ್ಧಾರಗಳ ಫ‌ಲ

06:20 AM Jun 29, 2018 | |

ಉಡುಪಿ: ನಗರಸಭಾ ವ್ಯಾಪ್ತಿಯಲ್ಲಿ ದಾರಿದೀಪಗಳ ಅಸಮರ್ಪಕ ನಿರ್ವಹಣೆಯಿಂದ ಎಲ್ಲ ಕಡೆ ದೂರುಗಳು ಕೇಳಿ ಬರುತ್ತಿದೆ. ಇದಕ್ಕೆ ನಗರಸಭೆಯ ತಪ್ಪು ನಿರ್ಧಾರ ಕಾರಣ ಎಂದು ಶಾಸಕ ಕೆ.ರಘುಪತಿ ಭಟ್‌ ಹೇಳಿದರು. 

Advertisement

ಉಡುಪಿ ಜಿಲ್ಲಾ ಬಿಜೆಪಿ ಕಚೇರಿ ಯಲ್ಲಿ ನಗರ ಪದಾಧಿಕಾರಿಗಳ ಪೇಜ್‌ ಪ್ರಮುಖರ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡು ತಿದ್ದ ಅವರು, ಒಂದು ದೀಪ ದುರಸ್ತಿ ಮಾಡಲು ದೂರು ನೀಡಿದ ನಾಗರಿಕ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ನಗರಾಡಳಿತ ನೇರ ಹೊಣೆಯಾಗಿದ್ದು ಇದರ ನಿರ್ವಹಣೆಗೆ   ಸ್ಥಳೀಯ ಮಾಹಿತಿಯಿಲ್ಲದ ದೂರದ ಶಿವಮೊಗ್ಗದ ಗುತ್ತಿಗೆದಾರರನ್ನು ನೇಮಕ ಮಾಡಿರುವುದು ಮತ್ತು ಇದರಲ್ಲಿ ಅಪಾರ ಭ್ರಷ್ಟಾಚಾರ ನಡೆಸಿರುವುದರ ಬಗ್ಗೆ ಗುಮಾನಿಗಳಿವೆ ಎಂದರು. 

ಹಿಂದೆ ಬಿಜೆಪಿ ಆಡಳಿತದ ಸಮಯದಲ್ಲಿ ದಾರಿದೀಪ ನಿರ್ವಹಣೆ ಮಾಡುತಿದ್ದ ರಮೇಶ್‌ ಎಲೆಕ್ಟ್ರಿಕಲ್ಸ… ಅವರು ಉತ್ತಮ ಸೇವೆ ಸಲ್ಲಿಸಿದ ಅನುಭವ ಮತ್ತು ದಾಖಲೆ ಹೊಂದಿದ್ದರು. ಅವರನ್ನು ಬದಲಾಯಿಸಿದ್ದರ ಉದ್ದೇಶವೇನು ಎಂದು ನಗರಸಭಾ ಕಾಮಗಾರಿಗಳ ಅಭಿವೃದ್ಧಿ ಪರಿಶೀಲನ ಸಭೆಯಲ್ಲಿ ತಾನು ಅಧಿಕಾರಿಗಳನ್ನು ಪ್ರಶ್ನಿಸಿದಾಗ ಸಮಾಧಾನಕರ ಉತ್ತರ ದೊರೆತಿಲ್ಲ  ಭಟ್‌ ಹೇಳಿದರು. 

ಮಲ್ಪೆ ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು ಆದಷ್ಟು ಬೇಗನೆ ಆರಂಭವಾಗಲಿದೆ. ಪ್ರಕ್ರಿಯೆಗಳು ನಡೆಯುತ್ತಿವೆ ಮತ್ತು ತಾತ್ಕಾಲಿಕವಾಗಿ ಹೊಂಡ ಗುಂಡಿಗಳನ್ನು ಕಾಂಕ್ರೆಟ್‌ ಹಾಕಿ ಮುಚ್ಚಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
 
ನಗರ ಅಧ್ಯಕ್ಷ ಪ್ರಭಾಕರ ಪೂಜಾರಿ ಯವರು ಮಾತನಾಡಿ, ನಗರಸಭಾ ಚುನಾವಣಾ ಪೂರ್ವಭಾವಿಯಾಗಿ ಮತದಾರರ ಸೇರ್ಪಡೆ ಮತ್ತು ಪರಿಷ್ಕರಣೆಯ ಪ್ರಕ್ರಿಯೆ ನಡೆಯುತ್ತಿದ್ದು ಕಾರ್ಯಕರ್ತರು ಮತ್ತೆ ಸಕ್ರಿಯರಾಗಿ ತಮ್ಮ ತಮ್ಮ ವಾರ್ಡ್‌ ವ್ಯಾಪ್ತಿಯಲ್ಲಿ ಅಭಿಯಾನಗಳನ್ನು ಮುಂದುವರಿಸಿ ಎಂದು ಮನವಿ ಮಾಡಿದರು.  ವಿಜಯ ಕೊಡವೂರು ರವಿವಾರ ಚಿಟಾ³ಡಿಯಲ್ಲಿ ನಡೆಯಲಿರುವ ಪೇಜ್‌ ಪ್ರಮುಖರ ಸಮಾವೇಶದ ಬಗ್ಗೆ ಮಾಹಿತಿ ನೀಡಿದರು. ನಗರ ಪ್ರ. ಕಾರ್ಯದರ್ಶಿ ಜಗದೀಶ್‌ ಆಚಾರ್ಯ ನಿರೂಪಣೆ ಮಾಡಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾರಮೇಶ್‌, ನಗರ ಉಪಾಧ್ಯಕ್ಷ ಟಿ. ಜಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next