ಮುಂಬಯಿ: ಶಾರುಖ್ ಖಾನ್ ಅಭಿನಯದ ಬಾಲಿವುಡ್ ನ ಬಹು ನಿರೀಕ್ಷಿತ ಪಠಾಣ್ ಚಿತ್ರದ ಟೀಸರನ್ನು ಬುಧವಾರ ಬಿಡುಗಡೆ ಮಾಡಲಾಗಿದೆ.
ಆಕ್ಷನ್-ಥ್ರಿಲ್ಲರ್ ಎಂದು ಹೇಳಲಾದ ಪಠಾಣ್ ನ ಟೀಸರ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಜನವರಿ 25, 2023 ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಿಸಲಾಗಿದೆ.
ಶಾರುಖ್ ಟ್ವಿಟರ್‌ನಲ್ಲಿ ಅಭಿಮಾನಿಗಳನ್ನು ಆಶ್ಚರ್ಯಗೊಳಿಸಿದ್ದು, “ಇದು ತಡವಾಗಿದೆ ಎಂದು ನನಗೆ ತಿಳಿದಿದೆ… ಆದರೆ ದಿನಾಂಕವನ್ನು ನೆನಪಿಸಿಕೊಳ್ಳಿ.. ಪಠಾಣ್ ಸಮಯ ಈಗ ಪ್ರಾರಂಭವಾಗುತ್ತದೆ.. 25 ಜನವರಿ, 2023 ರಂದು ಚಿತ್ರಮಂದಿರಗಳಲ್ಲಿ ನಿಮ್ಮನ್ನು ನೋಡೋಣ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ನಿಮ್ಮ ಹತ್ತಿರದ ದೊಡ್ಡ ಪರದೆಯಲ್ಲಿ#ಪಠಾಣ್ ಸಂಭ್ರಮಿಸಿ,” ಎಂದು ಬರೆದಿದ್ದಾರೆ.
Related Articles
ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ಕಾಣಿಸಿಕೊಂಡಿದ್ದಾರೆ.
ಟೀಸರ್ ನೋಡಿ ಸಂಭ್ರಮಿಸಿರುವ ಅಭಿಮಾನಿಗಳು ಇದು ಬಾಲಿವುಡ್ ಕಿಂಗ್ ಆಫ್ ರಿಟರ್ನ್ ಎಂದು ಬರೆದಿದ್ದಾರೆ.