Advertisement

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

08:53 AM Apr 30, 2024 | Team Udayavani |

ಉತ್ತರಾಖಂಡ: ಪತಂಜಲಿಗೆ ಹೊಡೆತದ ಮೇಲೆ ಹೊಡೆತ ಬಿದ್ದಂತೆ ಕಾಣುತ್ತಿದೆ ಇತ್ತೀಚಿಗೆ ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡಿ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿದ್ದ ಪತಂಜಲಿಗೆ ಇದೀಗ ಉತ್ತರಾಖಂಡ ಸರಕಾರ ಪತಂಜಲಿಯ 14 ಉತ್ಪನ್ನಗಳ ಪರವಾನಿಗೆಯನ್ನು ರದ್ದುಗೊಳಿಸುವ ಮೂಲಕ ಮತ್ತೊಂದು ಶಾಕ್ ನೀಡಿದೆ.

Advertisement

ಉತ್ತರಾಖಂಡ ಸರ್ಕಾರವು ಸೋಮವಾರ ಏಪ್ರಿಲ್ 15 ರ ಆದೇಶದ ಮೂಲಕ ಪತಂಜಲಿಯ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಅಲ್ಲದೆ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ವಿರುದ್ಧ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ.

ನಿಷೇಧಿತ ಉತ್ಪನ್ನಗಳಲ್ಲಿ ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೆಹ್, ಮುಕ್ತಾ ವತಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್ ಉತ್ಪನ್ನಗಳು ಸೇರಿವೆ.

ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿಯ ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಪರವಾನಗಿಯನ್ನು ಅಮಾನತುಗೊಳಿಸಿರುವುದಾಗಿ ಪರವಾನಗಿ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಜನರ ದಾರಿ ತಪ್ಪಿಸುವ ಜಾಹಿರಾತುಗಳನ್ನು ನೀಡಿರುವ ಕುರಿತು ವಿವಿಧ ಕಂಪೆನಿಗಳು ನೀಡಿರುವ ದೂರುಗಳ ಆದರದ ಮೇಲೆ ಈ ಆದೇಶವನ್ನು ಹೊರಡಿಸಿದೆ ಎನ್ನಲಾಗಿದೆ, ಅಷ್ಟುಮಾತ್ರವಲ್ಲದೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ಕೂಡಾ ಛೀಮಾರಿ ಹಾಕಿತ್ತು, ಅಲ್ಲದೆ ಕಂಪೆನಿ ವಿರುದ್ಧ ಕ್ರಮ ಕೈಗೊಳ್ಳದ ಉತ್ತರಾಖಂಡ ಸರಕಾರದ ವಿರುದ್ಧವೂ ಕೋರ್ಟ್ ಗುಡುಗಿತ್ತು ಇದೀಗ ಉತ್ತರಾಖಂಡ ಸರಕಾರ ಪತಂಜಲಿಯ ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಪರವಾನಿಗೆ ರದ್ದುಪಡಿಸುವ ಮೂಲಕ ಆದೇಶ ಹೊರಡಿಸಿದೆ.

Advertisement

ಇದನ್ನೂ ಓದಿ: ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Advertisement

Udayavani is now on Telegram. Click here to join our channel and stay updated with the latest news.

Next