ಮೆಲ್ಬರ್ನ್: ದೊಡ್ಡ ಮೊತ್ತದ ಒಡಂಬಂಡಿಕೆಯ ಹೊರತಾಗಿಯೂ ಕೆಕೆಆರ್ ತಂಡದ ಆಸೀಸ್ ವೇಗಿ ಪ್ಯಾಟ್ ಕಮಿನ್ಸ್ ಐಪಿಎಲ್ “ಎರಡನೇ ಭಾಗ’ದಲ್ಲಿ ಆಡದಿರುವ ತೀರ್ಮಾನಕ್ಕೆ ಬಂದಿದ್ದಾರೆ. ಇದಕ್ಕೆ ಆಸ್ಟ್ರೇಲಿಯ ತಂಡದ ನಿಬಿಡ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಗಳೇ ಕಾರಣ.
ಆಸ್ಟ್ರೇಲಿಯ ತಂಡ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಬಳಿಕ ಅಫ್ಘಾನಿಸ್ಥಾನ ವಿರುದ್ಧ ಏಕೈಕ ಟೆಸ್ಟ್ ಆಡಬೇಕಿದೆ. ಅನಂತರ ಪ್ರತಿಷ್ಠಿತ ಆ್ಯಶಸ್ ಎದುರಾಗಲಿದೆ. ಈ ನಡುವೆ 5 ಪಂದ್ಯಗಳ ಟಿ20 ಸರಣಿಗಾಗಿ ಬಾಂಗ್ಲಾದೇಶಕ್ಕೆ ಪ್ರವಾಸ ಕೈಗೊಳ್ಳುವ ಕಾರ್ಯಕ್ರಮವೂ ಒಂದಿದೆ.
ಇದನ್ನೂ ಓದಿ:ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ : ಚಿನ್ನ ಗೆದ್ದ ಪೂಜಾ ರಾಣಿ
ಈ ಬಿಡುವಿಲ್ಲದ ಸರಣಿಗಳಿಂದಾಗಿ ಕೇವಲ ಪ್ಯಾಟ್ ಕಮಿನ್ಸ್ ಮಾತ್ರವಲ್ಲ, ಆಸ್ಟ್ರೇಲಿಯದ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುತ್ತಿರುವ ಅನೇಕ ಆಟಗಾರರೂ ಐಪಿಎಲ್‌ನಿಂದ ದೂರ ಉಳಿಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಆ್ಯಡಂ ಝಂಪ, ನಥನ್ ಕೋಲ್ಟರ್ ನೈಲ್, ಕೇನ್ ರಿಚರ್ಡ್‌ಸನ್, ಜೇ ರಿಚರ್ಡ್‌ಸನ್, ಮಾರ್ಕಸ್ ಸ್ಟೋಯಿನಿಸ್ ಮೊದಲಾದ ಕ್ರಿಕೆಟಿಗರು ವಿವಿಧ ಐಪಿಎಲ್ ತಂಡಗಳಲ್ಲಿದ್ದಾರೆ.