Advertisement
ಭದ್ರತಾಪಡೆಗಳು ಕಟ್ಟುನಿಟ್ಟಿನ ತಪಾ ಸಣೆ ನಡೆಸುತ್ತಿವೆಯೇ ಎಂಬು ದನ್ನು ಪರೀಕ್ಷಿಸಲ ಅಧಿಕಾರಿ ಗಳು ವಿಮಾನದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಬಳಸು ತ್ತಿದ್ದಾರೆ. ತಪಾಸಣೆ ಮಾಡು ವುದು ತಪ್ಪಲ್ಲವಾದರೂ, ಅದಕ್ಕಾಗಿ ಪ್ರಯಾಣಿಕರನ್ನು ಪ್ರಯೋಗಶಾಲೆ ಯಾಗಿಸುವುದಕ್ಕೆ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.ಮಹಿಳೆಯೊಬ್ಬರು ಇದನ್ನು ಪೋಸ್ಟ್ ಮಾಡಿದ್ದು, ಜಾಲತಾಣಗಳಲ್ಲಿ ಕಳೆದ ಮೂರ್‍ನಾಲ್ಕು ಹರಿದಾಡುತ್ತಿದೆ. ಈ ಬರಹದಲ್ಲಿ, “ಬೇರೆ ಗುಂಪಿನಿಂದ ಬಂದ ಮಾಹಿತಿ ಇದಾಗಿದೆ’ ಎಂದು ಉಲ್ಲೇಖೀಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ನನ್ನ ಪುತ್ರಿಗೆ ಭದ್ರತಾ ಸಿಬಂದಿಯಿಂದ ಗಂಭೀರ ವಾದ ಅನುಭವ ಆಗಿದೆ. ಆಕೆ ನಿಲ್ದಾ ಣದಿಂದ ಹೊರಬರುತ್ತಿರ ಬೇಕಾ ದರೆ ಸಿಐಎಸ್‌ಎಫ್ ಸಿಬಂದಿ ಎಂದು ಪರಿಚಯಿಸಿಕೊಂಡು ನಾಗರಿಕ ಉಡುಪಿನಲ್ಲಿದ್ದ ಇಬ್ಬರು, ಎರಡು ಪೊಟ್ಟಣವನ್ನು ನೀಡಿದ್ದರು. ನಮ್ಮ ಭದ್ರತಾ ಸಿಬಂದಿ ಪ್ರವೇಶ ದ್ವಾರದಲ್ಲಿ ಸರಿಯಾಗಿ ತಪಾಸಣೆ ನಡೆಸುತ್ತಾರೆಯೇ ಎಂಬುದನ್ನು ಪರೀಕ್ಷಿಸಲು ಈ ಪೊಟ್ಟಣವನ್ನು ನೀಡಲಾಗಿದೆ ಎಂದಿದ್ದರು. ಆದರೆ ನನ್ನ ಪುತ್ರಿ ಅದನ್ನು ಸ್ವೀಕರಿಸಿಲ್ಲ. ಸಿಬಂದಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದ್ದಾರೆ ಎಂದು ಬರೆಯಲಾಗಿದೆ.
Related Articles
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್, ಸಾಮಾಜಿಕ ಜಾಲ ತಾಣದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿರುವ ತಪಾಸಣೆ ವಿಚಾರಕ್ಕೆ ಸಂಬಂಧಿಸಿ ಏನೂ ಹೇಳುವುದಿಲ್ಲ. ನಿಲ್ದಾಣದ ಭದ್ರತೆ ಜವಾಬ್ದಾರಿಯನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದ್ದು, ಅವರೇ ಪ್ರತಿಕ್ರಿಯಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
Advertisement