Advertisement

ಲೋಕಸಭೆ ಚುನಾವಣೆಗೆ ಪಕ್ಷ ಸಂಘಟನೆ

05:48 PM Nov 23, 2018 | Team Udayavani |

ಕೊಪ್ಪಳ: ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ಈಗಾಗಲೇ ಬೂತ್‌ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಸಜ್ಜಾಗಿದ್ದೇವೆ. ವಿವಿಧ ಬ್ಲಾಕ್‌ ಮಟ್ಟದಲ್ಲಿ ಪದಾಧಿಕಾರಿಗಳ ಸಭೆ ನಡೆಸಿದ್ದೇವೆ. ಪ್ರತಿ ಕ್ಷೇತ್ರದಲ್ಲೂ ಬೂತ್‌ ಮಟ್ಟದ ಕಾರ್ಯಕಾರಣಿ ನಡೆಸಿ ಡಿ. 2ರಂದು ಭಾಗ್ಯನಗರದಲ್ಲಿ ಜಿಲ್ಲಾಮಟ್ಟದ ಪದಾಧಿಕಾರಿಗಳ ವರ್ಕ್‌ಶಾಪ್‌ ನಡೆಸಲಿದ್ದೇವೆ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆಗೆ ಈಗಾಗಲೇ ತಯಾರಿ ನಡೆದಿದೆ. ಎಐಸಿಸಿ ನಿರ್ದೇಶನದಂತೆ ಹಾಗೂ ರಾಹುಲ್‌ ಗಾಂಧಿ ಅವರೇ ಜನರೊಂದಿಗೆ ನೇರಮಾತನಾಡಲು ಪ್ರೊಜೆಕ್ಟ್ ಆರಂಭಿಸಿದ್ದು, ಇದರಡಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲೂ 10 ಸಾವಿರ ಜನರ ಹೆಸರು ನೋಂದಣಿ ಮಾಡಿಸುವ ಕೆಲಸಕ್ಕೆ ಕಾರ್ಯಕರ್ತರಿಗೆ ಸೂಚನೆ ನೀಡಿದ್ದೇವೆ. ಜಿಲ್ಲೆಯಲ್ಲಿ 5 ಕ್ಷೇತ್ರದಲ್ಲಿ ಎರಡು ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳಿದ್ದು, ಪ್ರತಿ ಬ್ಲಾಕಿಗೂ ಇಬ್ಬರನ್ನು ನೇಮಿಸಿ ಅವರ ಮೂಲಕ ನೋಂದಣಿ ಕಾರ್ಯ ಆರಂಭಿಸಲಿದ್ದೇವೆ. ಒಂದು ತಿಂಗಳೊಳಗೆ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಿದ್ದೇವೆ ಎಂದರು.

ಬ್ಲಾಕ್‌ಗೆ ನೇಮಕಗೊಂಡ ಕಾರ್ಯಕರ್ತ ಬೂತ್‌ ಮಟ್ಟದಲ್ಲಿ ಸಕ್ರೀಯನಾಗಬೇಕು. ಈಗಾಗಲೇ ಬ್ಲಾಕ್‌ ಹಂತದಲ್ಲಿ ಪದಾ ಧಿಕಾರಿಗಳ ಪುನರ್‌ ನೇಮಕದ ಕುರಿತು ಚರ್ಚೆ ನಡೆದಿದೆ. ಡಿ. 2ರಂದು ಭಾಗ್ಯನಗರದಲ್ಲಿ ಜಿಲ್ಲಾಮಟ್ಟದ ಪದಾ ಧಿಕಾರಿಗಳ
ವರ್ಕ್‌ಶಾಪ್‌ ನಡೆಯಲಿದೆ. ಈ ಸಭೆಗೆ ಎಐಸಿಸಿ ಕಾರ್ಯದರ್ಶಿಗಳು ಆಗಮಿಸಲಿದ್ದು, ಜೊತೆಗೆ ಶಕ್ತಿ ಪ್ರೋಜೆಕ್ಟ್‌ನ ಮುಖ್ಯಸ್ಥ ಸೂರಜ್‌ ಹೆಗಡೆ ಅವರು ಆಗಮಿಸಲಿದ್ದಾರೆ ಎಂದರು.

ದಢೇಸುಗೂರು ಕಮಿಷನ್‌ ಶಾಸಕ: ಕನಕಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸುಗೂರು ಅವರು
ಕಮಿಷನ್‌ ಶಾಸಕರಾಗಿದ್ದಾರೆ. ಕಮಿಷನ್‌ ಪಡೆದುಕೊಂಡೇ ಅವರು ಕೆಲಸ ಮಾಡುತ್ತಿದ್ದಾರೆ. ಇದನ್ನು ನಾನು ಹೇಳುತ್ತಿಲ್ಲ. ಮಾಧ್ಯಮಗಳಲ್ಲಿಯೇ ಅವರ ಕುರಿತು ವರದಿ ಬರುತ್ತಿವೆ. ಟೆಂಡರ್‌ ವಿಷಯದಲ್ಲಿ ಅವರು ಒಬ್ಬರ ಪರ ವಕಾಲತ್ತು ಮಾಡುತ್ತಿದ್ದಾರೆ ಎಂದರೆ ಏನರ್ಥ? ಅವರಿಂದ ಏನನ್ನೋ ಪಡೆದಿದ್ದಾರೆ ಎನ್ನುವುದು ತೋರಿಸುತ್ತದೆ.

ಇನ್ನೂ ಸಿಡಿಪಿಒಗಳ ವಿವಾದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಬೇಕು. ಅವರ ಬಗ್ಗೆ ಕ್ಷೇತ್ರದಲ್ಲಿನ ಜನರೇ ಮಾತನಾಡುತ್ತಿದ್ದಾರೆ. ಅದಕ್ಕೆ ನಾನು ಸುಮ್ಮನಿದ್ದು, ಮುಂದಿನ ದಿನದಲ್ಲಿ ದಾಖಲೆಗಳ ಸಮೇತ ಮತನಾಡುವೆ. ಇದಲ್ಲದೇ, ಚಿಕ್ಕ ಜಂತಗಲ್‌ನಲ್ಲಿ 10 ಎಕರೆ ಸರ್ಕಾರಿ ಜಮೀನಿದೆ. ಅಲ್ಲಿ 20 ವರ್ಷಗಳಿಂದ ಕೃಷಿ ಮಾಡುತ್ತಿದ್ದ ಜನರನ್ನು ಬಿಜೆಪಿ ಶಾಸಕರು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದರಲ್ಲದೇ, ಕಾರಟಗಿ ಎಪಿಎಂಸಿ ನಿರ್ದೇಶಕ ನಾಗರಾಜ ಅರಳಿ ಎನ್ನುವವರು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದಾರೆ. ಆದರೂ ಅವರ ಬಗ್ಗೆ ಕ್ರಮಕೈಗೊಳ್ಳುತ್ತಿಲ್ಲ ಎಂದು ವಾಗ್ಧಾಳಿ ನಡೆಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next