Advertisement
ಬ್ರಜಿಲ್‌ನ ರಾಷ್ಟ್ರೀಯ ತಂಡದ ಡಿಫೆಂಡರ್ ಬ್ರೂನಾ ಬೆನೈಟ್ಸ್ ಅವರು ಈ ವೀಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
Related Articles
Advertisement
ಬ್ರೂನಾ ಅವರು ಈ ವೀಡಿಯೋದ ಮೂಲಕ ಪಂತನಾಲ್ ಜೌಗು ಪ್ರದೇಶ ಮತ್ತು ಅಮೇಜಾನ್ ಮಳೆಕಾಡುಗಳಲ್ಲಿ ಹೆಚ್ಚುತ್ತಿರುವ ಕಾಡ್ಗಿಚ್ಚಿನ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
‘ಲಾಭದಾಸೆಯಿಂದ ಇಂದು ಏನೆಲ್ಲ ನಡೆಯುತ್ತಿದೆ. ನಾನು ಮ್ಯಾಟೊ ಗ್ರೊಸೊದವಳಾಗಿದ್ದೂ ಕೂಡ, ಪಂತನಾಲ್‌ನಲ್ಲಿ ನಡೆಯುತ್ತಿರುವ ಇಂಥ ಘಟನೆಗಳಿಗೆ ದುಃಖ ವ್ಯಕ್ತಪಡಿಸಲಾಗದಂತಹ ಅಸಹಾಯಕ ಸ್ಥಿತಿಯಲ್ಲಿದ್ದೇನೆ. ಕಾಡ್ಗಿಚ್ಚಿನಿಂದಾಗಿ ಸಾವಿರಾರು ಪ್ರಾಣಿಗಳು ಜೀವ ಕಳೆದುಕೊಳ್ಳುತ್ತಿವೆ. ಇದು ಹೀಗೇ ಮುಂದುವರೆದರೆ, ಈ ವೀಡಿಯೋದಲ್ಲಿ ನೀವು ಕಾಣುತ್ತಿರುವಂಥ ದೃಶ (ಅಪರೂಪ)ಗಳನ್ನು ಮುಂದೊಂದು ದಿನ ನಾವು ಕಾಣುವುದು ಸಾಧ್ಯವೇ ಇಲ್ಲ. ಹಾಗಾಗಿ ನಾವು ಜಾಗೃತರಾಗೋಣ. ನಮ್ಮ ಅತೀ ದೊಡ್ಡ ಆಸ್ತಿಯಾದ ಪೃಕೃತಿಯನ್ನು ಕಾಪಪಾಡಿಕೊಳ್ಳೊಣ’ ಎಂದು ವೀಡಿಯೋದ ಕೆಳಗೆ ಅವರು ಬರೆದುಕೊಂಡಿದ್ದಾರೆ.