Advertisement

ವಿಶ್ರಾಂತಿಯಲ್ಲಿ ಮೈಮರೆತರೆ ಜೀವಕ್ಕೆ ಅಪಾಯ!

10:45 PM Jun 07, 2020 | Sriram |

ಉಡುಪಿ: ಬಸ್‌ ನಿಲ್ದಾಣ ಉತ್ತಮವಾಗಿದೆ ಎಂದು ಮೈಮರೆತು ವಿಶ್ರಾಂತಿ ಪಡೆದರೆ, ಇಲ್ಲಿ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇಂತಹದ್ದೊಂದು ಚಿತ್ರಣ ಉಡುಪಿ ನಗರಸಭೆಯ ಸೆಟ್ಟಿಬೆಟ್ಟು ವಾರ್ಡ್‌ ವ್ಯಾಪ್ತಿಯಲ್ಲಿದೆ.

Advertisement

ಇಲ್ಲಿನ ಗ್ಯಾಟ್ಸನ್‌ ಸರ್ಕಲ್‌ನಲ್ಲಿರುವ ಸಾರ್ವಜನಿಕ ಬಸ್‌ನಿಲ್ದಾಣ ನೋಡುವು ದಕ್ಕೆ ಅಂದವಾಗಿ, ಗಟ್ಟಿಮುಟ್ಟಾಗಿ ಇರುವಂತೆ ಕಾಣುತ್ತಿದೆ. ಆದರೆ ಈ ಬಸ್‌ ನಿಲ್ದಾಣದ ಒಳಹೊಕ್ಕು ನೋಡಿದರೆ,ಇದು ಶಿಥಿಲ ಗೊಂಡಿರುವುದು ಕಾಣುತ್ತದೆ. ಇದರೊಳಗೆ ನಿಂತು ವಿಶ್ರಾಂತಿ ಪಡೆಯುವವರು ತುಸು ಎಚ್ಚರದಿಂದ ಇರುವುದು ಒಳಿತು.

ಬಸ್‌ನಿಲ್ದಾಣ ಶಿಥಿಲಗೊಂಡು ಸ್ಲ್ಯಾಬ್ ಗೆ ಹಾನಿಯಾಗಿದೆ. ನಿಲ್ದಾಣದ ಗೋಡೆ ಹಾಗೂ ಕಂಬಗಳ ಸಿಮೆಂಟ್‌ ಎದ್ದು ಹೋಗಿ ಒಳಗಿನ ಕಬ್ಬಿಣದ ಸರಳುಗಳು ಹೊರಗೆ ಬಂದಿವೆ. ನಿಲ್ದಾಣದೊಳಗೆ ನಿಲ್ಲಲು ಸಾರ್ವಜನಿಕರು ಭಯಪಡುತ್ತಾರೆ.

ಕಟ್ಟಡದ ಹಿಂಬದಿ ಕೂಡ ಕುಸಿ ದಿದ್ದು ಅಪಾಯಕಾರಿಯಾಗಿದೆ. ಈ ಬಸ್‌ ನಿಲ್ದಾಣದಲ್ಲಿ ವಿವಿಧ ಕಡೆಗಳಿಗೆ ತೆರಳಲೆಂದು ಮಕ್ಕಳು, ಮಹಿಳೆಯರು, ವೃದ್ಧರು ನಿಂತು ವಿಶ್ರಾಂತಿ ಪಡೆಯುತ್ತಾರೆ. ಹೆಚ್ಚು ಬಸ್‌ಗಳು ಓಡಾಡುವ ಜಂಕ್ಷನ್‌ ಕೂಡ ಇದಾಗಿದೆ. ಅವರೆಲ್ಲರಿಗೆ ಶಿಥಿಲ
ಗೊಂಡ ಕಟ್ಟಡದ ಅಪಾಯದ ಅರಿವಿಲ್ಲ .

ಈಗಾಗಲೇ ಮಳೆಗಾಲ ಆರಂಭವಾಗಿದ್ದು ಶಿಥಿಲ ಬಸ್‌ನಿಲ್ದಾಣದಲ್ಲಿ ಸುರಕ್ಷಿತಕ್ಕಿಂತ ಅಪಾಯವೇ ಹೆಚ್ಚಿದೆ.ಇದನ್ನು ಪುನರ್‌ನಿರ್ಮಾಣ ಮಾಡ ಬೇಕು. ಅಪಾಯ ಸಂಭವಿಸುವ ಮೊದಲು ನಗರಸಭೆ ತತ್‌ಕ್ಷಣ ಹೊಸ ಬಸ್‌ನಿಲ್ದಾಣ ನಿರ್ಮಿಸಿ ಸಾರ್ವಜನಿಕರ ಬಳಕೆಗೆ ಯೋಗ್ಯವನ್ನಾಗಿಸಬೇಕು. ಬಸ್‌ ನಿಲ್ದಾಣದ ಎದುರು ಜಾಗೃತ ಫ‌ಲಕ ಹಾಕಬೇಕು ಎಂದು ಮಾರ್ಕೆಟ್‌ ಫ್ರೆಂಡ್ಸ್‌ ಅಧ್ಯಕ್ಷ ಬನ್ನಂಜೆ ಬಾಲಕೃಷ್ಣ ಶೆಟ್ಟಿ, ಇತರರಾದ ರಾಜೇಶ್‌ ಪ್ರಭು ಪರ್ಕಳ, ಸುರೇಶ್‌ ಪೂಜಾರಿ ಬೊಳ್ಜೆ ಮೊದಲಾದವರು ಒತ್ತಾಯಿಸಿದ್ದಾರೆ.

Advertisement

ನಗರಸಭೆ ಗಮನಕ್ಕೆ ತರಲಾಗುವುದು
ಬಸ್‌ನಿಲ್ದಾಣ ಶಿಥಿಲಗೊಂಡ ಬಗ್ಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ನಗರಸಭೆ ಗಮನಕ್ಕೆ ತರುವ ಪ್ರಯತ್ನ ಮಾಡಲಾಗುವುದು.
-ಅಶ್ವಿ‌ನಿ ಅರುಣ್‌ ಪೂಜಾರಿ, ಸೆಟ್ಟಿಬೆಟ್ಟು ವಾರ್ಡ್‌ ಸದಸ್ಯೆ

ಕಾಯಕಲ್ಪ ನೀಡಿ
ಪರ್ಕಳದ ಶಿಥಿಲ ಬಸ್‌ ನಿಲ್ದಾಣ 35 ವರ್ಷಗಳಿಗೂ ಹೆಚ್ಚು ಹಳೆಯದಾಗಿದೆ. ಮಾಜಿ ಸಚಿವೆ ಮನೋರಮಾ ಮಧ್ವರಾಜ್ ಅವರು ಈ ಸಾರ್ವಜನಿಕರ ಉಪಯೋಗದ ಬಸ್‌ ನಿಲ್ದಾಣವನ್ನು ಉದ್ಘಾಟಿಸಿದ್ದರು. ಈ ಹಳೆಯ ನಿಲ್ದಾಣಕ್ಕೆ ಕಾಯಕಲ್ಪ ನೀಡಬೇಕಿದೆ.
-ಸುರೇಶ್‌ ಪೂಜಾರಿ ಬೊಳ್ಜೆ, ಸ್ಥಳೀಯ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next