Advertisement

ಉದ್ಯಾನವನ ಅತಿಕ್ರಮಣ ತೆರವಿಗೆ ಅಧಿಕಾರಿಗೆ ಮನವಿ

04:33 PM May 19, 2020 | Suhan S |

ಮುದ್ದೇಬಿಹಾಳ: ಪಟ್ಟಣದ ವಿದ್ಯಾ ನಗರದಲ್ಲಿನ ಮದರಿ ಬಡಾವಣೆಯಲ್ಲಿ ಉದ್ಯಾನವನಕ್ಕೆಂದು ಮೀಸಲಿಟ್ಟಿರುವ ಸ್ಥಳವನ್ನು ಕೆಲವರು ಅತಿಕ್ರಮಣ ಮಾಡಿ, ಪರಿಸರ ಮಾಲಿನ್ಯ ಉಂಟು ಮಾಡುವ ಸಿಮೆಂಟ್‌ ಬ್ಲಾಕ್‌ ತಯಾರಿಕಾ ಘಟಕ ನಡೆಸುತ್ತಿದ್ದು, ಕೂಡಲೇ ತೆರವುಗೊಳಿಸಿ ಉದ್ಯಾನವನವ ನಿರ್ಮಿಸುವಂತೆ ಕೋರಿ ನಿವಾಸಿಗಳು ಸೋಮವಾರ ಪುರಸಭೆ ಕಂದಾಯ ಅಧಿಕಾರಿ ಎಂ.ಬಿ.ಮಾಡಗಿ ಅವರಿಗೆ ಮನವಿ ಸಲ್ಲಿಸಿದರು.

Advertisement

ಮದರಿ ಬಡಾವಣೆಯ ರಿಸನಂ 88/ಕದಲ್ಲಿನ 25ನೇ ಪ್ಲಾಟ್‌ನ್ನು, ರಿಸನಂ 88/ಡದಲ್ಲಿನ 1ನೇ ಪ್ಲಾಟನ್ನು ಉದ್ಯಾನವನಕ್ಕಾಗಿ ಹಾಗೂ 88/ ಡದಲ್ಲಿನ 5ನೇ ಪ್ಲಾಟ್‌ನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಮೀಸಲಿಡಲಾಗಿದೆ. ಇಲ್ಲಿ ಘಟಕ ಇರುವುದರಿಂದ ಬಡಾವಣೆಯ ಜನರಿಗೆ ಶಬ್ದಮಾಲಿನ್ಯದ ಜತೆಗೆ ಪರಿಸರ ಮಾಲಿನ್ಯ ಉಂಟಾಗಿ ತೊಂದರೆಯಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಘಟಕವನ್ನು ತೆರವುಗೊಳಿಸುವಂತೆ ಬಡಾವಣೆಯ ನಿವಾಸಿಗಳು ಸಿಮೆಂಟ್‌ ಬ್ಲಾಕ್‌ ತಯಾರಿಸುವವರಿಗೆ ಹೇಳಿದ್ದಾಗ, ಮೂರು ತಿಂಗಳಲ್ಲಿ ತೆರವುಗೊಳಿಸುವ ಭರವಸೆ ನೀಡಿದ್ದು. ಆದರೀಗ ವರ್ಷ ಕಳೆದರೂ ತೆರವುಗೊಳಿಸಿಲ್ಲ ಎಂದು ದೂರಲಾಗಿದ್ದು ವಾರದೊಳಗಾಗಿ ಅತಿಕ್ರಮಣ ತೆರವುಗೊಳಿಸಿ ಉದ್ಯಾನವನ ನಿರ್ಮಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಪ್ಪಯ್ಯ ಮುಪ್ಪಯ್ಯನಮಠ, ಎಸ್‌.ಬಿ.ನಾಗೂರ, ಅಡಿವೆಪ್ಪ ಧನ್ನೂರ, ಜಿ.ಎಚ್‌.ಚವನಬಾವಿ, ಬಿ.ಡಿ.ಆರೇಶಂಕರ, ಎಸ್ .ಡಿ.ಮಾಶ್ಯಾಳ, ಮೊಜನ ಬೆನಕೊಟಗಿ, ಶೇಖರಯ್ಯ ಗಣಾಚಾರಿ, ವೈ.ಬಿ.ಕುರಿ, ಸಿದ್ದನಗೌಡ ಗೌಡರ, ಎಸ್‌.ಎಸ್‌.ಹಗರಗುಂಡ, ಜಿ.ಬಿ.ಪಾಟೀಲ, ಎ.ಬಿ.ಮಲಗೌಡರ, ಎಸ್‌.ಬಿ.ಮೇಟಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next