Advertisement

Siruguppa ಮದುವೆಗೆ ಹೆತ್ತವರ ವಿರೋಧ: ಸಾವಿನಲ್ಲೂ ಒಂದಾದ ಪ್ರೇಮಿಗಳು!

07:08 PM Aug 02, 2024 | Team Udayavani |

ಸಿರುಗುಪ್ಪ:ಮದುವೆಗೆ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಅನ್ಯ ಜಾತಿಯ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದಲ್ಲಿ ಶುಕ್ರವಾರ ನಡೆದಿದೆ.

Advertisement

ನಗರದ ವಿಜಯನಗರ ಕಾಲೋನಿಯ ಯುವತಿ ಪವಿತ್ರಮ್ಮ (19), ಆಧೋನಿ ರಸ್ತೆಯ 24ನೇ ವಾರ್ಡ್‌ನ ರಾಜ್‌ (24) ಮೃತ ಪ್ರೇಮಿಗಳು.

ನಗರದ ಖಾಸಗಿ ಆಯಿಲ್‌ ಮಿಲ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರೂ ಕಳೆದ ಮೂರ್ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರೆಂದು ಹೇಳಲಾಗುತ್ತಿದ್ದು, ಇಬ್ಬರೂ ಅನ್ಯ ಜಾತಿಯವರಾಗಿದ್ದರಿಂದ ವಿವಾಹಕ್ಕೆ ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನುವ ಕಾರಣದಿಂದ ಇಬ್ಬರು ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗಿದೆ.

ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next