Advertisement
ಕೊಲೆ, ಸುಲಿಗೆ, ಕೊಲೆ ಯತ್ನ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳು ಪೆರೋಲ್ ಮೇಲೆ ಹೊರ ಹೋಗಿ ಜೈಲಿಗೆ ವಾಪಸ್ ಬಾರದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ.
Related Articles
ಸಜಾಬಂಧಿಗಳಿಗೆ ವರ್ಷಕ್ಕೆ 3 ತಿಂಗಳು ಪೆರೋಲ್ ಮೇಲೆ ಜೈಲಿನಿಂದ ಹೊರ ಹೋಗಲು ಅವಕಾಶವಿದೆ. ವರ್ಷಕ್ಕೆ 90ದಿನಗಳು ಹೊರಗೆ ಇರಬಹುದು. ಒಂದೇ ಬಾರಿ ಮೂರು ತಿಂಗಳು ಸಿಗದಿದ್ದರೂ ಹಂತ-ಹಂತವಾಗಿ ಪೆರೋಲ್ ರಜೆ ಪಡೆಯಬಹುದು. ಅದೇ ರೀತಿ ಪರಾರಿಯಾಗಿರುವ 11 ಮಂದಿಗೆ ಪೆರೋಲ್ ಗೆ ಕಾರಾಗೃಹ ಇಲಾಖೆ ಅನುಮತಿ ನೀಡಿತ್ತು. ಅದೇ ಅವಕಾಶವನ್ನು ದುರ್ಬಳಕೆ ಮಾಡಿಕೊಂಡ ಅವರು ಪೆರೋಲ್ ಪಡೆದು ಪರಾರಿಯಾಗಿದ್ದಾರೆ.
Advertisement
ಪರಾರಿಯಾಗಿರುವ ಕೈದಿಗಳ ಶಿಕ್ಷೆ ಅವಧಿ ಮುಗಿದರೂ ಪೆರೋಲ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹೀಗಾಗಿ ಒಂದು ವೇಳೆ ಅವರು ಸಿಕ್ಕಿಬಿದ್ದರೆ ಕಾರಾಗೃಹ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳು ರದ್ದಾಗಲಿವೆ ಎಂದು ಮೂಲಗಳು ತಿಳಿಸಿವೆ.