Advertisement

Paralympics: ಕಂಚಿನ ಓಟ ಓಡಿದ ದೀಪ್ತಿ; ಗೇಲಿಗೀಡಾಗಿದ್ದ ಕುಟುಂಬಕ್ಕೀಗ ಹೆಮ್ಮೆ

03:05 PM Sep 04, 2024 | Team Udayavani |

ಪ್ಯಾರಿಸ್‌: ಪ್ಯಾರಾಲಿಂಪಿಕ್ಸ್‌ ಮಹಿಳೆಯರ 400 ಮೀ. ಓಟದಲ್ಲಿ ಭಾರತದ ದೀಪ್ತಿ ಜೀವನ್‌ಜೀಗೆ ಕಂಚಿನ ಪದಕ ಒಲಿದಿದೆ. ಮಹಿಳಾ 400 ಮೀ. ಟಿ20 ವಿಭಾಗದಲ್ಲಿ 55.82 ಸೆಕೆಂಡ್‌ ಸಾಧನೆಯೊಂದಿಗೆ ದೀಪ್ತಿ ಕಂಚಿಗೆ ಕೊರಳೊಡ್ಡಿದ್ದಾರೆ. ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಅವರಿಗೊಲಿದ ಚೊಚ್ಚಲ ಪದಕ.

Advertisement

ಈ ವಿಭಾಗದಲ್ಲಿ ಉಕ್ರೇನ್‌ನ ಯುಲಿಯಾ ಶುಲಿಯರ್‌ (55.16), ಟರ್ಕಿಯ ಐಸೆಲ್‌ ವಂಡರ್‌ (55.23) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.

ವಿಶ್ವ ದಾಖಲೆ ನಿರ್ಮಿಸಿದ್ದ ಸಾಧಕಿ: 20 ವರ್ಷದ ತೆಲಂಗಾಣದವರಾದರ ಜೀವನ್‌ ಜೀ, ಕಳೆದ ಮೇ ತಿಂಗಳು ಜಪಾನ್‌ನ ಕೋಬೆಯಲ್ಲಿ ನಡೆದಿದ್ದ ಪ್ಯಾರಾ ಅಥ್ಲೆಟಿಕ್ಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 55.06 ಸೆಕೆಂಡ್‌ ಸಾಧನೆಯೊಂದಿಗೆ ವಿಶ್ವ ದಾಖಲೆ ಸಹಿತ ಚಿನ್ನ ಗೆದ್ದಿದ್ದರು.2022ರ ಹಾಂಗ್‌ಝೌ ಪ್ಯಾರಾ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಸಾಧನೆ ಅವರದ್ದಾಗಿದೆ.

ದೀಪ್ತಿ ಸಾಧನೆ ಮೆಟ್ಟಿಲು
2022 ಏಷ್ಯನ್‌ ಪ್ಯಾರಾಗೇಮ್ಸ್‌ ಚಿನ್ನ
2024 ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ದಾಖಲೆ (55.06 ಸೆ.) ಸಹಿತ ಚಿನ್ನ

ಪದಕ ಗೆದ್ದ ಬಡ ಕೃಷಿ ಕಾರ್ಮಿಕರ ಮಗಳು: ದೀಪ್ತಿ ಜೀವನ್‌ಜೀ ಹುಟ್ಟಿದ್ದು 2003 ತೆಲಂಗಾಣದ ವಾರಂಗಲ್‌ ಜಿಲ್ಲೆಯ ಕಲ್ಲೆದ ಹಳ್ಳಿಯಲ್ಲಿ. ಯಾಧಗಿರಿ ಜೀವನ್‌ಜೀ ಮತ್ತು ಧನಲಕ್ಷ್ಮಿ ಜೀವನ್‌ಜೀಯ ಪುತ್ರಿಯಾಗಿ ಜನಿಸಿದ ದೀಪ್ತಿಯ ಕುಟುಂಬಕ್ಕೆ ಅರ್ಧ ಎಕರೆಯಷ್ಟು ಕೃಷಿ ಭೂಮಿಯಿದೆ. ಆದರೆ ಮನೆಯಲ್ಲಿ ಬಡತನದ ಕಾರಣ ದೀಪ್ತಿ ಕುಟುಂಬ ಇತರರ ಭೂಮಿಯಲ್ಲಿ ಕೂಲಿ ಯಾಗಿ ದುಡಿದು ಜೀವನದ ಬಂಡಿ ಎಳೆಯುತ್ತಿದೆ.

Advertisement

ದೀಪ್ತಿಯ ಕ್ರೀಡಾ ಬದುಕು ಆರಂಭವಾಗಿದ್ದು ಶಾಲಾ ದಿನಗಳಲ್ಲಿ. 9ನೇ ತರಗತಿ ಕಲಿಯುತ್ತಿದ್ದಾಗ, ಬೌದ್ಧಿಕ ದೌರ್ಬಲ್ಯವಿದ್ದರೂ ಆಟೋಟದಲ್ಲಿ ಮುಂದಿರುತ್ತಿದ್ದ ಹುಡುಗಿ ದೀಪ್ತಿಯನ್ನು ಪಿಇಟಿ ಟೀಚರ್‌ ಒಬ್ಬರು ಗಮನಿಸಿ ಆಕೆಗೆ ಕ್ರೀಡೆಯ ಬಗ್ಗೆ ಉತ್ತೇಜನ ನೀಡಿದರು. ಬಳಿಕ ರಮೇಶ್‌ ಎನ್ನುವ ಭಾರತ ಜೂನಿಯರ್‌ ತಂಡದ ಕೋಚ್‌ ಗರಡಿಯಲ್ಲಿ ಪಳಗಿದ ದೀಪ್ತಿ, ಕ್ರೀಡೆಯಲ್ಲಿ ಇನ್ನೂ ಬೆಳೆದರು. ಬಡತನದ ಹುಡುಗಿಗೆ ಬ್ಯಾಡ್ಮಿಂಟನ್‌ ದಿಗ್ಗಜ ಪುಲ್ಲೇಲ ಗೋಪಿ  ಚಂದ್‌ ಅವರಿಂದಲೂ ಬೆಂಬಲ ಸಿಕ್ಕಿತು. ಹೀಗೆ ಬೆಳೆದ ದೀಪ್ತಿ ಈಗ ಪ್ಯಾರಾಲಿಂಪಿಕ್ಸ್‌ ಪದಕ ಗೆದ್ದು ಮಿನುಗುತ್ತಿದ್ದಾರೆ. ಬುದ್ಧಿಮಾಂದ್ಯ ಹುಡುಗಿಯನ್ನು ಗುರಿಯಾಗಿಸಿ ಅದೆಷ್ಟೋ ಹಳ್ಳಿಗರು ದೀಪ್ತಿ ಕುಟುಂಬವನ್ನು ಗೇಲಿ ಮಾಡಿದ್ದಿದೆ. ಆದರೆ ಅದೇ ಕುಟುಂಬವೀಗ ಹೆಮ್ಮೆ ಪಡುವಂತ ಸಾಧನೆಯನ್ನು ದೀಪ್ತಿ ಮಾಡಿದ್ದಾರೆ.

ಏನಿದು ಟಿ20 ವಿಭಾಗ?
ದೀಪ್ತಿ ಜೀವನ್‌ಜೀ ಕಂಚು ಗೆದ್ದಿರುವ ಈ ʼಟಿ20ʼ ವಿಭಾಗ ಬೌದ್ಧಿಕ ದೌರ್ಬಲ್ಯ ಉಳ್ಳ ಅಥ್ಲೀಟ್‌ಗಳಿಗಾಗಿಯೇ ಮೀಸಲಾದ ಓಟದ ವಿಭಾಗ. ಇಲ್ಲಿ ʼಟಿʼ ಎಂದರೆ ಟ್ರ್ಯಾಕ್‌ ಎಂದರೆ ಟ್ರ್ಯಾಕ್‌ ಅಥವಾ ಓಟ ಎಂದು ಅರ್ಥೈಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next