Advertisement

Paralympics 2024: ಹೈಜಂಪ್ ಟಿ47 ವಿಭಾಗದಲ್ಲಿ ಬೆಳ್ಳಿ ಗೆದ್ದ ನಿಶಾದ್ ಕುಮಾರ್

08:55 PM Sep 02, 2024 | Team Udayavani |

ಪ್ಯಾರಿಸ್: ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ಹೈಜಂಪರ್ ನಿಶಾದ್ ಕುಮಾರ್ ಬೆಳ್ಳಿ ಪದಕ ಗೆದ್ದಿದ್ದಾರೆ.

Advertisement

ಭಾರತೀಯ ಕಾಲಮಾನ  ಭಾನುವಾರ ರಾತ್ರಿ (ಸೆ1) ನಡೆದ ಸ್ಪರ್ಧೆಯಲ್ಲಿ ಅವರು 2.04 ಮೀಟರ್‌ಗಳ ಅತ್ಯುತ್ತಮ ಪ್ರಯತ್ನದೊಂದಿಗೆ ತಮ್ಮ ಎರಡನೇ ಪ್ಯಾರಾಲಿಂಪಿಕ್ ಬೆಳ್ಳಿ ಪದಕ ಗೆದ್ದಿದ್ದಾರೆ. ನಿಶಾದ್ ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಆಗ ಟೋಕಿಯೊದಲ್ಲಿ 2.06 ಮೀ ಜಿಗಿದಿದ್ದರು.

T47 ಸ್ಪರ್ಧೆ ಕೆಳಗಿನ ಮೊಣಕೈ ಅಥವಾ ಮಣಿಕಟ್ಟಿನ ಅಂಗಚ್ಛೇದನ ಅಥವಾ ದುರ್ಬಲತೆ ಹೊಂದಿರುವ ಸ್ಪರ್ಧಿಗಳಿಗೆ ಮೀಸಲಾಗಿದೆ. ಭಾರತ ಇದುವರೆಗೆ 2 ಚಿನ್ನ 4ಬೆಳ್ಳಿ ಮತ್ತು 5ಕಂಚಿನ ಪದಕಗಳನ್ನು ಗೆದ್ದು ಒಟ್ಟು 11 ಪಾದಕಗಳೊಂದಿಗೆ 22 ನೇ ಸ್ಥಾನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next